Site icon Vistara News

BJP National Executive | ‘ಕೈ’ ಮಾಜಿ ನಾಯಕರಿಗೆ ಮಣೆ, ಅಮರಿಂದರ್‌ ಸಿಂಗ್‌ ಈಗ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ

Captain Amerinder Singh BJP

ನವದೆಹಲಿ: ಕಾಂಗ್ರೆಸ್‌ನ ಮಾಜಿ ನಾಯಕರಿಗೆ ಬಿಜೆಪಿ ಮಣೆ ಹಾಕಿದೆ. ಪಂಜಾಬ್‌ ಲೋಕ ಕಾಂಗ್ರೆಸ್‌ (PLC)ಅನ್ನು ಬಿಜೆಪಿ ಜತೆ ವಿಲೀನಗೊಳಿಸಿದ ಬೆನ್ನಲ್ಲೇ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹಾಗೂ ಮಾಜಿ ಸಂಸದ ಸುನೀಲ್‌ ಜಾಖರ್‌ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ (BJP National Executive) ನೇಮಿಸಲಾಗಿದೆ. ಹಾಗೆಯೇ, ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ಗೆ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಜೈವೀರ್‌ ಶೆರ್ಗಿಲ್‌ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷವನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಜತೆ ವಿಲೀನಗೊಳಿಸಿದ್ದರು. ಸುನೀಲ್‌ ಜಾಖರ್‌ ಅವರು ಕಳೆದ ಮೇ ತಿಂಗಳಲ್ಲಿ ಬಿಜೆಪಿ ಸೇರಿದ್ದರು. ಜೈವೀರ್‌ ಶೆರ್ಗಿಲ್‌ ಅವರು ಕಾಂಗ್ರೆಸ್‌ನಲ್ಲಿಯೂ ರಾಷ್ಟ್ರೀಯ ವಕ್ತಾರರಾಗಿದ್ದರು. ಆದರೆ, ಇವರು ಆಗಸ್ಟ್‌ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಇವರೆಲ್ಲರಿಗೂ ಬಿಜೆಪಿ ಮಣೆ ಹಾಕಿದೆ.

ಇದನ್ನೂ ಓದಿ | Amarinder Singh | ವಿಲೀನ ಅಮರಿಂದರ್‌ ಸಿಂಗ್‌ಗೆ ಅಸ್ತ್ರ, ಬಿಜೆಪಿಗೆ ಬ್ರಹ್ಮಾಸ್ತ್ರ?

Exit mobile version