ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆ ಹರಿಹರೇಶ್ವರ ಬೀಚ್‌ನಲ್ಲಿ ಎಕೆ-೪೭ ಗನ್‌ಗಳು ಸೇರಿ ಹಲವು ಶಸ್ತ್ರಾಸ್ತ್ರಗಳುಳ್ಳ ಹಡಗು ಪತ್ತೆಯಾಗಿರುವ ಪ್ರಕರಣ (Terror Alert) ದೇಶಾದ್ಯಂತ ಆತಂಕ ಮೂಡಿಸಿದ ಬೆನ್ನಲ್ಲೇ, ಸಿಕ್ಕ ಬೋಟ್ ಉಗ್ರರದ್ದಲ್ಲ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ.
ಹರಿಹರೇಶ್ವರ ಬೀಚ್‌ನಲ್ಲಿ ಪತ್ತೆಯಾದ ಬೋಟ್ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ್ದಾಗಿದೆ. ಅದು ಮಸ್ಕಟ್ ಮೂಲಕ ಯುರೋಪ್‌ಗೆ ಸಾಗುತ್ತಿತ್ತು. ಅಲೆಗಳಲ್ಲಿ ತೀವ್ರವಾಗಿ ಏರುಪೇರು ಉಂಟಾದ ಕಾರಣ ಅದು ಸಂಕಷ್ಟಕ್ಕೆ ಸಿಲುಕಿತ್ತು. ಇದು ಉಗ್ರರಿಗೆ ಸಂಬಂಧಿಸಿದ ಬೋಟ್ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ” ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದಾರೆ.
ಹಡಗಿನಲ್ಲಿ ಎಕೆ-೪೭ ಸೇರಿ ಹಲವು ರೈಫಲ್‌ಗಳು ಇದ್ದ ಕಾರಣ ಆತಂಕ ಹೆಚ್ಚಾಗಿತ್ತು. ಹಾಗಾಗಿ, ಪೊಲೀಸರು ಹೈ ಅಲರ್ಟ್ ಘೋಷಿಸಿದ್ದರು. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಸಿಬ್ಬಂದಿಯೂ ರಾಯಗಢಕ್ಕೆ ತೆರಳಿ ಹೆಚ್ಚಿನ ತನಿಖೆ ಆರಂಭಿಸಿತ್ತು. ಅಲ್ಲದೆ, ೨೬/೧೧ರ ಮಾದರಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ | 26/11 ಮುಂಬೈ ದಾಳಿಯ ಸಂಚುಕೋರ ಸಜೀದ್ ಮಿರ್‌ನನ್ನು ಬಂಧಿಸಿದ್ದಾಗಿ ಹೇಳಿದ ಪಾಕಿಸ್ತಾನ