Site icon Vistara News

Viral Video | ರಾಧಾರಮಣ ದೇಗುಲದಲ್ಲಿ ಭಜನೆ ಹಾಡಿದ ಬಿಜೆಪಿ ಸಂಸದೆ ಹೇಮಾ ಮಾಲಿನಿ; ನೃತ್ಯವಷ್ಟೇ ಅಲ್ಲ, ಗಾಯನಕ್ಕೂ ಸೈ

BJP MP Hema Malini singing bhajans In Mathura Temple

ಮಥುರಾದ ಬಿಜೆಪಿ ಸಂಸದೆ, ಖ್ಯಾತ ನಟಿ ಹೇಮಾ ಮಾಲಿನಿಯವರು ಚೆಂದನೆಯ ಭಜನೆ ಹಾಡಿರುವ ವಿಡಿಯೊ ವೈರಲ್​ ಆಗುತ್ತಿದೆ. ಹೇಮಮಾಲಿನಿಯವರು ವೃಂದಾವನದಲ್ಲಿರುವ ಶ್ರೀ ರಾಧಾರಮಣ ದೇವಸ್ಥಾನ ಜನವರಿ 14ರಂದು ಭೇಟಿ ಕೊಟ್ಟಿದ್ದರು. ಇಲ್ಲಿ ಪ್ರಾರ್ಥನೆ-ಪೂಜೆ ಸಲ್ಲಿಸಿದ ಬಳಿಕ ‘ಹರೇ ಕೃಷ್ಣ, ಹರೇ ರಾಮ’ ಭಜನೆ ಹಾಡಿದ್ದಾರೆ.

ಗುಲಾಬಿ ಬಣ್ಣದ ಸೀರೆಯುಟ್ಟು ದೇಗುಲಕ್ಕೆ ಬಂದಿದ್ದ ಹೇಮಾ ಮಾಲಿನಿ, ಅಲ್ಲಿ ಮೈಕ್​ ಮುಂದೆ ನಿಂತು ಭಜನೆ ಹೇಳಲು ಪ್ರಾರಂಭಿಸುತ್ತಿದ್ದಂತೆ, ನೆರೆದಿದ್ದ ಭಕ್ತರೂ ಕೂಡ ಅವರೊಂದಿಗೆ ಧ್ವನಿಗೂಡಿಸಿದರು. ಹೇಮಾ ಮಾಲಿನಿ ಒಳ್ಳೆಯ ನಟಿ ಹಾಗೇ, ಅದ್ಭುತ ಕ್ಲಾಸಿಕಲ್​ ಡ್ಯಾನ್ಸರ್​. ಮಥುರಾದಲ್ಲೇ ಅದೆಷ್ಟೋ ಸಮಾರಂಭಗಳಲ್ಲಿ ನೃತ್ಯ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಸಾರ್ವಜನಿಕರ ಎದುರು ಹಾಡಿದ್ದಾರೆ. ಒಂದರ ಬೆನ್ನಿಗೆ ಒಂದರಂತೆ ಸುಮಾರು 4 ಭಜನೆಗಳನ್ನು ಅವರು ಹಾಡಿದ್ದಾರೆ. ಒಟ್ಟಾರೆ ಆ ದೇಗುಲದಲ್ಲಿ ನೆರೆದಿದ್ದವರೆಲ್ಲ ಹೇಮಾ ಮಾಲಿನಿ ಭಜನೆಯಲ್ಲಿ ಮಿಂದೆದ್ದಿದ್ದಾರೆ.

ಹಾಗೇ ಹೇಮಾ ಮಾಲಿನಿಯವರು ಕೃಷ್ಣನ ಭಕ್ತೆ. ಅವರು ಮೊದಲಿನಿಂದಲೂ ಆಗಾಗ ಕೃಷ್ಣನ ದೇವಸ್ಥಾನಗಳಿಗೆ ಭೇಟಿಕೊಟ್ಟು, ಪೂಜೆ ಸಲ್ಲಿಸುತ್ತಾರೆ. ಹಾಗೇ, ಈ ದೇವಸ್ಥಾನಕ್ಕೂ ಸಾಕಷ್ಟು ಬಾರಿ ಬಂದಿದ್ದಾರೆ. ಅಷ್ಟೇ ಅಲ್ಲ, ಶ್ರೀಕೃಷ್ಣನಿಗೆ ನೃತ್ಯಸೇವೆಯನ್ನೂ ಅರ್ಪಿಸಿದ್ದಾರೆ.

ಇದನ್ನೂ ಓದಿ: ಗುಂಡಿ ಬಿದ್ದ ಮುಂಬೈ ರಸ್ತೆಗಳ ಬಗ್ಗೆ ನಟಿ ಹೇಮಾ ಮಾಲಿನಿ ಅಸಮಾಧಾನ

Exit mobile version