Site icon Vistara News

Ranjith Sreenivas: ಬಿಜೆಪಿ ನಾಯಕನ ಹತ್ಯೆ; ಪಿಎಫ್‌ಐನ 15 ಸದಸ್ಯರಿಗೆ ಗಲ್ಲು ಶಿಕ್ಷೆ!

Ranjith Sreenivas

BJP Leader Ranjith Sreenivas Murder Case: 15 PFI Members Awarded Death Sentence

ತಿರುವನಂತಪುರಂ: ಬಿಜೆಪಿ ನಾಯಕ ರಂಜಿತ್‌ ಶ್ರೀನಿವಾಸ್‌ (Ranjith Sreenivas) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (PFI) 15 ಸದಸ್ಯರಿಗೆ ಕೇರಳ ನ್ಯಾಯಾಲಯವು (Kerala) ಗಲ್ಲು ಶಿಕ್ಷೆ ವಿಧಿಸಿದೆ. ಬಿಜೆಪಿ ಒಬಿಸಿ ವಿಭಾಗದ ನಾಯಕ ರಂಜಿತ್‌ ಶ್ರೀನಿವಾಸ್‌ ಹತ್ಯೆಗೈದ 15 ಅಪರಾಧಿಗಳಿಗೆ ಗಲ್ಲು ಶಿಕ್ಷೆ (Death Sentence) ವಿಧಿಸಿ ಕೇರಳದ ಆಲಪ್ಪುಳ ಜಿಲ್ಲೆಯ ಮಾವಲಿಕರ ನ್ಯಾಯಾಲಯವು ಆದೇಶ ಹೊರಡಿಸಿದೆ.

ಒಟ್ಟು 15 ಅಪರಾಧಿಗಳಲ್ಲಿ ಎಂಟು ಅಪರಾಧಿಗಳು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಉಳಿದವರು ಕೊಲೆಗೆ ಹಲವು ರೀತಿಯಲ್ಲಿ ನೆರವು ನೀಡಿದ್ದರು. ಹಾಗಾಗಿ, ಎಲ್ಲ 15 ಜನರನ್ನು ದೋಷಿ ಎಂದು ನ್ಯಾಯಾಧೀಶೆ ವಿ.ಜಿ. ಶ್ರೀದೇವಿ ಅವರು ಆದೇಶ ನೀಡಿದರು. ನೈಸಮ್‌, ಅಮ್ಲ್‌, ಅನೂಪ್‌, ಮೊಹಮ್ಮದ್‌ ಅಸ್ಲಾಮ್‌, ಅಬ್ದುಲ್‌ ಕಲಾಂ, ಸಫರುದ್ದೀನ್‌, ಮನ್ಶಾದ್‌, ಜಸೀಬ್‌ ರಾಜಾ, ನವಾಸ್‌ ಸಮೀರ್‌, ನಾಜಿರ್‌ ಜಾಕೀರ್‌ ಹುಸೇನ್‌, ಶಾಜಿ ಪೂವತುಂಗಲ್‌ ಹಾಗೂ ಶ್ರೇನಸ್‌ ಅಶ್ರಫ್‌ ಎಂಬುವವರೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಜನವರಿ 20ರಂದೇ ನ್ಯಾಯಾಲಯವು ಇವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆದರೆ, ಇವರಿಗೆ ಶಿಕ್ಷೆಯ ಪ್ರಮಾಣ ಘೋಷಿಸಿರಲಿಲ್ಲ. ಈಗ ಎಲ್ಲ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.‌ ಖಾನ್‌ ಎಂಬುವರನ್ನು ಆಲಪ್ಪುಳ ಜಿಲ್ಲೆಯಲ್ಲಿ ಕೊಲೆ ಮಾಡಲಾಗಿತ್ತು. ಆರ್‌ಎಸ್‌ಎಸ್‌ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಕೊಲೆಗೆ ಸೇಡಿನ ಭಾಗವಾಗಿ ರಂಜಿತ್‌ ಶ್ರೀನಿವಾಸ್‌ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿತ್ತು.

ಇದನ್ನೂ ಓದಿ: Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್‌ಐ’ ಎಂದು ಬರೆದ ದುರುಳರು!

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆಗಿದ್ದ ರಂಜಿತ್‌ ಶ್ರೀನಿವಾಸ್‌ ಅವರನ್ನು 2021ರ ಡಿಸೆಂಬರ್‌ 19ರಂದು ಭೀಕರವಾಗಿ ಕೊಲೆ ಮಾಡಲಾಗಿತ್ತು. ವೆಲ್ಲಕಿನರ್‌ ಗ್ರಾಮದಲ್ಲಿರುವ ಮನೆಗೆ ದಾಳಿ ನಡೆಸಿ ಕುಟುಂಬಸ್ಥರ ಎದುರೇ ರಂಜಿತ್‌ ಶ್ರೀನಿವಾಸ್‌ ಅವರನ್ನು ಪಿಎಫ್‌ಐ ಹಾಗೂ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI) ಕಾರ್ಯಕರ್ತರು ಕೊಲೆ ಮಾಡಿದ್ದರು. ಸುಮಾರು 56 ಬಾರಿ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅವರ ದೇಹದ ತುಂಬ ಗಾಯಗಳಾಗಿದ್ದವು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version