Site icon Vistara News

boat capsizes: ಬೋಟ್ ಮಗುಚಿ 6 ಶಾಲಾ ಮಕ್ಕಳ ದುರ್ಮರಣ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

boat capsizes in lake of Gujarat Vadodara and 6 school students dead

ವಡೋದರಾ: ಗುಜರಾತ್‌ನ (Gujarat) ವಡೋದರಾದ (Vadodara) ಹರಣಿ ಸರೋವರದಲ್ಲಿ (Harni Lake) ಬೋಟ್ ಮಗುಚಿ (boat capsizes) ಕನಿಷ್ಠ 6 ಶಾಲಾ ಮಕ್ಕಳು ಮೃತಪಟ್ಟ (school students feared dead) ಘಟನೆ ಗುರುವಾರ ಸಂಜೆ ನಡೆದಿದೆ. ಅಲ್ಲದೇ, ಇನ್ನೂ ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಾಣೆಯಾಗಿರುವ ಮಕ್ಕಳ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

ವರದಿಗಳ ಪ್ರಕಾರ, ಸರೋವರದಲ್ಲಿ ಮಗುಚಿದ ದೋಣಿಯಲ್ಲಿ ನ್ಯೂ ಸನ್‌ರೈಸ್ ಶಾಲೆಯ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಮತ್ತು ಅವರಲ್ಲಿ ಯಾರೂ ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಬೋಟ್ ಮಗುಚಿದ್ದರಿಂದ ಕಾಣೆಯಾಗಿದ್ದ ಅನೇಕ ಮಕ್ಕಳನ್ನು ಈಗಾಗಲೇ ರಕ್ಷಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸಯಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆ ಮಾಡಲಾದ ಮಕ್ಕಳ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದುರ್ಘಟನೆ ನಡೆದ ಸರೋವರಕ್ಕೆ ಸ್ಥಳೀಯ ನಾಯಕರು ಮತ್ತು ಶಾಸಕರು ಧಾವಿಸಿ ನೆರವು ನೀಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Yadgiri News: ಅಪಘಾತದಲ್ಲಿ ತಂದೆ, ಇಬ್ಬರ ಮಕ್ಕಳ ಸಾವು; ಶಾಸಕ ಚನ್ನಾರೆಡ್ಡಿ ಸಾಂತ್ವನ

Exit mobile version