Site icon Vistara News

ಬಿಜೆಪಿ ಸಮಾವೇಶದಲ್ಲಿ ಸಂಘರ್ಷ; ಕಾರ್ಯಕರ್ತನಿಗೆ ಗುಂಡು ಹೊಡೆದ ಮುಖಂಡ, ಚೇರ್​ಗಳು ಚೆಲ್ಲಾಪಿಲ್ಲಿ

Clashes In BJP Event

#image_title

ಬಿಹಾರದ ಮಾದೇಪುರ ಜಿಲ್ಲೆಯ ಮುರಳಿಗಂಜ್​ನ ಧರ್ಮಶಾಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ (BJP Event In Bihar) ಸಂಘರ್ಷ ಮಿತಿಮೀರಿ, ಬಿಜೆಪಿ ಮುಖಂಡನೊಬ್ಬ ತಮ್ಮ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದಾನೆ (Fired In BJP Event). ಈತ ಹಾರಿಸಿದ ಗುಂಡು ಬಿಜೆಪಿ ಕಾರ್ಯಕರ್ತನೊಬ್ಬನ (BJP Worker) ಸೊಂಟದ ಬಳಿಯೇ ಬಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಂದಹಾಗೆ ಗುಂಡು ಹಾರಿಸಿದ ಬಿಜೆಪಿ ಮುಖಂಡನ ಹೆಸರು (BJP Leader) ಪಂಕಜ್​ ಪಟೇಲ್​ ಎಂದಾಗಿದ್ದು, ಗಾಯಗೊಂಡ ಕಾರ್ಯಕರ್ತನ ಹೆಸರು ಸಂಜಯ್ ಭಗತ್ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸಭೆ ಪ್ರಾರಂಭವಾಯಿತು. ಬಿಹಾರ ಮಾಜಿ ಉಪಮುಖ್ಯಮಂತ್ರಿ ತಾರ್ ಕಿಶೋರ್ ಅವರೂ ಕೂಡ ಪಾಲ್ಗೊಳ್ಳಬೇಕಿತ್ತು. ಅವರಿನ್ನೂ ಬಂದಿರಲಿಲ್ಲ. ಆಗಲೇ ಸಭೆಯಲ್ಲಿ ಜಗಳ-ಗದ್ದಲ ಶುರುವಾಯಿತು. ಸಂಘರ್ಷ ಮಿತಿಮೀರಿದಾಗ ಪಂಕಜ್​ ಪಟೇಲ್ ತಮ್ಮ ಪಿಸ್ತೂಲ್​​ನಿಂದ ಗಾಳಿಯಲ್ಲಿ ಗುಂಡುಹಾರಿಸಲು ಪ್ರಾರಂಭ ಮಾಡಿದರು. ಅವರು ಹೀಗೆ ಒಂದೇ ಸಮ ಗುಂಡು ಹಾರಿಸುತ್ತಿದ್ದಾಗ ಅದರಲ್ಲಿ ಒಂದು ಗುಂಡು ಸಂಜಯ್ ಭಗತ್​ಗೆ ಬಿದ್ದಿದೆ. ಇನ್ನು ಅಲ್ಲಿದ್ದ ಕಾರ್ಯಕರ್ತರಲ್ಲಿ ಭಯ ಆವರಿಸಿತು. ಎಲ್ಲರೂ ಓಡಲು ಶುರು ಮಾಡಿದರು. ಕುರ್ಚಿಗಳೆಲ್ಲ ಚೆಲ್ಲಾಪಿಲ್ಲಿಯಾದವು. ಪೊಲೀಸರು ಹರಸಾಹಸಪಟ್ಟು ಪರಿಸ್ಥಿತಿ ನಿಯಂತ್ರಣ ಮಾಡಿದರು. ಈ ಸಭೆಗೂ ಮುನ್ನ ಯಾವುದೋ ವ್ಯವಹಾರ, ಹಣ ವರ್ಗಾವಣೆ ಕಾರಣಕ್ಕೆ ಪಂಕಜ್ ಪಟೇಲ್​ ಮತ್ತು ಸಂಜಯ್ ಭಗತ್​ ನಡುವೆ ವಾಗ್ವಾದ ಆಗಿತ್ತು. ಅದು ಸಭೆಯಲ್ಲೂ ಮುಂದುವರಿದಿದ್ದೇ ಅವಘಡಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.

ಇದನ್ನೂ ಓದಿ:BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್‌ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ

ಹೀಗೆ ಪಂಕಜ್ ಪಟೇಲ್ ಗುಂಡು ಹಾರಿಸುತ್ತಿದ್ದಾಗ ಒಂದಷ್ಟು ಜನರು ಓಡಿ ಹೋದರೆ, ಮತ್ತೊಂದಷ್ಟು ಮಂದಿ ಕಾರ್ಯಕರ್ತರು ಸೇರಿ ಅವನನ್ನು ಹಿಡಿದು ಥಳಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಪಂಕಜ್​​ನನ್ನು ಬಂಧಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ದೀಪಕ್​ ಯಾದವ್​ಗೂ ಹೊಡೆತ ಬಿದ್ದಿದೆ. ಪಂಕಜ್​ ಮತ್ತು ಸಂಜಯ್​ ಭಗತ್ ನಡುವಿನ ದ್ವೇಷಕ್ಕೆ ನಿಜವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version