ನವದೆಹಲಿ: 2017ರಿಂದ 2021ರ ಅವಧಿಯಲ್ಲಿ ಗುಜರಾತ್‌ನಿಂದ ಯಾವೆಲ್ಲ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ಕಾರ್ಪೊರೇಟ್ ದೇಣಿಗೆ (Corporate Donation) ಹರಿದು ಬಂದಿದೆ ಎಂಬ ಕುರಿತು ಅಸೋಶಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಐದು ವರ್ಷದ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೆ ಗರಿಷ್ಠ 163.54 ಕೋಟಿ ರೂ. ಕಾರ್ಪೊರೇಟ್ ದೇಣಿಗೆ ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
”2016-17ರಿಂದ 2020-21ರವರೆಗಿನ ಹಣಕಾಸು ಅವಧಿಯಲ್ಲಿ 1519 ದೇಣಿಗೆದಾರರಿಂದ ಗರಿಷ್ಠ 163.54 ಕೋಟಿ ರೂ. ದೇಣಿಗೆ ಬಂದಿದೆ ಎಂದು ಬಿಜೆಪಿ ಘೋಷಿಸಿಕೊಂಡಿದೆ. ಬಿಜೆಪಿಗೆ 2018-19 ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಅಂದರೆ, 46.22 ಕೋಟಿ ರೂ. ಸಂದಾಯವಾಗಿದೆ,” ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.
ಇದೇ ವೇಳೆ, ಈ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ಗೆ 47 ದೇಣಿಗೆದಾರರಿಂದ 10.46 ಕೋಟಿ ರೂ. ಕಾರ್ಪೊರೇಟ್ ದೇಣಿಗೆ ಸಂದಾಯವಾಗಿದೆ. 2019-20 ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಅಂದರೆ 3.37 ಕೋಟಿ ರೂ. ದೇಣಿಗೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಗುಜರಾತ್‌ನ 1571 ಕಾರ್ಪೊರೇಟ್ ಡೋನರ್ಸ್ ಬಿಜೆಪಿ, ಕಾಂಗ್ರೆಸ್, ಆಪ್ ಮತ್ತು ಎಸ್‌ಕೆಎಂ ಪಕ್ಷಗಳಿಗೆ ಐದು ವರ್ಷದ ಅವಧಿಯಲ್ಲಿ ಒಟ್ಟು 174.06 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | EC Proposal | 20 ಸಾವಿರ ಅಲ್ಲ, 2 ಸಾವಿರ ರೂ. ದೇಣಿಗೆ ಸ್ವೀಕರಿಸಿದರೂ ಮಾಹಿತಿ ನೀಡಬೇಕು ಪಕ್ಷಗಳು!