Site icon Vistara News

BJP is Like Ganga River | ಬಿಜೆಪಿ ಗಂಗೆ ಇದ್ದಂತೆ, ಪಕ್ಷ ಸೇರಿದ್ರೆ ನಿಮ್ಮೆಲ್ಲ ಪಾಪ ನಾಶ: ತ್ರಿಪುರಾ ಸಿಎಂ ಮಾಣಿಕ್ ಸಾಹಾ

Manik Saha @ Tripura CM

ಅಗರ್ತಲಾ: ಪ್ರತಿಪಕ್ಷದ ನಾಯಕರನ್ನು ಭ್ರಷ್ಟರು ಎಂದು ಬಿಜೆಪಿ ಜರಿಯುತ್ತದೆ. ಬಳಿಕ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಡುತ್ತದೆ. ಪಕ್ಷ ಸೇರಿದ ಬಳಿಕ ಅವರೆಲ್ಲ ಶುದ್ಧರಾಗುತ್ತಾರೆ ಎಂಬ ಆರೋಪವನ್ನು ಬಿಜೆಪಿಯನ್ನು ಟೀಕಿಸುವವರು ಹೇಳುತ್ತಾರೆ. ಈ ಟೀಕೆಗೆ ಪುಷ್ಟಿ ನೀಡುವಂತೆ, ಬಿಜೆಪಿಯ ನಾಯಕರೂ ಆಗಿರುವ ತ್ರಿಪುರಾ ಸಿಎಂ ಮಾಣಿಕ್ ಸಾಹಾ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಜೆಪಿ ಸೇರುವಂತೆ, ಎಡಪಕ್ಷಗಳ ನಾಯಕರಿಗೆ ಮನವಿ ಮಾಡಿರುವ ಅವರು, ”ಬಿಜೆಪಿಯು ಗಂಗಾ ನದಿ ಇದ್ದಂತೆ. ಇದರಲ್ಲಿ ಮುಳುಗಿ ಏಳುವುದರಿಂದ ನಿಮ್ಮ ಎಲ್ಲ ಪಾಪಗಳು ನಾಶವಾಗುತ್ತವೆ” ಎಂದು ಹೇಳಿದ್ದಾರೆ(BJP is Like Ganga River).

ದಕ್ಷಿಣ ತ್ರಿಪುರಾದ ಕಾಕ್ರಬನ್‌ ಎಂಬಲ್ಲಿ ಜನ್ ವಿಶ್ವಾಸ್ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಗೆಲ್ಲುವ ವಿಶ್ವಾಸವನ್ನು ಹೊಂದಿದೆ ಎಂದು ಹೇಳುತ್ತಲೇ, ಪಕ್ಷಕ್ಕೆ ಸೇರ್ಪಡೆಯಾಗುವಂತೆ ಎಡಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡರು.

ಈಗಲೂ ಸ್ಟಾಲಿನ್ ಮತ್ತು ಲೆನಿನ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರವವರಿಗೆ ನಾನು, ಬಿಜೆಪಿ ಸೇರುವಂತೆ ನಾನು ಈಗ ವಿನಂತಿಸಿಕೊಳ್ಳುತ್ತೇನೆ. ಯಾಕೆಂದರೆ, ಬಿಜೆಪಿ ಗಂಗಾ ನದಿ ಇದ್ದಂತೆ. ಗಂಗೆಯಲ್ಲಿ ನೀವು ಪವಿತ್ರ ಸ್ನಾನ ಮಾಡಿದರೆ ನಿಮ್ಮೆಲ್ಲ ಪಾಪ ಕಾರ್ಯಗಳು ನಾಶವಾಗುತ್ತವೆ ಎಂದು ಹೇಳಿದರು. ಮಾಣಿಕ್ ಸಾಹಾ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ | Modi Killed Jayalalithaa | ಜಯಲಲಿತಾ ಅವರನ್ನು ಕೊಂದಿದ್ದು ಮೋದಿ, ವಿವಾದ ಹುಟ್ಟುಹಾಕಿದ ಡಿಎಂಕೆ ಶಾಸಕ

Exit mobile version