Site icon Vistara News

Election : ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬಿಜೆಪಿಯಿಂದ ಸೋಶಿಯಲ್ ಮೀಡಿಯಾ ಟಾರ್ಗೆಟ್​​ ​​​​

BJP Flag

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ (Election) ಪಕ್ಷದ ಪರ ಪ್ರಚಾರ ವ್ಯಾಪ್ತಿಯನ್ನು ವಿಸ್ತರಿಸಲು ಭಾರತೀಯ ಜನತಾ ಪಕ್ಷ (BJP) ಮುದಾಗಿದೆ. ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳ (Social Media) ಮೂಲಕ ಜನರೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಂಪರ್ಕ ಸಾಧಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ 30% ಜನರನ್ನು ತಲುಪುವ ಗುರಿಯನ್ನು ಪಕ್ಷ ಹೊಂದಿದೆ. ಅದಕ್ಕಾಗಿ ಉತ್ತರ ಪ್ರದೇಶದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 15 ರವರೆಗೆ ಪಕ್ಷವು ವಿಶೇಷ ಸಾಮಾಜಿಕ ಮಾಧ್ಯಮ ಕಾರ್ಯಾಗಾರಗಳನ್ನು ನಡೆಸಲಿದೆ.

ಬಿಜೆಪಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೆಚ್ಚು ಪ್ರಭಾವ ಹೊಂದಿರುವ ವ್ಯಕ್ತಿಗಳನ್ನು ತನ್ನ ಪ್ರಚಾರ ವಿಭಾಗದಲ್ಲಿ ಸೇರಿಸಿಕೊಳ್ಳಲು ಮುಂದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ 20,000 ರಿಂದ 1 ಲಕ್ಷ ಚಂದಾದಾರರನ್ನು ಹೊಂದಿರುವವರನ್ನು ನೇಮಕ ಮಾಡಲು ಪಕ್ಷ ಪ್ರಯತ್ನಿಸುತ್ತದೆ” ಎಂದು ಹೆಸರು ಹೇಳಲಿಚ್ಛಿಸದ ಇಬ್ಬರು ಬಿಜೆಪಿ ನಾಯಕರು ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ಗುರುತಿಸಲಾದ 449 ದೊಡ್ಡ ಪ್ರಭಾವಶಾಲಿಗಳನ್ನು ಆಗಸ್ಟ್ 27 ರಂದು ಲಕ್ನೋದಲ್ಲಿ ನಡೆಯಲಿರುವ ಸಾಮಾಜಿಕ ಮಾಧ್ಯಮ ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ 10,000 ಫಾಯೋಯರ್ಸ್​ ಹೊಂದಿರುವ ಕಾರ್ಯಕರ್ತರಿಗೆ 50,000 ಫಾಲೋಯರ್ಸ್​ಗಳನ್ನು ಮಾಡುವತ್ತ ಪಕ್ಷ ಗಮನ ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ. “ದೇಶದ 30% ಜನರನ್ನು ತಲುಪುವುದು ಮತ್ತು ಒಟ್ಟು ಲೋಕಸಭಾ ಸ್ಥಾನಗಳ 30% ಕ್ಷೇತ್ರಗಳಲ್ಲಿ ಲಾಭ ಪಡೆಯಲು ಸಾಮಾಜಿಕ ಮಾಧ್ಯಮವನ್ನು ಬಳಸುವುದು ಇದರ ಉದ್ದೇಶವಾಗಿದೆ” ಎಂದು ನಾಯಕರೊಬ್ಬರು ಹೇಳಿದ್ದಾರೆ.

ಮೂರು ಹಂತದ ತಂಡ

ಸಾಮಾಜಿಕ ಮಾಧ್ಯಮ ತಂಡಗಳನ್ನು ಮೂರು ಹಂತಗಳಲ್ಲಿ ರಚಿಸಲಾಗುವುದು: ಲೋಕಸಭಾ ತಂಡಗಳು ಒಬ್ಬ ಸಂಚಾಲಕ, ಒಬ್ಬ ಸಹ-ಸಂಚಾಲಕ ಮತ್ತು ತಲಾ 10 ಸದಸ್ಯರನ್ನು ಹೊಂದಿರುತ್ತವೆ. ಅಸೆಂಬ್ಲಿ ಮತ್ತು ಮಂಡಲ ತಂಡಗಳು ಸಂಚಾಲಕರು, ಸಹ-ಸಂಚಾಲಕರು ಮತ್ತು ತಲಾ ಐದು ಸದಸ್ಯರನ್ನು ಹೊಂದಿರುತ್ತವೆ.

ಇದನ್ನೂ ಓದಿ : Monsoon Parliament Session: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಿಂದ ಸಸ್ಪೆಂಡ್!

ಪಕ್ಷದ ಸಾಮಾಜಿಕ ಮಾಧ್ಯಮದ (ಕಾನ್ಪುರ-ಬುಂದೇಲ್​ಖಂಡ್) ಪ್ರಾದೇಶಿಕ ಸಂಚಾಲಕ ಮಹೇಂದ್ರ ವಿಕ್ರಮ್ ಸಿಂಗ್, “ಪಕ್ಷವು ಈ ಬಾರಿ ಸಾಮಾಜಿಕ ಮಾಧ್ಯಮಗಳಿಗೆ ಆದ್ಯತೆ ನೀಡಿದೆ. ಪ್ರತಿ ಜಿಲ್ಲೆಯ ತಂಡವು 12 ಸದಸ್ಯರ ಸಾಮಾಜಿಕ ತಂಡವನ್ನು ಹೊಂದಿರುತ್ತದೆ. ಐಟಿ ತಂಡವು ಇಬ್ಬರು ಸದಸ್ಯರನ್ನು ಹೊಂದಿರುತ್ತದೆ. ಇದೇ ಮೊದಲ ಬಾರಿಗೆ ಪಕ್ಷವು ತನ್ನ ಐಟಿ ವಿಭಾಗಕ್ಕಿಂತ ಸಾಮಾಜಿಕ ಜಾಲತಾಣವನ್ನು ಮಾಧ್ಯಮವನ್ನು ಹೆಚ್ಚು ಅವಂಬಿಸಿದೆ.

ಪಕ್ಷದ ಗಡುವು

ಈ ಕಾರ್ಯಾಗಾರಗಳಿಗೆ ಮುಂಚಿತವಾಗಿ, ಆಗಸ್ಟ್ 20 ರೊಳಗೆ ಪ್ರತಿ ಜಿಲ್ಲೆಯಲ್ಲೂ ಸಾಮಾಜಿಕ ಜಾಲತಾಣ ತಂಡವನ್ನು ಹೊಂದಿರಬೇಕು ಎಂದು ಪಕ್ಷವು ಗಡುವು ನಿಗದಿಪಡಿಸಿದೆ. ಈ ಬಾರಿ ದೊಡ್ಡ ಬದಲಾವಣೆಯೆಂದರೆ ಜಿಲ್ಲಾ ತಂಡ (ಗಳು) ಜಿಲ್ಲಾಧ್ಯಕ್ಷರ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ ರಾಜ್ಯ ಸಾಮಾಜಿಕ ಮಾಧ್ಯಮ ತಂಡಕ್ಕೆ ವರದಿ ಮಾಡುತ್ತದೆ. ಪಕ್ಷವು ಮುಂದಿನ ತಿಂಗಳು ಎಲ್ಲಾ ಪ್ರಮುಖ ನಗರಗಳಲ್ಲಿ ಸ್ವಯಂಸೇವಕರ ಸಭೆಯನ್ನು ನಡೆಸಲಿದೆ. “ಉತ್ತರ ಪ್ರದೇಶದಲ್ಲಿ 5,000 ಸೋಶಿಯಲ್ ಮೀಡಿಯಾ ಪ್ರಭಾವಶಾಲಿಗಳು ಪಕ್ಷಕ್ಕೆ ಸೇರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಸಾಮಾಜಿಕ ಮಾಧ್ಯಮದ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಪ್ರಚಾರದ ವಿರುದ್ಧ ಹೋರಾಡಲು ಅವರು ಸಹಾಯ ಮಾಡುತ್ತಾರೆ” ಎಂದು ನಾಯಕರು ಹೇಳಿದ್ದಾರೆ.

ಈ ಪ್ರಭಾವಶಾಲಿಗಳನ್ನು ವಾರಣಾಸಿಯ ಕಾಶಿ ವಿಶ್ವನಾಥ (ಕೆವಿ) ಕಾರಿಡಾರ್ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೂ ಕರೆದೊಯ್ಯಲಾಗುವುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಸಹ-ಸಂಚಾಲಕರಾದ ಹರ್ಷ್ ದ್ವಿವೇದಿ ಮತ್ತು ಆಯುಷ್ಮಾನ್ ಸಿಂಗ್, ಪಕ್ಷವು ತನ್ನ ಸಾಮಾಜಿಕ ಮಾಧ್ಯಮ ಅಭಿಯಾನದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಸಹ ಬಳಸಲಿದೆ ಎಂದು ಹೇಳಿದರು.

Exit mobile version