Site icon Vistara News

Lok Sabha Election: ಬಿಜೆಪಿಗೆ 400 ಸೀಟು ಪಕ್ಕಾ… ಆದರೆ? ಕಾಂಗ್ರೆಸ್ ನಾಯಕನ ಅಚ್ಚರಿ ಹೇಳಿಕೆ!

Sam Pitroda

Sam Pitroda Steps Down As Chairman Of Indian Overseas Congress Amid Row Over Racist Remark

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಭಾರತೀಯ ಜನತಾ ಪಾರ್ಟಿಯು (BJP Party) 400ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ (Congress Leader Sam Pitroda) ಅವರು ಹೇಳಿದ್ದಾರೆ. ಆದರೆ, ಅವರು ತಮ್ಮ ಈ ಲೆಕ್ಕಾಚಾರಕ್ಕೆ ಬೇರೆಯದ್ದೆ ಕಾರಣವನ್ನು ನೀಡಿದ್ದಾರೆ. ಒಂದು ವೇಳೆ, ವಿದ್ಯುನ್ಮಾನ ಮತಯಂತ್ರಗಳ (EVMs) ಬಗೆಗಿನ ಅನುಮಾನವನ್ನು ಬಗೆಹರಿಸದಿದ್ದರೆ ಅಥವಾ ಅವುಗಳನ್ನು ಸರಿಪಡಿಸದಿದ್ದರೆ ಬಿಜೆಪಿ ಆರಾಮಾಗಿ 400 ಸೀಟುಗಳನ್ನು ಗೆಲ್ಲಲಿದೆ ಎಂದು ಸ್ಯಾಮ್ ಪಿತ್ರೋಡಾ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಅವರು, ರಾಮ ಮಂದಿರ (Ram Mandir) ಕುರಿತಾಗಿ ತಾವು ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಟೆಲಿಕಾಂ ಕ್ರಾಂತಿಗೆ ಕಾರಣರಾದ ತಂತ್ರಜ್ಞರಾದ ಪಿತ್ರೋಡಾ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮದನ್ ಬಿ ಲೋಕುರ್ ಅವರ ನೇತೃತ್ವದ ಸರ್ಕಾರೇತರ ಸಂಸ್ಥೆ ನೀಡಿರುವ ವಿವಿಪ್ಯಾಟ್ ವಿನ್ಯಾಸವನ್ನು ಬದಲಿಸುವ ಶಿಫಾರಸನ್ನು ಜಾರಿಗೆ ತರಬೇಕು. ಆಗ ವಿದ್ಯುನ್ಮಾನ ಮತಯಂತ್ರಗಳ ಮೇಲೆ ನಂಬಿಕೆ ಬರಬಹುದು ಎಂದು ಅವರು ಹೇಳಿದ್ದಾರೆ.

“ಚುನಾವಣಾ ಆಯೋಗದ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೆ. ಆದರೆ ಅದು ಆಗದಿದ್ದಾಗ ನಾನು ಮಾತನಾಡಲು ನಿರ್ಧರಿಸಿದ್ದೇನೆ. ಐದು ರಾಜ್ಯಗಳ ಚುನಾವಣೆಗಳು ಮುಗಿದು 2024 ರ ಚುನಾವಣೆ ಬರುತ್ತಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಇವಿಎಂಗಳ ಮೇಲೆ ನಂಬಿಕೆಯ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಈ ವರದಿಯನ್ನು ಆಧರಿಸಿ ಚುನಾವಣಾ ಆಯೋಗವು ವಿಶ್ವಾಸವನ್ನು ಪುನರ್‌ ನಿರ್ಮಿಸಲು ಸ್ಪಂದಿಸಬೇಕು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಹೇಳಿದರು.

ಭಾರತೀಯ ಜನತಾ ಪಾರ್ಟಿಯು ಈ ಬಾರಿ 400 ಅಧಿಕ ಸೀಟುಗಳನ್ನು ಗೆಲ್ಲುವುದಕ್ಕೆ ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಧ್ಯವಿದೆ. ಒಂದು ವೇಳೆ ಇವಿಎಂ ದೋಷಗಳನ್ನು ಸರಿಪಡಿಸದಿದ್ದೆರ ಸಾಧ್ಯವಿದೆ ಎಂದು ಹೇಳಿದರು.

ಅವರು 400 ಸೀಟು ಗೆಲ್ಲಬೇಕು ಎನಿಸಿದರೆ ಗೆಲ್ಲಬಹುದು. ಅದನ್ನು ದೇಶ ನಿರ್ಧರಿಸುತ್ತದೆ. ಆದರೆ, ಮುಂದಿನ ಚುನಾವಣೆಯ ಹೊತ್ತಿಗೆ ಇವಿಎಂಗಳನ್ನು ಸರಿಪಡಿಸಬೇಕು. ಒಂದೊಮ್ಮೆ ಸರಿಪಡಿಸದಿದ್ದರೆ ಬಿಜೆಪಿಯು 400ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಪ್ರಯತ್ನ ನಿಜವಾಗಬಹುದು ಎಂದು ಸ್ಯಾಮ್ ಪಿತ್ರೋಡಾ ಅವರು ಹೇಳಿದರು.

2014ರಿಂದ ಭಾರತದಲ್ಲಿ ಅತ್ಯಂತ ಯಶಸ್ವಿ ರಾಜಕೀಯ ಪಕ್ಷವಾಗಿರುವ ಬಿಜೆಪಿ ಪರವಾಗಿ ಇವಿಎಂಗಳನ್ನು ತಿರುಚಲಾಗಿದೆ ಎಂಬ ಪ್ರತಿಪಕ್ಷಗಳ ಆತಂಕವನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು. ಎಲ್ಲಾ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳನ್ನು ಮತದಾರರಿಗೆ ನೀಡಬೇಕು ಎಂದು ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಒತ್ತಾಯಿಸುತ್ತವೆ.

2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 350 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಮೈತ್ರಿಕೂಟವು 2024 ರಲ್ಲಿ 400 ಅಂಕಗಳನ್ನು ದಾಟುವ ಗುರಿಯನ್ನು ಹೊಂದಿದೆ. ಇದು ಇತ್ತೀಚೆಗೆ ಮೂರು ಹಿಂದಿ ಹೃದಯಭಾಗದ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದೆ.

ಈ ಸುದ್ದಿಯನ್ನೂ ಓದಿ: Evm Machine : ಡೆಮಾಲಿಷನ್‌ ವೇಳೆ ಎಂಜಿನಿಯರ್ ಮನೆಯಲ್ಲಿ ಇವಿಎಂ ಯೂನಿಟ್‌ಗಳು ಪತ್ತೆ!

Exit mobile version