Site icon Vistara News

Gujarat Election | 7 ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ ಬಿಜೆಪಿ

BJP and Gujarat Election

ನವದೆಹಲಿ: ವಿಧಾನಸಭೆ ಚುನಾವಣೆಗೆ (Gujarat Election) ಇನ್ನೆರಡು ವಾರ ಇರುವಂತೆಯೇ ಬಿಜೆಪಿ ತನ್ನ ಪ್ರಮುಖ ಏಳು ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ. ಪಕ್ಷದ ಆದೇಶದ ಹೊರತಾಗಿಯೂ ಅಮಾನತುಗೊಂಡ ನಾಯಕರು ತಮ್ಮ ನಾಮಪತ್ರ ಸಲ್ಲಿಸಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ಬಿಜೆಪಿ ಉಗ್ರ ಕ್ರಮ ಕೈಗೊಂಡಿದೆ.

ಟಿಕೆಟ್ ನಿಕಾರಿಸಿದ ಹಿನ್ನೆಲೆಯಲ್ಲಿ ಬಂಡೆದಿದ್ದ ಈ ಏಳು ನಾಯಕರು ಪೈಕಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ ಮತ್ತು ಒಬ್ಬರು ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಡಿಸೆಂಬರ್ 1ರಂದು ನಡೆಯಲಿರುವ ಮೊದಲ ಹಂತದ ಮತದಾನ ಪ್ರದೇಶಗಳಲ್ಲಿ ಈ ಏಳೂ ಜನರ ಕ್ಷೇತ್ರಗಳಿವೆ. ಬಿಜೆಪಿಯ ಮಾಜಿ ಶಾಸಕರಾದ, ಬಿಜೆಪಿಯ ಬುಡಕಟ್ಟು ಸಮುದಾಯದ ಮುಖವಾಗಿರುವ ಹರ್ಷದ ವಾಸವಾ, ಅರವಿಂದ್ ಲಾದಾನಿ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.

ಅಮಾನತಾದ ಮತ್ತೊಬ್ಬ ನಾಯಕ ಛತ್ರಸಿಂಹ ಗುಂಜಾರಿಯಾ ಅವರು ಸುರೇಂದ್ರನಗರ ಜಿಲ್ಲಾ ಪಂಚಾಯಿತಿ ಪ್ರತಿನಿಧಿಯಾಗಿದ್ದಾರೆ. ಧ್ರಂಗಾದ್ರಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಪರ್ದಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇತನ್ ಪಟೇಲ್, ರಾಜಕೋಟ್ ರೂರಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಭರತ್ ಚವ್ಡಾ ಕೂಡ ಅಮಾನತುಗೊಂಡವರ ಪೈಕಿ ಇಬ್ಬರು ನಾಯಕರು. ಉದಯ ಶಾ, ಗಿರ್ ಸೋಮನಾಥ್ ಅವರು ಬಿಜೆಪಿ ಅಮಾನತು ಮಾಡಿರುವ ಇತರ ನಾಯಕರು.

ಇದನ್ನೂ ಓದಿ | Gujarat Cabinet | ಗುಜರಾತ್‌ನಲ್ಲಿ ಇಬ್ಬರು ಸಚಿವರ ಖಾತೆ ವಾಪಸ್, ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಬಿಕ್ಕಟ್ಟು?

Exit mobile version