Site icon Vistara News

ಛತ್ತೀಸ್‌ಗಢಗೆ ಇಂದೇ ಸಿಎಂ ಫೈನಲ್! ಯಾರಾಗ್ತಾರೆ ಮುಖ್ಯಮಂತ್ರಿ?

BJP likely to choose cm for Chhattisgarh chief minister

ನವದೆಹಲಿ: ಛತ್ತೀಸ್‌ಗಢ (Chhattisgarh Election result) ಭಾರೀ ಜಯ ಸಾಧಿಸಿರುವ ಭಾರತೀಯ ಜನತಾ ಪಾರ್ಟಿಯು (BJP Party) ಭಾನುವಾರ ತನ್ನ ಮುಖ್ಯಮಂತ್ರಿಯನ್ನು (Chhattisgarh Chief Minister) ಆಯ್ಕೆ ಮಾಡಲಿದೆ. ಬಿಜೆಪಿ ನಾಯಕರಾದ ಸರ್ಬಾನಂದ್ ಸೋನೋವಾಲ, ಅರ್ಜುನ ಮುಂಡಾ ಅವರು ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯಲ್ಲಿ ಪಾಲ್ಗೊಂಡು, ಮುಖ್ಯಮಂತ್ರಿ ಆಯ್ಕೆ ಸಂಬಂಧ ಅಭಿಪ್ರಾಯಗಳನ್ನು ಪಡೆಯಲಿದ್ದಾರೆ. ಈ ಮಧ್ಯೆ ಛತ್ತೀಸ್‌ಗಢ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ರಮಣ್ ಸಿಂಗ್, ಅರುಣ್ ಸಾವೋ, ಓಪಿ ಚೌಧರಿ ಮತ್ತು ರಾಮವಿಚಾರ ನೇತಮ್, ವಿಷ್ಣು ದೇವ ಸಾಯಿ ಮತ್ತು ಸರೋಜ ಪಾಂಡೆ ಅವರು ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ(assembley election 2023).

ರಾಜಸ್ಥಾನ ಮತ್ತು ಛತ್ತೀಸ್‌ಗಢದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಯಶಸ್ವಿಯಾಗಿದೆ. ಮಧ್ಯಪ್ರದೇಶವನ್ನು ಭರ್ಜರಿ ಜಯದೊಂದಿಗೆ ಉಳಿಸಿಕೊಂಡಿದೆ. ಇದು ಕೇಸರಿ ಪಕ್ಷವು ಹಿಂದಿಯ ಹೃದಯಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸುವುದಕ್ಕೆ ಕಾರಣವಾಯಿತು ಮತ್ತು 2024 ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊಡ್ಡ ಉತ್ತೇಜನವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ರಮಣ್ ಸಿಂಗ್

71 ವರ್ಷದ ರಮ್ ಸಿಂಗ್ ಅವರು ರಾಜಪೂತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವವಿದೆ. 2003ರಲ್ಲಿ ಕಾಂಗ್ರೆಸ್‌ನ ಅಜಿತ್ ಜೋಗಿ ಅವರನ್ನು ಸೋಲಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಛತ್ತೀಸ್‌ಗಢ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಕ್ಕಾಗಿ ಜನರು ಅವರನ್ನು ಚಾವ್ಲಾ ವಾಲೇ ಬಾಬಾ ಎಂದು ಕರೆಯುತ್ತಾರೆ. ಬಳಿಕ 15 ವರ್ಷಗಳ ಕಾಲ ಅವರು ಅಧಿಕಾರ ನಡೆಸಿದ್ದಾರೆ.

ಅರುಣ್ ಸಾವೋ

54 ವರ್ಷದ ಅರುಣ್ ಸಾವೋ ಅವರು ರಾಜಕೀಯ ಜೀವನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಆರಂಭಿಸಿದರು. 2019ರಲ್ಲಿ ಲೋಕಸಭೆಗೆ ಆಯ್ಕೆಯಾದರು. 2022ರಲ್ಲಿ ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ವೃತ್ತಿಯಿಂದ ಲಾಯರ್ ಆಗಿರುವ ಅರುಣ್ ಅವರು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪರವಾಗಿದ್ದ ಜಯವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಈ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರು ಹಿಂದುಳಿದ ವರ್ಗ ಸಾವೊ ಕಮ್ಯುನಿಟಿಗೆ ಸೇರಿದವರಾಗಿದ್ದಾರೆ.

ಒ ಪಿ ಚೌಧರಿ

ಮಾಜಿ ಐಎಎಸ್ ಅಧಿಕಾರಿ ಒಪಿ ಚೌಧರಿ ಹೆಸರು ಕೂಡ ಸಿಎಂ ಪೋಸ್ಟ್‌ಗೆ ಕೇಳಿ ಬರುತ್ತಿದೆ. ಇವರು 2018ರಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. “ಮಣ್ಣಿನ ಮಗ” ಎನಿಸಿರುವ ಚೌಧರಿ ಛತ್ತೀಸ್‌ಗಢದ ಗ್ರಾಮೀಣ ಪ್ರದೇಶದ ಪ್ರಭಾವಿ ಒಬಿಸಿ ಗುಂಪಿನ ಅಘಾರಿಯಾ ಜಾತಿಯಿಂದ ಬಂದವರು ಮತ್ತು ಬಿಜೆಪಿಯ ಭವಿಷ್ಯದ ನಾಯಕರಾಗಿ ಕಾಣುತ್ತಿದ್ದಾರೆ. ಪ್ರಚಾರದ ವೇಳೆ, ತಮ್ಮ ಕ್ಷೇತ್ರವಾದ ರಾಯಗಢದಲ್ಲಿ ರೋಡ್‌ಶೋ ನಡೆಸಿದ ಅಮಿತ್ ಶಾ, ಜನರು ಅವರನ್ನು ಗೆಲ್ಲಿಸಬೇಕು ಮತ್ತು ಅವರನ್ನು “ದೊಡ್ಡ ವ್ಯಕ್ತಿ” ಮಾಡುವ ಜವಾಬ್ದಾರಿ ಗೃಹ ಸಚಿವರ ಮೇಲಿದೆ ಎಂದು ಹೇಳಿದ್ದರು.

ವಿಷ್ಣು ದೇವ ಸಾಯಿ

ಬಿಜೆಪಿಯು ತನ್ನ ಮುಖ್ಯಮಂತ್ರಿಯಾಗಿ ಬುಡಕಟ್ಟು ಮುಖವನ್ನು ಆಯ್ಕೆ ಮಾಡಲು ಬಯಸಿದರೆ ಆಗ 52 ವರ್ಷದ ವಿಷ್ಣು ದೇವ ಸಾಯಿ ಅವರು ಆಯ್ಕೆಯಾಗಬಹುದು. ಮಾಜಿ ಕೇಂದ್ರ ರಾಜ್ಯ ಸಚಿವ ಮತ್ತು ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿದ್ದ 59 ವರ್ಷದ ವಿಷ್ಣು ದೇವ್ ಸಾಯಿ ಚಿರಪರಿಚಿತ ಮುಖವಾಗಿದೆ. ಸಾಯಿ ಅವರು 2018 ಮತ್ತು 2022 ರ ನಡುವೆ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು ಮತ್ತು ಉತ್ತರ ಛತ್ತೀಸ್‌ಗಢದ ಕುಂಕೂರಿಯಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಸರೋಜ ಪಾಂಡೆ

ಸರೋಜ್ ಪಾಂಡೆ ಅವರು 2008 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವೈಶಾಲಿ ನಗರದಿಂದ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಅದಕ್ಕೂ ಮೊದಲು ಅವರು ಛತ್ತೀಸ್‌ಗಢದ ದುರ್ಗ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. 2009 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, 2018ರಲ್ಲಿ ಬಿಜೆಪಿಯು ಅವರನ್ನು ರಾಜ್ಯಸಭೆಗೆ ಕಳುಹಿಸಿತು.

ಈ ಸುದ್ದಿಯನ್ನೂ ಓದಿ: Revanth Reddy: ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್‌ ರೆಡ್ಡಿ ಪ್ರಮಾಣ

Exit mobile version