Site icon Vistara News

MCD Elections | ಬಿಜೆಪಿಯವರು ಅತಿ ಶ್ರೀಮಂತರಾದ್ರೆ, ಆಪ್‌ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹೆಚ್ಚು!

MCD Election @ BJP, AAP, Congress

ನವದೆಹಲಿ: ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್(MCD) ಎಲೆಕ್ಷನ್ (MCD Elections) ದೇಶದ ಗಮನ ಸೆಳೆದಿದೆ. ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ(ಆಪ್) ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಮಧ್ಯೆ, ಕುತೂಹಲಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ಎಂಸಿಡಿಗೆ ಸ್ಪರ್ಧಿಸುತ್ತಿರುವ ಆಪ್ ಅಭ್ಯರ್ಥಿಗಳ ಪೈಕಿ ಶೇ.18ರಷ್ಟು ಉಮೇದುವಾರರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೆ, ಬಿಜೆಪಿಯ ಶೇ.65ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ!

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಈ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿದೆ. ಪ್ರತಿ ಚುನಾವಣೆ ವೇಳೆಯು ಎಡಿಆರ್ ಈ ರೀತಿಯ ಮಾಹಿತಿಯನ್ನು ನೀಡುತ್ತದೆ. ಡಿಸೆಂಬರ್ 4ರಂದು ಎಂಸಿಡಿಗೆ ಎಲೆಕ್ಷನ್ ನಡೆಯಲಿದೆ. ಆಯೋಗಕ್ಕೆ ಸಲ್ಲಿಕೆಯಾಗಿರುವ 1,336 ಅಭ್ಯರ್ಥಿಗಳ ಅಫಿಡವಿಟ್ ಅಧ್ಯಯನ ಕೈಗೊಂಡು ಎಡಿಆರ್ ಈ ವರದಿಯನ್ನು ಸಿದ್ಧಪಡಿಸಿದೆ.

1,366 ಅಭ್ಯರ್ಥಿಗಳ ಪೈಕಿ 139(ಶೇ.10) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಇರುವುದನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ ಆಪ್‌ ಅಭ್ಯರ್ಥಿಗಳಲ್ಲಿ ಶೇ.18ರಷ್ಟು ಮಂದಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದರೆ, ಈ ಪ್ರಮಾಣ ಬಿಜೆಪಿಯಲ್ಲಿ ಶೇ.11ರಷ್ಟಿದ್ದಾರೆ, ಕಾಂಗ್ರೆಸ್‌ನ ಶೇ.10ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಇನ್ನು ಒಟ್ಟು 556 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. 2017ರಲ್ಲಿ ಈ ಪ್ರಮಾಣ 697ರಷ್ಟಿತ್ತು. ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಕೋಟ್ಯಧಿಪತಿಗಳಾಗಿದ್ದಾರೆ. ಬಿಜೆಪಿಯ 162(ಶೇ.65) ಅಭ್ಯರ್ಥಿಗಳು ತಾವು ಕೋಟ್ಯಧೀಶ್ವರರು ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಆಪ್‌ನಲ್ಲಿ 148 (ಶೇ.60) ಮತ್ತು ಕಾಂಗ್ರೆಸ್‌ನಲ್ಲಿ 107 (ಶೇ.44) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಎಡಿಆರ್‌ ತನ್ನ ವರದಿಯಲ್ಲಿ ತಿಳಿಸಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 2.27 ಕೋಟಿ ರೂ. ಆಗಿದೆ. ಅಂದರೆ, ಎಂಸಿಡಿ ಚುನಾವಣೆಗೆ ಸ್ಪರ್ಧಿಸಿರುವವರೆಲ್ಲರೂ ಶ್ರೀಮಂತರೇ ಆಗಿದ್ದಾರೆ.

ಇದನ್ನೂ ಓದಿ | MCD Election 2022 | ಪಕ್ಷದಿಂದ ಟಿಕೆಟ್‌ ನೀಡಲಿಲ್ಲ ಎಂದು ಟವರ್‌ ಹತ್ತಿ ಕುಳಿತ ಆಪ್‌ ನಾಯಕ, ವಿಡಿಯೊ ನೋಡಿ

Exit mobile version