ಲಖನೌ: ವಿಮಾನ ನಿಲ್ದಾಣ, ರಸ್ತೆ ಬದಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ನಮಾಜ್ ಮಾಡುವ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ರೈಲಿನಲ್ಲಿಯೇ ನಾಲ್ವರು ಮುಸ್ಲಿಮರು ನಮಾಜ್ (Namaz In Train) ಮಾಡಿದ್ದಾರೆ. ಇವರು ನಮಾಜ್ ಮಾಡುತ್ತಿರುವುದನ್ನು ವಿಡಿಯೊ ಮಾಡಿದ ಬಿಜೆಪಿ ಮಾಜಿ ಶಾಸಕ ದೀಪ್‌ಲಾಲ್ ಭಾರ್ತಿ, ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
“ನಾನು ಅಕ್ಟೋಬರ್ 20ರಂದು ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ನಾನೇ ಈ ವಿಡಿಯೊ ಮಾಡಿದ್ದೇನೆ. ಸ್ಲೀಪರ್ ಕೋಚ್‌ನಲ್ಲಿ ನಾಲ್ವರು ನಮಾಜ್ ಮಾಡಿದರು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ಯಾರೂ ರೈಲಿನ ಒಳಗೆ ಪ್ರವೇಶಿಸಲು, ಹೊರಗೆ ಹೋಗಲು ಆಗಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅವರು ಹೇಗೆ ನಮಾಜ್ ಮಾಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ.
ರೈಲಿನಲ್ಲಿ ನಮಾಜ್ ಮಾಡಿದ ಹಿನ್ನೆಲೆಯಲ್ಲಿ ದೀಪ್‌ಲಾಲ್ ಭಾರ್ತಿ ಅವರು ದೂರನ್ನೂ ನೀಡಿದ್ದಾರೆ. ಹಾಗೆಯೇ, ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದೆ. ಕೆಲ ವರ್ಷಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ | ಗಣೇಶ ಕೂರಿಸಲು ಬಿಡಲ್ಲ ಅಂದರೆ, ನಮಾಜ್ ಮಾಡಲು ಬಿಡಬೇಕಾ ಅನ್ನೋ ಪ್ರಶ್ನೆ ಬರುತ್ತೆ ಅಂದ ಸಿ.ಟಿ ರವಿ