ನವದೆಹಲಿ: ಉತ್ತರ ಭಾರತದಲ್ಲಿ (North India) ಬಿಗಿ ಹಿಡಿತವನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿಗೆ(BJP Party) ದಕ್ಷಿಣ ಭಾರತದಲ್ಲಿ (South India)ಅದೇ ಪ್ರದರ್ಶನವನ್ನು ತೋರಲು ಸಾಧ್ಯವಾಗಿಲ್ಲ. ಹಾಗಾಗಿ, ಈ ಬಾರಿ ಹೆಚ್ಚಿನ ಗಮನವನ್ನು ಈ ಭಾಗದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದೆ. ದಕ್ಷಿಣ ಭಾರತದ ಐದು ರಾಜ್ಯಗಳ 129 ಲೋಕಸಭೆ ಕ್ಷೇತ್ರಗಳ ಪೈಕಿ ಈ ಬಾರಿ 40ರಿಂದ 50 ಸೀಟು ಗೆಲ್ಲುವ ರಣತಂತ್ರವನ್ನು ರೂಪಿಸಿದೆ(Lok Sabha Election 2024). 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 29 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಪೈಕಿ ಕರ್ನಾಟಕವೊಂದರಿಂದಲೇ (Karnataka) 25 ಸ್ಥಾನಗಳನ್ನು ಗೆದ್ದಿತ್ತು. ತಮಿಳು ನಾಡು(Tamil Nadu), ಕೇರಳ (Kerala) ಮತ್ತು ಆಂಧ್ರ ಪ್ರದೇಶದಲ್ಲಿ(Andhra Pradesh) ಖಾತೆ ಕೂಡ ಓಪನ್ ಮಾಡಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ.
2024ರ ಲೋಕಸಭೆಗೆ ಭಾರತೀಯ ಜನತಾ ಪಾರ್ಟಿಯು ಭಿನ್ನ ತಂತ್ರವನ್ನು ಹೆಣೆಯುತ್ತಿದೆ. ಈ ಬಾರಿ ಅತಿ ಹೆಚ್ಚು ಸಮಯ ದಕ್ಷಿಣ ಭಾರತದಲ್ಲೇ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಪ್ರಧಾನಿ ಮೋದಿ ಅವರು ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಮಾಡಿ, ಪ್ರಚಾರ ಮಾಡಲಿದ್ದಾರೆ.
ಹೊಸ ವಿಮಾನ ನಿಲ್ದಾಣ ಸೇರಿದಂತೆ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಅವರು ಮಂಗಳವಾರ ತಮಿಳುನಾಡಿಗೆ ಆಗಮಿಸಿದ್ದರು. ಬೃಹತ್ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯನ್ನು ಕೂಡ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು ಎನ್ನಲಾಗಿದೆ.
ದಕ್ಷಿಣ ಭಾರತದ ಐದು ರಾಜ್ಯಗಳ 129 ಲೋಕಸಭ ಕ್ಷೇತ್ರಗಳ ಪೈಕಿ ಸುಮಾರು 40ರಿಂದ 50 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬಹಳ ಕಡಿಮೆ ಅವಧಿಯಲ್ಲೇ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಹಾಗಾಗಿ, 2019ರಲ್ಲಿ ಗೆದ್ದಿದ್ದ 25 ಸ್ಥಾನಗಳನ್ನು ಈ ಬಾರಿಯೂ ಉಳಿಸಿಕೊಳ್ಳಲಿದ್ದೇವೆ. ನಾಲ್ಕು ಸ್ಥಾನಗಳನ್ನು ಗೆದ್ದಿರುವ ತೆಲಂಗಾಣದಲ್ಲೂ ಈ ಬಾರಿಯೂ ನಾವು ಉತ್ತಮ ಪ್ರದರ್ಶನವನ್ನು ತೋರಲಿದ್ದೇವೆ. ಹಾಗೆಯೇ, ಕೇರಳ ಮತ್ತು ತಮಿಳು ನಾಡಿನಲ್ಲೂ ಖಾತೆ ಓಪನ್ ಮಾಡಲಿದ್ದೇವೆ. ಈ ಬಾರಿ ಆಂಧ್ರ ಪ್ರದೇಶದಲ್ಲೂ ಸ್ಥಾನಗಳನ್ನು ಗೆಲ್ಲಲ್ಲಿದ್ದೇವೆ ಎಂಬುದು ಬಿಜೆಪಿ ನಾಯಕರೊಬ್ಬರ ಹೇಳಿಕೆಯಾಗಿದೆ.
ದಕ್ಷಿಣ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂಥ ದೊಡ್ಡ ನಾಯಕರು ಕೈಗೊಳ್ಳುವ ಸಾರ್ವಜನಿಕ ರಾಲಿಗಳು ಭಾರೀ ಪ್ರಭಾವ ಬೀರಲಿವೆ. ಬಿಜೆಪಿಯ ದಕ್ಷಿಣ ರಣತಂತ್ರವು ಈ ಬಾರಿ ಲಾಭ ತಂದುಕೊಡಲಿದೆ. ಪಕ್ಷವು ಮೋದಿ ಹೆಸರಿನಲ್ಲಿ ಮತಗಳನ್ನು ಕೇಳಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ತಮಿಳುನಾಡಿನಲ್ಲಿ ಭಾರತೀಯ ಜನತಾ ಪಾರ್ಟಿಯ ಏಕಾಂಗಿಯಾಗಿ ಈ ಬಾರಿ ಸ್ಪರ್ಧೆ ಮಾಡಲಿದೆ. ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಎಐಎಡಿಎಂಕೆ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡಿದೆ. ಹಾಗಾಗಿ, ಲೋಕಸಭೆ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಕೇರಳದಲ್ಲೂ ಬಿಜೆಪಿಯದ್ದು ಒಂಟಿ ಪ್ರಯಾಣವಾಗಿದೆ. ಎಡ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದುರಿಸಲು ಸಜ್ಜಾಗಿದೆ. ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.
ಬಂಡಿ ಸಂಜಯ್ ಕುಮಾರ್ ಅವರನ್ನು ತೆಲಂಗಾಣ ರಾಜ್ಯ ಬಿಜಪಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಇತ್ತೀಚೆಗೆ ನಡೆದ ವಿಧಾನಸಭೆಯಲ್ಲಿ ಬಿಜೆಪಿ ಭಾರೀ ಸೋಲು ಕಂಡಿದೆ. ಆದರೆ, ಭಾರತ್ ರಾಷ್ಟ್ರ ಸಮಿತಿಯ ಹಠಾತ್ ವೈಫಲ್ಯದಿಂದಾಗಿ ಲೋಕಸಭೆಯು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳ ಪ್ರಮುಖವಾಗಿ ಕಾದಾಡಲಿವೆ. ಹಾಗಾಗಿ, ತೆಂಲಗಾಣದಲ್ಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಗೆಲ್ಲುವ ಅವಕಾಶಗಳಿವೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.
ಈ ಸುದ್ದಿಯನ್ನೂ ಓದಿ: 30 vs 24: ಈಗ ಅಸಲಿ ಆಟ ಶುರು! ಕಾಂಗ್ರೆಸ್ ಕೂಟದಲ್ಲಿ 24 ಪಕ್ಷಗಳಿದ್ದರೆ, ಬಿಜೆಪಿಯ ಎನ್‌ಡಿಎದಲ್ಲಿ 30 ಪಾರ್ಟಿ!