Site icon Vistara News

West Bengal: ರಾಮ ನವಮಿ ಮೆರವಣಿಗೆ ಮೇಲೆ ಕಲ್ಲು ಎಸೆತ, ಬಿಜೆಪಿ ಶಾಸಕನಿಗೆ ಗಾಯ

BJP MLA injured by stone pelting on Ram Navami procession

ನವದೆಹಲಿ: ಭಾನುವಾರ ಸಂಜೆ ಪಶ್ಚಿಮ ಬಂಗಾಳದ (West Bengal) ಹೂಗ್ಲಿ ಜಿಲ್ಲೆಯಲ್ಲಿ ನಡೆದ ರಾಮ ನವಮಿ ಮೆರವಣಿಗೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ (Ram Navami Violence) ಸ್ಥಳೀಯ ಬಿಜೆಪಿ ಶಾಸಕರಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಮೆರವಣಿಗೆಯೆ ರಿಶ್ರಾ ಮಸೀದಿ ಮುಂಭಾಗದಲ್ಲಿ ಹೋಗುತ್ತಿದ್ದಂತೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ.

ಹೂಗ್ಲಿಯ ಜಿಲ್ಲೆಯ ಪುರಶುರಾ ಬಿಜೆಪಿ ಶಾಸಕ ಬಿಮನ್ ಘೋಷ್ ಅವರು ಈ ಘಟನೆಯ ವೇಳೆ ಗಾಯಗೊಂಡಿದ್ದಾರೆ. ಕಲ್ಲುಗಳ ಎಸೆತದ ವೇಳೆ ಅವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿಲಿಪ್ ಘೋಷ್ ಅವರು ತಿಳಿಸಿದ್ದಾರೆ.

ಈ ಮೆರವಣಿಗೆ ರ್ಯಾಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲಿಪ್ ಘೋಷ್ ಅವರು ಭಾಗವಹಿಸಿದ್ದರು. ಮೆರವಣಿಗೆಗೆ ಸಂಬಂಧಿಸಿದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಮಸೀದಿಯಿಂದ ಕಲ್ಲುಗಳನ್ನು ಎಸೆಯುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮಾರ್ಚ್ 30 ಮತ್ತು 31ರಂದು ಹೌರಾ ಜಿಲ್ಲೆಯ ಶಿಬುಪುರ್ ಎಂಬಲ್ಲಿ ರಾಮನವವಿ ಮೆರವಣಿಗೆ ವೇಳೆ ಹಿಂಸಾಚಾರ ಸಂಭವಿಸಿತ್ತು. ಈ ಕುರಿತು ಪಶ್ಚಿಮ ಬಂಗಾಳ ಸರ್ಕಾರ ಸಿಐಡಿ ತನಿಖೆಯನ್ನು ಕೈಗೊಂಡಿದೆ. ಈ ತನಿಖೆ ಆರಂಭವಾದ ಮಾರನೇ ದಿನವೇ ಮತ್ತೆ ಹಿಂಸಚಾರ ಭುಗಿಲೆದ್ದಿದೆ.

ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ್ ಮಜುಮದಾರ್ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ. ತಾವು ಮಧ್ಯಪ್ರವೇಶಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಆ ಮೂಲಕ ಪರಿಸ್ಥಿತಿ ಕೈಮೀರದಂತೆ ತಡೆ ಸಾಮಾನ್ಯ ಜನರ ಜೀವ ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡಬೇಕೆಂದು ಕೋರಿದ್ದಾರೆ.

ರಾಮ ನವಮಿ ದಿನ ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ನಲ್ಲಿ ರಾಮನವಮಿ ದಿನವೇ ಭಾರಿ ಹಿಂಸಾಚಾರ (Ram Navami Violence) ನಡೆದಿದ್ದು, ಗುಜರಾತ್‌ನಲ್ಲಿ 24 ಮಂದಿಯನ್ನು ಬಂಧಿಸಲಾಗಿದೆ. ಬಂಗಾಳದಲ್ಲೂ 36 ಜನರನ್ನು ಬಂಧಿಸಲಾಗಿದೆ. ಹಾಗೆಯೇ, ನೂರಾರು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬಂಗಾಳದ ಹೌರಾದಲ್ಲಂತೂ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಗುಜರಾತ್‌ನ ವಡೋದರಾದಲ್ಲೂ ಹಿಂಸಾಚಾರ ನಡೆದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಹಾಗೆಯೇ, ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಅತ್ತ, ಮಹಾರಾಷ್ಟ್ರದ ಹಲವೆಡೆಯೂ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದವು.

ಇದನ್ನೂ ಓದಿ: BJP Leader Shot Dead: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕನಿಗೆ ಗುಂಡು ಹೊಡೆದು ಕೊಲೆ, ಕಾರಣವೇನು?

ಹೌರಾದ ಶಿಬ್‌ಪುರದಲ್ಲಿ ಶುಕ್ರವಾರವೂ ಗಲಾಟೆ ಮುಂದುವರಿದಿದ್ದು, ಪೊಲೀಸ್‌ ವಾಹನಗಳಿಗೇ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಸಲಾಗಿದೆ. ಶಿಬ್‌ಪುರವೊಂದರಲ್ಲಿಯೇ ಪೊಲೀಸರು 36 ಜನರನ್ನು ಬಂಧಿಸಿದ್ದು, ನೂರಾರು ಜನರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ರಾಮನವಮಿ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಗಲಭೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಪೊಲೀಸರಿಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಷ್ಟು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

Exit mobile version