Site icon Vistara News

300 ಕಿ.ಮೀ, 400 ಕಾರುಗಳ ಬೆಂಗಾವಲು; ಇದು ತೆಲುಗು ಸಿನಿಮಾ ಅಲ್ಲ, ಕಾಂಗ್ರೆಸ್‌ ಸೇರಿದ ನಾಯಕನ ದೌಲತ್ತು

Baijnath Singh Yadav Joins Congress

BJP Leader Makes Congress Comeback in 400-Car Convoy; Movie Like Dramatic Move Goes Viral

ಭೋಪಾಲ್‌: ಖಡಕ್‌ ವಿಲನ್‌, ಆತನ ಸುತ್ತ ಬಾಡಿಗಾರ್ಡ್‌ಗಳು, ಎಲ್ಲಿಯೇ ಹೋದರೂ ಹಿಂದೆ ಹತ್ತಾರು ಕಾರುಗಳ ಬೆಂಗಾವಲು ಇದ್ದೇ ಇರುತ್ತದೆ. ಬಹುತೇಕ ತೆಲುಗು ಸಿನಿಮಾಗಳ ವಿಲನ್‌ ಹೀಗೆಯೇ ಇರುತ್ತಾನೆ. ಆದರೆ, ಹೀಗೆ ಸಿನಿಮಾವನ್ನೇ ಹೋಲುವಂತೆ ಬಲ್ಡಪ್‌ ತೆಗೆದುಕೊಂಡು, ದೌಲತ್ತು ಪ್ರದರ್ಶಿಸಿ, ಮಧ್ಯಪ್ರದೇಶ ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಹೌದು, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಜತೆ ಬಿಜೆಪಿ ಸೇರ್ಪಡೆಯಾಗಿದ್ದ ವೈಜನಾಥ್‌ ಸಿಂಗ್‌ ಯಾದವ್‌ ಅವರು ಬುಧವಾರ (June 14) ಮತ್ತೆ ಕಾಂಗ್ರೆಸ್‌ ಸೇರಿದ್ದಾರೆ. ಆದರೆ, ಅವರು ಭೋಪಾಲ್‌ನಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿಗೆ 300 ಕಿ.ಮೀ ದೂರದಿಂದ, 400 ಕಾರುಗಳ ಬೆಂಗಾವಲಿನೊಂದಿಗೆ, ಎಲ್ಲ ಕಾರುಗಳು ಸೈರನ್‌ ಬಾರಿಸುತ್ತ ಬಂದು ಬಲ ಪ್ರದರ್ಶನ ಮಾಡಿದ್ದಾರೆ. ವೈಜನಾಥ್‌ ಸಿಂಗ್‌ ದೌಲತ್ತು ನೋಡಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸೇರಿದ ವೈಜನಾಥ್‌ ಸಿಂಗ್‌ ಯಾದವ್

ವೈಜನಾಥ್‌ ಸಿಂಗ್‌ ಯಾದವ್‌ ಅ ವರಿದ್ದ ಕಾರು 300 ಕಿ.ಮೀ ಸಂಚರಿಸುವವರೆಗೂ 400 ವಾಹನಗಳು ಹಿಂಬಾಲಿಸಿವೆ. ಎಲ್ಲ ವಾಹನಗಳೂ ಸೈರನ್‌ ಬಾರಿಸುತ್ತ ಬಂದಿದ್ದು, ತೆಲುಗು ಸಿನಿಮಾದ ದೃಶ್ಯವನ್ನೇ ನೆನಪಿಸುವಂತಿತ್ತು. ಇನ್ನು, ದಾರಿಯುದ್ದಕ್ಕೂ ವಾಹನಗಳು ಹಾಗೂ ಸೈರನ್‌ ಸದ್ದು ಕೇಳಿದ ಜನ ಬೇಸತ್ತುಹೋಗಿದ್ದಾರೆ. ಮಧ್ಯಪ್ರದೇಶದ ಶಿವಪುರಿಯಿಂದ ಬೆಂಗಾವಲಿನೊಂದಿಗೆ ವೈಜನಾಥ್‌ ಸಿಂಗ್‌ ಯಾದವ್‌ ಅವರು ಭೋಪಾಲ್‌ಗೆ ತೆರಳಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: Karnataka Election 2023: ಮುಂದುವರಿದ ಬಿಜೆಪಿ ಬಂಡಾಯ; ಪುಷ್ಪಾಂಜಲಿ ಗುನ್ನಾಳ್ ಸೇರಿ ಅನೇಕರು ಕಾಂಗ್ರೆಸ್‌ ಸೇರ್ಪಡೆ

ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕರಾದ ಕಮಲ್‌ ನಾಥ್‌, ದಿಗ್ವಿಜಯ್‌ ಸಿಂಗ್‌ ಸೇರಿ ಹಲವು ನಾಯಕರ ಸಮ್ಮುಖದಲ್ಲಿ ವೈಜನಾಥ್‌ ಸಿಂಗ್‌ ಯಾದವ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾದರು. ವೈಜನಾಥ್‌ ಸಿಂಗ್‌ ಯಾದವ್‌ ಸೇರಿ ಬಿಜೆಪಿಯ ಹಲವು ಮುಖಂಡರು ಕೂಡ ಕಾಂಗ್ರೆಸ್‌ ಸೇರಿದರು. ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಹಲವು ತಂತ್ರಗಳನ್ನು ರೂಪಿಸುತ್ತಿವೆ. ಹಾಗಾಗಿ, ಪಕ್ಷಾಂತರ ಪರ್ವ ಆರಂಭವಾಗಿದೆ. ಶಕ್ತಿಪ್ರದರ್ಶನಗಳು ಕೂಡ ನಡೆಯುತ್ತಿವೆ.

Exit mobile version