Site icon Vistara News

Delhi Politics | ದೆಹಲಿ ಸರಕಾರ ಉರುಳಿಸಲು ಬಿಜೆಪಿ 800 ಕೋಟಿ ರೂ. ಮೀಸಲಿಟ್ಟಿದೆ ಎಂದ ಕೇಜ್ರಿವಾಲ್‌

Arvind

ನವದೆಹಲಿ: ನೂತನ ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆಸಲಾಗಿದೆ ಎಂಬ ಪ್ರಕರಣವು ದಿಲ್ಲಿ ರಾಜಕಾರಣದಲ್ಲಿ (Delhi Politics) ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಆಪ್‌ ಸರಕಾರವನ್ನು ಕೆಡವಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಶಾಸಕರ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಇದಾದ ಬಳಿಕ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ದೆಹಲಿ ಸರಕಾರವನ್ನು ಉರುಳಿಸಲು ಬಿಜೆಪಿ ೮೦೦ ಕೋಟಿ ರೂ. ಮೀಸಲಿಟ್ಟಿದೆ” ಎಂದು ಆರೋಪ ಮಾಡಿದರು.

“ದೆಹಲಿ ಸರಕಾರವನ್ನು ಉರುಳಿಸುವುದು ಬಿಜೆಪಿಯ ಗುರಿಯಾಗಿದೆ. ಸರಕಾರವನ್ನು ಉರುಳಿಸಲು ಬಿಜೆಪಿಗೆ ೪೦ ಶಾಸಕರು ಬೇಕು. ಆಪ್‌ನ ಒಬ್ಬ ಶಾಸಕನಿಗೆ ೨೦ ಕೋಟಿ ರೂ. ಕೊಟ್ಟು, ೪೦ ಶಾಸಕರನ್ನು ಸೆಳೆಯಲು ೮೦೦ ಕೋಟಿ ರೂ. ಮೀಸಲಿಟ್ಟಿದೆ. ಸಿಬಿಐ ದಾಳಿ ಮಾಡಿದ ಕೆಲವೇ ದಿನದಲ್ಲಿ ಮನೀಷ್‌ ಸಿಸೋಡಿಯಾ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಆಮಿಷವೊಡ್ಡಿ ಸೆಳೆಯಲು ಯತ್ನಿಸಿತು. ಆದರೆ, ಸಿಸೋಡಿಯಾ ಅವರು ಆಸೆಬುರುಕರಾಗಲಿಲ್ಲ. ಅಂತಹವರನ್ನು ಪಡೆಯಲು ನಮ್ಮ ಪಕ್ಷ ಅದೃಷ್ಟ ಮಾಡಿದೆ” ಎಂದಿದ್ದಾರೆ.

ಶಾಸಕರ ಜತೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಅವರು, “ಬಿಜೆಪಿಯ ಆಪರೇಷನ್‌ ಕಮಲ ವಿಫಲವಾಗಲಿ” ಎಂಬುದಾಗಿ ಪ್ರಾರ್ಥಿಸಲು ಗಾಂಧೀಜಿ ಸ್ಮಾರಕಕ್ಕೆ ತೆರಳಿದರು. ಎರಡು ದಿನಗಳಿಂದಲೂ ಆಮ್‌ ಆದ್ಮಿ ಪಕ್ಷವು ಆಪರೇಷನ್‌ ಕಮಲದ ಕುರಿತು ಆರೋಪ ಮಾಡುತ್ತಿದೆ. ಕೆಲವು ಶಾಸಕರ ಜತೆ ಸಂಪರ್ಕವೂ ಸಾಧ್ಯವಾಗುತ್ತಿಲ್ಲ ಎಂದು ದೂರಿದೆ.

ಇದನ್ನೂ ಓದಿ | Delhi Politics | ದೆಹಲಿಯಲ್ಲಿ ರಾಜಕೀಯ ಹೈಡ್ರಾಮಾ, ಕೇಜ್ರಿವಾಲ್‌ ಸಭೆಯಲ್ಲಿ ಭಾಗಿಯಾದ ಆಪ್‌ ಶಾಸಕರೆಷ್ಟು?

Exit mobile version