Site icon Vistara News

BJP MLA: ಬಾಲಕಿಯನ್ನು ಅತ್ಯಾಚಾರ ಮಾಡಿದ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು!

BJP MLA gets 25 year jail for raping minor

ಲಕ್ನೋ: ಬಾಲಕಿಯನ್ನು ಅತ್ಯಾಚಾರದ (Girl Sexual Assault) ಮಾಡಿದ್ದ ಭಾರತೀಯ ಜನತಾ ಪಾರ್ಟಿಯ ಶಾಸಕನಿಗೆ (BJP MLA) ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ(Jail and Fine). ಜತೆಗೆ, ಬಿಜೆಪಿ ಶಾಸಕ ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹತೆಯನ್ನು ಎದುರಿಸಲಿದ್ದಾನೆ(Disqualification From UP Assembly). ಘಟನೆ ನಡೆದು 9 ವರ್ಷಗಳ ಬಳಿಕ ಆರೋಪಿ ಶಾಸಕನಿಗೆ ಈಗ ಶಿಕ್ಷೆಯಾಗಿದೆ. ಈ ನಡುವೆ, ದೂರು ವಾಪಸ್ ಪಡೆಯುವಂತೆ ಆರೋಪಿ ಶಾಸಕ ಸಂತ್ರಸ್ತ ಬಾಲಕಿ ಕುಟುಂಬಕ್ಕೆ ಒತ್ತಡ ಹೇರುತ್ತಿದ್ದ ಮಾತ್ರವಲ್ಲದೇ, ಜೀವ ಬದೆರಿಕೆ ಕೂಡ ಹಾಕುತ್ತಿದ್ದ!

ಸೋನಭದ್ರಾ ಜಿಲ್ಲೆಯ ದುಡ್ಡಿ ವಿಧಾನಸಭಾ ಕ್ಷೇತ್ರದ ಬುಡಕಟ್ಟು ಸಮುದಾಯದ ರಾಮದುಲಾರೆ ಗೊಂಡ್ ಅವರೇ ಶಿಕ್ಷೆಗೊಳಗಾದ ಶಾಸಕ. ನ್ಯಾಯಾಲಯವು ಆರೋಪಿ ಶಾಸಕನಿಗೆ ಶುಕ್ರವಾರ 25 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

2014ರಲ್ಲಿ ಶಾಸಕನ ಗೊಂಡನ ಪತ್ನಿ ದುಡ್ಡಿ ಕ್ಷೇತ್ರದ ಗ್ರಾಮ ಪಂಚಾಯಿತಿ ಮುಖ್ಯಸ್ಥೆಯಾಗಿದ್ದರು. ಸ್ಥಳೀಯವಾಗಿ ಬಲಶಾಲಿಯಾಗಿದ್ದ ಗೊಂಡನು ತನ್ನ ಹೆಂಡತಿಯ ಸ್ಥಾನವನ್ನು ಬಳಸಿಕೊಂಡು ರಾಜಕೀಯದಲ್ಲಿ ದೊಡ್ಡದನ್ನು ಮಾಡಲು ಪ್ರಯತ್ನಿಸುತ್ತಿದ್ದನು. ಈ ಗೊಂಡನು 2014 ನವೆಂಬರ್ 4ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ಕುರಿತು ಮೈರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಳೆದ ವರ್ಷ ದುಡ್ಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೊಂಡ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಹಾಗಾಗಿ, ಈ ಅತ್ಯಾಚಾರ ಪ್ರಕರಣವನ್ನು ಸೋನಭದ್ರಾದಲ್ಲಿರುವ ಜನಪ್ರತಿನಿಧಿಗಳ(ಸಂಸದ ಮತ್ತು ಶಾಸಕ) ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. 9 ವರ್ಷಗಳ ಬಳಿಕ ನ್ಯಾಯಾಲಯವು ಶಾಸಕ ಗೊಂಡ್ ದೋಷಿ ಎಂದು ತೀರ್ಪು ನೀಡಿ, ಶಿಕ್ಷೆಯನ್ನೂ ಪ್ರಕಟಿಸಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಸತ್ಯ ಪ್ರಕಾಶ್ ತ್ರಿಪಾಠಿ, ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ ಹಾಗೂ ಅತ್ಯಾಚಾರ ಮತ್ತು ಭಾರತೀಯ ದಂಡ ಸಂಹಿತೆಯ ಸಾಕ್ಷ್ಯ ನಾಶಪಡಿಸುವ ಸೆಕ್ಷನ್‌ಗಳಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಶಾಸಕ ರಾಮದುಲಾರೆ ಗೊಂಡ್ ದೋಷಿ ಎಂದು ತೀರ್ಪು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಎಂಪಿ-ಎಂಎಲ್‌ಎ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಹ್ಸನ್ ಉಲ್ಲಾ ಖಾನ್ ಅವರು ಶಾಸಕನಿಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬವು ತಮಗೆ ನ್ಯಾಯ ಪಡೆಯಲು ಬಹಳ ಸಮಯ ತೆಗೆದುಕೊಂಡಿತು. ಆದರೆ ತೀರ್ಪಿನಿಂದ ಸಂತೋಷವಾಗಿದೆ ಎಂದು ಹೇಳಿದೆ. ಪ್ರಕರಣವನ್ನು ಹಿಂಪಡೆಯುವಂತೆ ರಾಮದುಲಾರೆ ಗೊಂಡ್, ಒಂದು ವರ್ಷದಿಂದ ತನಗೆ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದರು ಎಂದು ಆಕೆಯ ಸಹೋದರ ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವುದರಿಂದ ಗೊಂಡ್, ಈಗ ವಿಧಾನಸಭೆಯಿಂದಲೂ ಅನರ್ಹರಾಗಲಿದ್ದಾರೆ. ಆದರೆ, ಇದರಿಂದ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 403 ಸ್ಥಾನಗಳ ಇರುವ ಉತ್ತರಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿಯ 254 ಸ್ಥಾನಗಳನ್ನು ಹೊಂದಿದೆ. ಆದರೆ, ಈ ಪ್ರಕರಣವು ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳಿಗೆ ಅಸ್ತ್ರ ನೀಡಿದೆ.

ಈ ಸುದ್ದಿಯನ್ನೂ ಓದಿ: Chitradurga News: ಹೊಳಲ್ಕೆರೆ ಬಿಜೆಪಿ ಶಾಸಕನಿಗೆ ದಲಿತ ಮುಖಂಡರ ಮುತ್ತಿಗೆ, ಹಲ್ಲೆಗೆ ಯತ್ನ

Exit mobile version