Site icon Vistara News

Lok Sabha Election 2024: ಬಿಜೆಪಿಗೆ 400 ಸೀಟು ಗೆಲ್ಲುವ ಟಾರ್ಗೆಟ್, ಈಗಿನಿಂದಲೇ ತಯಾರಿ ಶುರು

bjp karnataka

ನವದೆಹಲಿ: ಎರಡು ಅವಧಿಯಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ(BJP), 2024ರ ಚುನಾವಣೆಯಲ್ಲಿ 400 ಲೋಕಸಭೆ ಕ್ಷೆತ್ರಗಳನ್ನು ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾಪನಗಳನ್ನು ಗೆದ್ದುಕೊಂಡಿತ್ತು. 2024ರ ಚುನಾವಣೆಯಲ್ಲಿ 400 ಸ್ಥಾನಗಳ್ನು ಗೆಲ್ಲುವುದಕ್ಕಾಗಿ ಬಿಜೆಪಿಯು (Lok Sabha Election 2024) ಈಗನಿಂದಲೇ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ.

400 ಸ್ಥಾನಗಳನ್ನು ಗೆಲ್ಲುವುದು ಅವಾಸ್ತವಿಕ ಅಲ್ಲ. ಇದು ಸಾಧಿಸಬಹುದಾದ ಟಾರ್ಗೆಟ್ ಆಗಿದೆ. 2014ರಲ್ಲಿ ಬಿಜೆಪಿ 273 ಪ್ಲಸ್ ಮಿಷನ್‌ನೊಂದಿಗೆ ಕೆಲಸ ಮಾಡಿತ್ತು ಮತ್ತು ಆ ಗುರಿಯನ್ನು ಈಡೇರಿಸಿಕೊಂಡಿತ್ತು. ಅದೇ ರೀತಿ, ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: BJP Meeting | ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ, 2024ರ ಲೋಕಸಭೆ ಎಲೆಕ್ಷನ್‌ಗೆ ಬಿಜೆಪಿ ಸಿದ್ಧತೆ

2019ರಲ್ಲಿ ಪಕ್ಷದ ನಾಯಕತ್ವವು 300 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದರು. ಪ್ರಧಾನಿ ಮೋದಿ ಅವರಂತೂ ಅಬ್‌ ಕಿ ಬಾರ್ 300 ಪಾರ್ ಎಂದು ಘೋಷಣೆ ಮೊಳಗಿಸಿದ್ದರು. ಪಕ್ಷವು 303 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಪಕ್ಷದ ತಂತ್ರಗಾರರು 2024ರಲ್ಲಿ 400 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ನೀಡಿದ್ದಾರೆ. ಆ ಮೂಲಕ ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುವ ತಯಾರಿ ಈಗಿನಿಂದಲೇ ಶುರುವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

Exit mobile version