ನವದೆಹಲಿ: ಭಾರತೀಯ ರಾಜಕೀಯ ಪಕ್ಷಗಳ ಪೈಕಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಹೆಚ್ಚು ಪ್ರಭಾವಶಾಲಿಯಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ(@BJP4India) ಈಗ ಟ್ವಿಟರ್‌ನಲ್ಲಿ 2 ಕೋಟಿ ಫಾಲೋವರ್ಸ್ ಗುರಿ ದಾಟಿದೆ! ಬಿಜೆಪಿ ಟ್ವಿಟರ್ ಖಾತೆಯನ್ನು 2 ಕೋಟಿಗೂ ಅಧಿಕ ಜನ ಫಾಲೋ ಮಾಡಿದ್ರೆ, ಈ ಟ್ವಿಟರ್ ಹ್ಯಾಂಡಲ್ ಕೇವಲ ಮೂರು ಖಾತೆಗಳನ್ನು ಫಾಲೋ ಮಾಡುತ್ತದೆ! ಈ ವಿಷಯವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ತ ಅಮಿತ್ ಮಾಳವೀಯಾ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ(BJP Twitter Handle).
ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಕಾರ್ಯಕ್ರಮಗಳ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿರುವ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, “ಇಲ್ಲಿ ನಾವು ಏಕತೆ, ಸಾಮರಸ್ಯ, ಶಕ್ತಿ ಮತ್ತು ಬೆಂಬಲದ ಹೊಸ ಅಧ್ಯಾಯವನ್ನು ಬರೆಯುತ್ತೇವೆ! ಧನ್ಯವಾದಗಳು ಮತ್ತು ಅಭಿನಂದನೆಗಳು! ನಾವು 20 ಮಿಲಿಯನ್ ಜನರು ಒಂದಾಗಿದ್ದೇವೆ,” ಎಂದು ಬರೆಯಲಾಗಿದೆ.
ಅಮಿತ್ ಮಾಳವೀಯಾ ಅವರ ಟ್ವೀಟ್…
ಇದನ್ನೂ ಓದಿ: 2021-22ರ ಸಾಲಿನಲ್ಲಿ ಬಿಜೆಪಿಗೆ 1917.12 ಕೋಟಿ ರೂ. ಆದಾಯ! ಕಾಂಗ್ರೆಸ್‌ಗೆ ಎಷ್ಟು?
ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿರುವ ಅಮಿತ ಮಾಳವೀಯಾ ಅವರು ಟ್ವೀಟ್ ಮಾಡಿ, ನಾವು ಮತ್ತೊಂದು ಅದ್ಭುತವನ್ನು ಸಾಧಿಸಿದ್ದೇವೆ. ಬಿಜೆಪಿ ಈಗ 2 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಪಕ್ಷ ಎಂಬ ಹೆಗ್ಗಳಿಗೆ ಬಿಜೆಪಿಗೆ ಅಂಟಿದೆ.
ಅಂದ ಹಾಗೆ, 2 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಬಿಜೆಪಿ ಟ್ವಿಟರ್ ಖಾತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಟ್ವಿಟರ್ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದೆ.