Site icon Vistara News

Mallikarjun Kharge | ಆರೆಸ್ಸೆಸ್ ತಾಲಿಬಾನ್ ಇದ್ದಂತೆ, ನಮ್ಮ 6 ರಾಜ್ಯ ಸರ್ಕಾರಗಳನ್ನು ಕದ್ದ ಬಿಜೆಪಿ! ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಾಗ್ದಾಳಿ

Mallikarjun Kharge

ನವದೆಹಲಿ: ಬಿಜೆಪಿಯ ವಿರುದ್ಧ ತಮ್ಮ ಎಂದಿನ ಟೀಕಾ ಪ್ರಹಾರ ಮುಂದವರಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್‌ನ 6 ರಾಜ್ಯ ಸರ್ಕಾರಗಳನ್ನು ಕಸಿದುಕೊಂಡಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಪಂಜಾಬ್‌ನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿಯ ಅಧಿಕಾರದಾಹದಿಂದ ಬಳಲುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಅಧೀನ ತನಿಖಾ ಸಂಸ್ಥೆಗಳು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿದ ಮಲ್ಲಿಕಾರ್ಜುನ ಖರ್ಗೆ ಮತ್ತು ತಾಲಿಬಾನ್ ಮತ್ತು ಆರೆಸ್ಸೆಸ್ ಮಧ್ಯೆ ಅಂಥ ವ್ಯತ್ಯಾಸಗಳಿಲ್ಲ ಎಂದು ಹೇಳಿದರು. ಬಿಜೆಪಿ ಚುನಾವಣೆಗಳನ್ನು ಗೆಲ್ಲುವುದರ ಮೇಲೆ ಮಾತ್ರವೇ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ ಹೊರತು ಈ ದೇಶದ ಜನರ ಕಲ್ಯಾಣಕ್ಕಾಗಿ ಯಾವ ಕೆಲಸಗಳನ್ನೂ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ನಮ್ಮ ನಾಯಕರನ್ನು ಬೆದರಿಸಿ ಕರೆದೊಯ್ದಿದ್ದಾರೆ. ಅವರು (ಬಿಜೆಪಿ) ನಮ್ಮ ಆರು ಸರ್ಕಾರಗಳನ್ನು ಕದ್ದಿದ್ದಾರೆ. ನಮಗೆ ಜನಾದೇಶ ನೀಡಿದ ಆರು ರಾಜ್ಯಗಳ ಮತದಾರರಿಗೆ ಅವಮಾನ ಮಾಡಿದ್ದಾರೆ. ಅವರ ಬಳಿ ಅಧಿಕಾರವಿದೆ ಮತ್ತು ಜನರು ಕಾಂಗ್ರೆಸ್ ಅನ್ನು ಆರಿಸಿ ತಂದಿದ್ದರಿಂದ ಅದನ್ನು ಹಾಳು ಮಾಡಿ ಶಾಸಕರನ್ನು ಕರೆದುಕೊಂಡು ಹೋದರು. ಕೆಲವರಿಗೆ ಹಣ ಕೊಟ್ಟರು, ಕೆಲವರಿಗೆ ದುರಾಸೆ ತೋರಿಸಿದರು, ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ಕೇಂದ್ರ ವಿಚಕ್ಷಣಾ ಆಯೋಗಗಳನ್ನು ಬಳಸಿಕೊಂಡರು. ಬಿಜೆಪಿಯನ್ನು “ಕಳ್ಳರು” ಅಥವಾ “ದರೋಡೆಕೋರರು” ಎಂದು ಕರೆಯಬೇಕೇ ಎಂದು ನನಗೆ ಖಚಿತವಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Karnataka Election : ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂದು ಬಿಜೆಪಿ ಮೀಸಲಾತಿ ತಪ್ಪಿಸಿದೆ: ಮಲ್ಲಿಕಾರ್ಜುನ ಖರ್ಗೆ

Exit mobile version