ನವದೆಹಲಿ: ಸೋಮವಾರದಿಂದ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (BJP Meeting) ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಹಲವು ನಾಯಕರು, ಬಿಜೆಪಿ ಆಡಳಿತದ 12 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ. ಅದರಲ್ಲೂ, ಸಭೆಯಲ್ಲಿ ಭಾಗಿಯಾಗುವವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಇಷ್ಟದ ತಿನಿಸನ್ನೇ ನಾಯಕರು ಹಾಗೂ ಬಿಜೆಪಿ ಪದಾಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಪದಾಧಿಕಾರಿಗಳಿಗೆ ಏನು?
ಬಿಜೆಪಿ ಕಚೇರಿಗಳ ಪದಾಧಿಕಾರಿಗಳಿಗೆ ಮೋದಿ ಅವರ ಇಷ್ಟದ ತಿನಿಸುಗಳನ್ನು ಬಡಿಸಲಾಗುತ್ತದೆ. ಮೋದಿ ಅವರ ಇಷ್ಟದ ದಾಲ್-ಕಿಚ್ಡಿ, ಸೇವ್ ಟೊಮ್ಯಾಟೊ ಕರಿ, ಮಾರ್ವಾರಿ ಪವಾಲ್, ರವೆ ಮಸಾಲೆದೋಸೆ ಸೇರಿ ಹಲವು ತಿನಿಸುಗಳನ್ನು ಬಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಬಿಜೆಪಿ ನಾಯಕರಿಗೆ ಮೈಸೂರು ಪಾಕ್
ಜನವರಿ 16ರಂದು ರಾತ್ರಿ ಊಟದ ಮೆನುವಿನಲ್ಲಿ ಮೈಸೂರ್ ಪಾಕ್ ಇದೆ. ಚಪಾತಿ, ಆಲೂ ಮೇಥಿ, ರವೆ ಮಸಾಲೆ ದೋಸೆ, ಸಾಂಬಾರ್, ದಾಲ್ ಕಿಚಡಿ, ತುಪ್ಪ, ಸೇವ್ ಟೊಮ್ಯಾಟೊ ಕರಿ ಇದೆ. ಊಟದ ಬಳಿಕ ಮಿಶ್ರಿ ಮಾವಾ, ಬಾದಾಮ್ ಹಲ್ವಾ, ಮೈಸೂರ್ ಪಾಕ್ ನೀಡಲಾಗುತ್ತದೆ.
ಕೊನೆಯ ದಿನ ಜೋಳದ ರೊಟ್ಟಿ
ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನವಾದ ಮಂಗಳವಾರವೂ ವಿವಿಧ ಬಗೆಯ ಭೋಜನ ಇರಲಿದೆ. ಜೋಳದ ರೊಡ್ಡಿ, ರಾಗಿ ಇಡ್ಲಿ, ಬಾಜ್ರಾ ಕಿಚಡಿ, ಬಾಜ್ರಾ ರೊಟ್ಟಿ, ಚನಾ ಪರೋಟ ಸೇರಿ ಹಲವು ಬಗೆಯ ತಿನಿಸುಗಳನ್ನು ಪಕ್ಷದ ನಾಯಕರು, ಕಾರ್ಯಕರ್ತರಿಗೆ ಬಡಿಸಲಾಗುತ್ತದೆ.
ಇದನ್ನೂ ಓದಿ | BJP National Executive Meeting | ಜನವರಿ 16ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಬಿಎಸ್‌ವೈ, ಬೊಮ್ಮಾಯಿ ಭಾಗಿ