Site icon Vistara News

Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

Narendra Modi

I Miss A Strong Opposition, It Pains My Heart: Says PM Narendra Modi

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಗಿದಿದೆ. ಇನ್ನೂ ಮೂರು ಹಂತದ ಮತದಾನ ಬಾಕಿ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಸೇರಿ ಎಲ್ಲ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

“ನಮ್ಮ ಗುರಿ ತುಂಬ ದೊಡ್ಡದಿದೆ. ಇಷ್ಟೊಂದು ದೊಡ್ಡ ದೇಶದಲ್ಲಿ ಜನರ ಯಾರಿಗೆ ಮತ ಹಾಕಬೇಕು ಎಂಬುದನ್ನು ಸುಲಭವಾಗಿ ತೀರ್ಮಾನಿಸುತ್ತಾರೆ. ಜನರಿಗೆ ಇರುವ ಅನುಭವವು ಅವರು ಸುಲಭವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ದೇಶದ ಜನರಿಗೆ ಎಲ್ಲವೂ ಗೊತ್ತಿದೆ. ಯಾವುದೇ ಪಕ್ಷ, ವ್ಯಕ್ತಿ ಇರಲಿ, ಜನರು ಯಾರನ್ನು ಗೆಲ್ಲಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿಯೇ, ನಾವು ಮುಂದಿನ ದಿನಗಳಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದೇವೆ. ದೇಶದ ಆಡಳಿತ, ಅಭಿವೃದ್ಧಿಯ ನೀಲನಕ್ಷೆ ನಮ್ಮ ಬಳಿ ಇದೆ” ಎಂದು ಮೋದಿ ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

“ದೇಶದ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರನ್ನು ನಾನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಕೈ ಖಂಡಿತವಾಗಿಯೂ ಮೇಲಾಗಲಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿಯಾಗಿದೆ. ಹಾಗಾಗಿ, ನಾವು ಮೂರನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಏನೆಲ್ಲ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕಾರ್ಯಸೂಚಿಯನ್ನು ಹಾಕಿಕೊಂಡು ಬನ್ನಿ ಎಂಬುದಾಗಿ ನಮ್ಮ ಸಚಿವರಿಗೆ ಸೂಚಿಸಿದ್ದೇನೆ” ಎಂದು ಮೋದಿ ತಿಳಿಸಿದರು.

“ನಮ್ಮ ಮುಂದಿನ ಆಡಳಿತವು ಒಂದು ಪ್ರದೇಶ, ಕೆಲವು ಭಾಗಗಳಿಗೆ ಸೀಮಿತವಾಗಿರುವುದಿಲ್ಲ. ದೊಡ್ಡ ಗುರಿಯನ್ನು ಕ್ಷಿಪ್ರವಾಗಿ ಸಾಧಿಸುವ ಛಲವನ್ನು ನಾವು ಹೊಂದಿದ್ದೇವೆ. ಗುರಿ ದೊಡ್ಡದಾಗಿ ಇಟ್ಟುಕೊಂಡು, ಅದರ ವೇಗಕ್ಕೆ ತಕ್ಕಂತೆ ಮುನ್ನಡೆಯುವುದು ನಮ್ಮ ಉದ್ದೇಶವಾಗಿದೆ. ಗುರಿ, ಉದ್ದೇಶ ಹಾಗೂ ವೇಗದ ಜತೆ ಸಾಗುವುದು ಕೂಡ ಒಂದು ಕೌಶಲವಾಗಿದೆ. ಆ ದಿಸೆಯಲ್ಲಿ ನಾವು ಮಹತ್ವದ ಸಂಗತಿಗಳನ್ನು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದು ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

Exit mobile version