Site icon Vistara News

Telangana Election: ಪಕ್ಷದಿಂದ ಸಸ್ಪೆಂಡ್ ಆದ ಶಾಸಕ ಟಿ ರಾಜಾ ಸಿಂಗ್‌ಗೆ ಬಿಜೆಪಿ ಟಿಕೆಟ್!

Telangana BJP MLA T Raja Singh

ಹೈದ್ರಾಬಾದ್: ತಮ್ಮ ಮಾತುಗಳಿಂದಲೇ ಸದಾ ವಿವಾದ ಸೃಷ್ಟಿಸುವ ಶಾಸಕ ಟಿ ರಾಜಾ ಸಿಂಗ್ (T Raja Singh) ಅವರ ಅಮಾನತನ್ನು ಭಾರತೀಯ ಜನತಾ ಪಾರ್ಟಿಯು( BJP) ವಾಪಸ್ ಪಡೆಯುವ ಸಾಧ್ಯತೆ ಇದೆ. ಅವರು ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Telangana Election) ಬಿಜೆಪಿ ಟಿಕೆಟಿನಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ. ಪ್ರವಾದಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಅವರನ್ನು 2022ರ ಆಗಸ್ಟ್‌ ತಿಂಗಳಲ್ಲಿ ಪಕ್ಷದಿಂದ ಅಮಾನತು ಮಾಡಿತ್ತು.

ತೆಲಂಗಾಣ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಭಾರತೀಯ ಜನತಾ ಪಾರ್ಟಿಯು ಅಕ್ಟೋಬರ್ 15ರಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಲಿದೆ. ಈ ಪಟ್ಟಿಯಲ್ಲಿ ಟಿ ರಾಜಾ ಸಿಂಗ್ ಅವರ ಹೆಸರು ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಟಿ ರಾಜಾ ಸಿಂಗ್ ಅವರು ಸದ್ಯ ಗೋಶಮಹಲ್ ಕ್ಷೇತ್ರದ ಶಾಸಕರಾಗಿದ್ದು, ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Telangana: ತೆಲಂಗಾಣದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಎಂ ಬ್ರೇಕ್‌ಫಾಸ್ಟ್ ಸ್ಕೀಮ್ ಜಾರಿ!

ಟಿ ರಾಜಾ ಸಿಂಗ್ ಅವರಿಗೆ ಟಿಕೆಟ್ ನೀಡಲು ತೆಲಂಗಾಣ ನಾಯಕರಾದ ಕಿಶನ್ ರೆಡ್ಡಿ, ಬಂಡಿ ಸಂಜಯ್ ಅವರು ತಮ್ಮ ಬೆಂಬಲವನ್ನು ನೀಡಿದ್ದಾರೆ. ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಟಿ ರಾಜಾ ಸಿಂಗ್ ಅವರು ಸುಮಾರು 75 ದಿನಗಳ ಕಾಲ ಜೈಲಿನಲ್ಲಿದ್ದರು.

ಗೋಶಮಹಲ್ ಕ್ಷೇತ್ರದಿಂದಲೇ ನಾನು ಮತ್ತೆ ಸ್ಪರ್ಧಿಸಲಿದ್ದೇನೆ. ನನಗೆ ಬಿಜೆಪಿಯಿಂದಲೇ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಪಕ್ಷವು ನನ್ನ ಅಮಾನತು ಹಿಂತೆಗೆದುಕೊಳ್ಳುವ ಭರವಸೆ ಇದೆ. ತೆಲಂಗಾಣದಲ್ಲಿ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version