Site icon Vistara News

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

Boat Capsize

Boat capsizes in Jhelum River in Jammu Kashmir, some people feared missing

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ಜೇಲಂ ನದಿಯಲ್ಲಿ (Jhelum River) ಮಂಗಳವಾರ (ಏಪ್ರಿಲ್‌ 16) ಬೆಳಗ್ಗೆ ದೋಣಿಯೊಂದು ಮುಳುಗಿದ್ದು (Boat Capsize), ನಾಲ್ವರು ಶಾಲಾ ಮಕ್ಕಳು ಸೇರಿ ಹಲವರು ಮಂದಿ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಮಕ್ಕಳು ಸೇರಿ ಹಲವರು ಮಂದಿ ಸಂಚರಿಸುತ್ತಿದ್ದರು. ಇದೇ ವೇಳೆ ದೋಣಿಯು ಮಗುಚಿದೆ. ಹಲವು ಮಂದಿ ನೀರಿನಲ್ಲಿ ಮುಳುಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ನಾಲ್ವರು ಶಾಲಾ ಮಕ್ಕಳು ಮೃತಪಟ್ಟರೆ, ಮೂವರು ನಾಪತ್ತೆಯಾಗಿದ್ದಾರೆ. ಇದುವರೆಗೆ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜೇಲಂ ನದಿಯು ಉಕ್ಕಿ ಹರಿಯುತ್ತಿದೆ. ಶಾಲಾ ಮಕ್ಕಳು ಸೇರಿ ಹಲವರು ಇದ್ದ ದೋಣಿಯು ತುಂಬಿದ ನದಿಯಲ್ಲಿ ಶ್ರೀನಗರದ ಗಂಡ್ಬಾಲ್‌ನಿಂದ ಬಟ್ವಾರದವರೆಗೆ ಚಲಿಸುತ್ತಿತ್ತು. ಇದೇ ವೇಳೆ ಹಡಗು ಮಗುಚಿದೆ.

ಅಗತ್ಯಕ್ಕಿಂತ ಹೆಚ್ಚಿನ ಜನ ದೋಣಿಯಲ್ಲಿದ್ದ ಕಾರಣ ದುರಂತ ಸಂಭವಿಸಿದೆಯೋ, ನೀರಿನ ಸೆಳವಿಗೆ ಸಿಲುಕಿ ಮಗುಚಿದೆಯೋ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣೆಗೆ ಸ್ಥಳೀಯರೂ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

Exit mobile version