Site icon Vistara News

Lok Sabha Election: ಉತ್ತರ ಪ್ರದೇಶದಲ್ಲಿ ಟೆಂಪಲ್ ಕಾರಿಡಾರ್; ಬಿಜೆಪಿಗೆ ಮತಗಳ ಹೆದ್ದಾರಿ!

BJP is trying to catch hindu voters with temple corridor for lok Sabha Election

ನವದೆಹಲಿ: ನರೇಂದ್ರ ಮೋದಿ ಸರ್ಕಾರವು (Narendra Modi Government) ಸರ್ವಾಂಗೀಣ ಅಭಿವೃದ್ಧಿಯ ಮಂತ್ರ ಪಠಿಸುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳು, ನೀತಿಗಳ ಜತೆಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ತನ್ನ ಟೆಂಪಲ್ ರನ್‌ ಕೈಹಿಡಿಯಲಿದೆ ಎಂದು ಬಿಜೆಪಿ ಭಾವಿಸಿದೆ. ಮೋದಿ ಸರ್ಕಾರವು ಕಾಶಿ ವಿಶ್ವನಾಥ ಕಾರಿಡಾರ್‌ನಿಂದ(Kashi Vishwanath Corridor) ಹಿಡಿದು ರಾಮ ಮಂದಿರ‌ ನಿರ್ಮಾಣದವರೆಗಿನ (Ram Mandir) ಲಾಭದ ನಿರೀಕ್ಷೆಯಲ್ಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಕೇವಲ ಕಾಶಿ ವಿಶ್ವನಾಥ ಕಾರಿಡಾರ್, ರಾಮ ಮಂದಿರ ನಿರ್ಮಾಣ ಮಾತ್ರವಲ್ಲದೇ ಉತ್ತರ ಪ್ರದೇಶದ ಮಿರ್ಜಾಪುರ, ಮಥುರಾ, ಬರೇಲಿ ಸೇರಿದಂತೆ ದೇವಾಲಯ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲವೇ ಯೋಗಿ ಸರ್ಕಾರ ನಿರ್ಮಾಣಕ್ಕೆ ಉದ್ದೇಶಿಸಿದೆ. ಈ ಮೂಲಕ ಉತ್ತರ ಪ್ರದೇಶವು ಧಾರ್ಮಿಕ ಪ್ರವಾಸೋದ್ಯಮದ ಕೇಂದ್ರವಾಗಿ ಬದಲಾಗುತ್ತಿದೆ.

ಹಿಂದೂ ದೇಗುಲಗಳ ಅಭಿವೃದ್ದಿ ಬಿಜೆಪಿ ಸರ್ಕಾರವು 2,200 ಕೋಟಿ ರೂಪಾಯಿಗಳಷ್ಟು ವೆಚ್ಚಕ್ಕೆ ಮುಂದಾಗಿರುವುದು ಭಕ್ತರಿಗೆ ಹರ್ಷವನ್ನುಂಟು ಮಾಡುವ ಸಂಗತಿಯಾಗಿದೆ. ಆದರೆ, ಬಿಜೆಪಿಯ ಈ ಟೆಂಪಲ್ ರನ್ ಹಿಂದೂ ಮತದಾರರನ್ನು ಓಲೈಸಲು ಬದಲಾದ ತಂತ್ರದ ಭಾಗವೆಂದು ಬಣ್ಣಿಸಲಾಗುತ್ತಿದೆ. ಈ ಸಂಗತಿಯ ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಬಿಜೆಪಿಯ ಈ ಟೆಂಪಲ್ ರನ್ ಕಾರ್ಯವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಮತಗಳನ್ನು ತಂದುಕೊಡುವ ಸಾಧ್ಯತೆಗಳಿವೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್‌ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸುಮಾರು 900 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಅದೇ ರೀತಿ, ಅಯೋಧ್ಯೆಯಲ್ಲಿ ಈಗ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದೆ. ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ.

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಬಂಕೆ ಬಿಹಾರಿ ಕಾರಿಡಾರ್ ದೇವಾಲಯದ ಕಾರಿಡಾರ್‌ಗಳ ಸರಣಿಯಲ್ಲಿ ಇತ್ತೀಚಿನದು. ಕೆಲಸ ಪ್ರಾರಂಭವಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದ ವಿಂಧ್ಯಾಚಲ ಕಾರಿಡಾರ್ ಕೂಡ ನಿರ್ಮಾಣ ಹಂತದಲ್ಲಿದೆ. ಸುಮಾರು 224 ಕೋಟಿ ರೂಪಾಯಿ ವೆಚ್ಚದಲ್ಲಿ ವಿಂಧ್ಯಾಚಲ ಟೆಂಪಲ್‌ಗೆ ಸಂಬಂಧಿಸಿದಂತೆ ಮಾ ವಿಂಧ್ಯವಾಸಿನಿ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಇದು ಯೋಗಿ ಅವರು ಕನಸಿನ ಪ್ರಾಜೆಕ್ಟ್ ಆಗಿದೆ.

ಉತ್ತರ ಪ್ರದೇಶದಲ್ಲಿನ ಜಾತಿ ಸಮೀಕರಣವನ್ನು ಕಡಿಮೆ ಮಾಡಿ ಹಿಂದೂ ಭಾವನೆಗಳ ಮೇಲೆ ಚುನಾವಣೆ ಗೆಲ್ಲುವುದು ಬಿಜೆಪಿಯ ರಣತಂತ್ರದ ಭಾಗವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆ ಹಿನ್ನೆಲೆಯಲ್ಲಿ ದೇಗುಲಗಳ ನವೀಕರಣ, ಕಾರಿಡಾರ್‌ಗಳಂಥ ಪ್ರಾಜೆಕ್ಟ್‌ಗಳ ಮೂಲಕ ಹಿಂದೂ ಭಾವನೆಗಳ ಲಾಭವನ್ನು ಬಿಜೆಪಿ ಪಡೆಯುತ್ತಿದೆ. ಬಿಜೆಪಿಯ ತನ್ನ ಅಭಿವೃದ್ಧಿ ಪರ ಕಾರ್ಯಕ್ರಮ, ನೀತಿಗಳ ಜತೆಗೆ ಈ ಹೊಸ ರಣತಂತ್ರವನ್ನು ಹೆಣೆಯುತ್ತಿದೆ. ಮತ್ತೊಂದೆಡೆ, ಬಿಜೆಪಿಯ ದೇಗುಲ ಕಾರಿಡಾರ್ ತಂತ್ರವು ಜಾತಿ ಗಣತಿಯಂಥ ವಿಷಯಗಳನ್ನು ಜನರಿಂದ ಡೈವರ್ಟ್ ಮಾಡುವುದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ಸುದ್ದಿಯನ್ನೂ ಓದಿ: Kashi Vishwanath Temple : ಭಕ್ತರ ಭೇಟಿಯಲ್ಲಿ ದಾಖಲೆ ನಿರ್ಮಿಸಿದ ಕಾಶಿ ವಿಶ್ವನಾಥ ಮಂದಿರ

Exit mobile version