ಜೈಪುರ: ಕಾಂಗ್ರೆಸ್‌ನ (Congress Party) ಅಶೋಕ್ ಗೆಹ್ಲೋಟ್ (Ashok Geholt) ಸರ್ಕಾರವನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿರುವ ಭಾರತೀಯ ಜನತಾ ಪಾರ್ಟಿಯು(BJP Party), ವಿಧಾನಸಭೆ ಚುನಾವಣೆಯಲ್ಲಿ (election Result 2023) ಗೆದ್ದಿರುವ ಸಂಸತ್ ಸದಸ್ಯರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಒಟ್ಟು ಏಳು ಸಂಸದರನ್ನು (Member of Parliament) ಬಿಜೆಪಿ ಕಣಕ್ಕಿಳಿಸಿತ್ತು, ಈ ಪೈಕಿ ನಾಲ್ವರು ಗೆದ್ದಿದ್ದರು. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ (CM Candidate) ಪ್ರಕ್ರಿಯೆ ಆರಂಭಿಸಿರುವ ಬಿಜೆಪಿ, ರಾಜಸಮಂದ್ ಸಂಸದೆ ದಿಯಾ ಕುಮಾರಿ, ಜೈಪುರ ಗ್ರಾಮೀಣ ಸಂಸದ ರಾಜವರ್ಧನ್ ರಾಥೋಡ್ ಮತ್ತು ಅಲ್ವಾರ್ ಕ್ಷೇತ್ರದ ಸಂಸದ ಬಾಬಾ ಬಾಲಕನಾಥ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ.
ಗೆಲ್ಲುವ ಸಂಸದರು ರಾಜ್ಯ ರಾಜಕೀಯದ ಮೇಲೆ ಕೇಂದ್ರೀಕರಿಸಬೇಕೆಂದು ಬಿಜೆಪಿ ಉದ್ದೇಶಿಸಿದೆ. ಮೂಲಗಳ ಪ್ರಕಾರ, ಈ ನಾಯಕರಿಗೆ ಪಕ್ಷವು ಉನ್ನತ ಜವಾಬ್ದಾರಿಗಳನ್ನು ಹೊರಿಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ, ಗೆದ್ದಿರುವ ನಾಲ್ಕು ಸಂಸದರ ಪೈಕಿ ಮೂವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ ಎಂದು ಹೇಳಬಹುದು.
ಆದರೆ, ಕೆಲವು ಮೂಲಗಳ ಪ್ರಕಾರ ಸ್ವಲ್ಪ ದಿನದ ಮಟ್ಟಿಗೆ ವಸುಂಧರಾ ರಾಜೇ ಅವರೇ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಇನ್ನುಳಿದವರಿಗೆ ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಪ್ರಮುಖ ಸಚಿವ ಸ್ಥಾನಗಳು ದೊರೆಯುವ ನಿರೀಕ್ಷೆಗಳಿವೆ. ಪ್ರೌಢ ಶಿಕ್ಷಣ, ಸಾರಿಗೆಯಂಥ ಪ್ರಭಾವಿ ಖಾತೆಗಳನ್ನು ನೀಡಲಾಗುತ್ತಿದೆ. ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ರಾಜಸ್ಥಾನ ಕೈಗೊಂಡ ಶಿಕ್ಷಕರಿಗೆ ರಾಜಸ್ಥಾನ ಅರ್ಹತಾ ಪರೀಕ್ಷೆ(REET)ಯು ಗೆಹ್ಲೋಟ್ ಅವಧಿಯಲ್ಲಿ ಸೋರಿಕೆಯಾದ 16 ಪೇಪರ್‌ಗಳಲ್ಲಿ ಒಂದಾಗಿದೆ. ಇದೇ ರೀತಿಯಲ್ಲಿ ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಉದಾಹರಣೆಯಾಗಿ ನೀಡಬಹುದು. ಈ ರೀತಿಯ ಕೆಲವು ಇಲಾಖೆಗಳನ್ನು ಪ್ರಭಾವಿಗಳಿಗೆ ನೀಡುವ ಸಾಧ್ಯತೆಗಳಿವೆ.
ಒಂದೊಮ್ಮೆ ವಸುಂಧರಾ ರಾಜೇ ಅವರೇ ಮುಖ್ಯಮಂತ್ರಿಯಾದರೆ ಸ್ವತಂತ್ರ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಮಾತನ್ನು ಗೆದ್ದ ನಾಲ್ವರು ಸಂಸದರ ಬಗ್ಗೆ ಅಲ್ಲ. ಅಲ್ಲದೇ ಸೋತ ಮೂವರ ಬಗ್ಗೆ ಪಕ್ಷ ಏನು ಯೋಜನೆ ಹಾಕಿಕೊಂಡಿದೆ ಎಂಬುದು ಕುತೂಹಲ ಮೂಡಿದೆ.
ಜುಂಜುನು ಸಂಸದ ನರೇಂದ್ರ ಕುಮಾರ್ ಅವರು ಮಾಂಡವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೀಟಾ ಚೌಧರಿ ವಿರುದ್ಧ 18,717 ಮತಗಳ ಅಂತರದಿಂದ ಸೋತಿದ್ದಾರೆ. ಜಲೋರ್ ಸಂಸದ ದೇವ್‌ಜಿ ಪಟೇಲ್ ಸಂಚೋರ್‌ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಜೀವ ರಾಮ್ ಚೌಧರಿ ವಿರುದ್ಧ ದಯನೀಯವಾಗಿ ಪರಾಭವಗೊಂಡಿದ್ದಾರೆ. ಸ್ಪರ್ಧಿಸಿ ಸೋತ ಬಿಜೆಪಿ ಸಂಸದರ ಪೈಕಿ ಅತಿ ಹೀನಾಯವಾಗಿ ಸೋತವರು ಅಜ್ಮೀರ್ ಸಂಸದ ಭಗೀರಥ ಚೌಧರಿ. ಕಿಶನ್‌ಗಢ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಚೌಧರಿ ಅವರು ಭರ್ಜರಿಯಾಗಿ ಗೆದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: ರಾಜಸ್ಥಾನ, ಛತ್ತೀಸ್‌ಗಢ ಸೋಲಿನೊಂದಿಗೆ 3 ರಾಜ್ಯಗಳಿಗೆ ಸೀಮಿತವಾದ ಕಾಂಗ್ರೆಸ್!