Site icon Vistara News

ಪಿ-81 ವಿಮಾನ ನವೀಕರಣಕ್ಕೆ ಮೇಕ್ ಇನ್ ಇಂಡಿಯಾ ವಿಧಾನಕ್ಕೆ ಮುಂದಾದ ಬೋಯಿಂಗ್

Boeing goes ahead with Make in India approach to upgrade P-81 aircraft

ಬೆಂಗಳೂರು / ನವದೆಹಲಿ: ಬೋಯಿಂಗ್ (Boeing) ಗುರುವಾರ ತನ್ನ ಪಿ-8ಐ( P-8I) ಕಡಲ ಕಣ್ಗಾವಲು ವಿಮಾನದ ತಯಾರಿಕೆ ಮತ್ತು ಸುಸ್ಥಿರತೆಯಲ್ಲಿ ಸಾಧಿಸಿದ ಗಣನೀಯ ಸ್ವದೇಶೀಕರಣವನ್ನು ಎತ್ತಿ ತೋರಿಸಿದೆ ಹಾಗೂ ಪ್ಲಾಟ್‌ಫಾರ್ಮ್‌ನ ದೃಷ್ಟಿಕೋನದ ಕುರಿತು ಮಾಧ್ಯಮಗಳಿಗೆ ಅದರ ಆತ್ಮನಿರ್ಭರ್ ಭಾರತ್ (Atmanirbhar Bharat) ಕಾರ್ಯತಂತ್ರದ ಭಾಗವಾಗಿ ಪರಿಣಾಮವಾಗಿ ಹೂಡಿಕೆ ಮತ್ತು ಆರ್ಥಿಕತೆಯ ಹೆಚ್ಚಳವನ್ನು ಸೂಚಿಸಿದೆ. ಹನ್ನೆರಡು P-8Iಗಳು ಈಗಾಗಲೇ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ವಿಚಕ್ಷಣ ಮತ್ತು ಕಣ್ಗಾವಲು ಅಗತ್ಯಗಳನ್ನು ಪೂರೈಸುತ್ತಲಿವೆ.

ಬೋಯಿಂಗ್ ಈಗಾಗಲೇ ಆರ್ಥಿಕತೆಯ ಮೇಲೆ ಗಣನೀಯ ಪರಿಣಾಮವನ್ನು ಉಂಟುಮಾಡಿದೆ, ಇದು ಭಾರತೀಯ ನೌಕಾಪಡೆಯೊಂದಿಗೆ ಸೇವೆಯಲ್ಲಿರುವ ಪ್ರಸ್ತುತ P-8I ವಿಮಾನ ಫ್ಲೀಟ್ ಅನ್ನು ಬೆಂಬಲಿಸಲು 1.7 ಶತಕೋಟಿ ಡಾಲರ್ ಮೊತ್ತವನ್ನು ಹೊಂದಿಸಿದೆ. ಇದಲ್ಲದೆ, ಬೋಯಿಂಗ್ P-8I ಫ್ಲೀಟ್ ಅನ್ನು 18 ವಿಮಾನಗಳಿಗೆ ಹೆಚ್ಚಿಸುವುದರಿಂದ, ಹೂಡಿಕೆಗಳಲ್ಲಿ ಅಂದಾಜು 1.5 ಶತಕೋಟಿ ಡಾಲರ್ ಹೆಚ್ಚಳವು ಆಗಲಿದ್ದು ಇದರಿಂದಾಗಿ 2032 ರ ವೇಳೆಗೆ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮತ್ತಷ್ಟು ಸ್ವದೇಶೀಕರಣದ ಅವಕಾಶಗಳು ಸೃಷ್ಟಿಯಾಗುತ್ತದೆ.

ಬೋಯಿಂಗ್ ಇಂಡಿಯಾದ ಅಧ್ಯಕ್ಷರಾದ ಸಲೀಲ್ ಗುಪ್ತೆ ಅವರು, “ಆತ್ಮನಿರ್ಭರ್ ಭಾರತ್ ದೃಷ್ಟಿಕೋನವನ್ನು ಮುಂದುವರಿಸಲು ಬೋಯಿಂಗ್‌ನ ಬದ್ಧತೆಯು P-8I ಫ್ಲೀಟ್‌ಗೆ ನಮ್ಮ ಸಮರ್ಪಣೆಯನ್ನು ಪ್ರೇರೇಪಿಸುತ್ತದೆ. ಭಾರತೀಯ ನೌಕಾಪಡೆಯ ಹೆಚ್ಚಿನ P-8I ವಿಮಾನಗಳ ಅಗತ್ಯಕ್ಕೆ ನಾವು ಪ್ರತಿಕ್ರಿಯಿಸುವಂತೆ, ನಾವು ಭಾರತ ಮತ್ತು ಜಾಗತಿಕ ಗ್ರಾಹಕರಿಗೆ ಲಾಭದಾಯಕವಾಗಿ ಭಾರತ, ಭಾರತಕ್ಕಾಗಿ ಮತ್ತು ಪ್ರಪಂಚಕ್ಕಾಗಿ ಎಂಜಿನಿಯರಿಂಗ್, ಉತ್ಪಾದನೆ ಮತ್ತು ಸುಸ್ಥಿರ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಸಕ್ರಿಯವಾಗಿರುವುದನ್ನು ನೋಡುತ್ತಿದ್ದೇವೆ” ಎಂದು ಹೇಳಿದರು.

2013 ರಲ್ಲಿ ಪ್ರಾರಂಭವಾದಾಗಿನಿಂದ, 737 ನೆಕ್ಸ್ಟ್ ಜನರೇಷನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ P-8I ವಿಮಾನವು ಭಾರತೀಯ ನೌಕಾಪಡೆಯ ಫ್ಲೀಟ್‌ನ ಅವಿಭಾಜ್ಯ ಅಂಗವಾಗಿದೆ ಹಾಗೂ ಹೆಚ್ಚಿನ ಕಾರ್ಯಾಚರಣೆಯ ಸಿದ್ಧತೆ ದರಗಳೊಂದಿಗೆ 40,000 ಹಾರಾಟದ ಗಂಟೆಗಳನ್ನು ಮೀರಿದೆ. INS ರಾಜೊಲಿಯಲ್ಲಿ ಅಶೋಕ್ ರಾಯ್ ತರಬೇತಿ ಸಿಮ್ಯುಲೇಟರ್ ಸಂಕೀರ್ಣವನ್ನು ಸ್ಥಾಪಿಸುವಲ್ಲಿ ಬೋಯಿಂಗ್ ಪ್ರಮುಖ ಪಾತ್ರವನ್ನು ವಹಿಸಿದೆ ಹಾಗೂ ಈ ವರ್ಷದ ಏಪ್ರಿಲ್‌ನಲ್ಲಿ ಉದ್ಘಾಟನೆಗೊಂಡ ಕೊಚ್ಚಿ ತರಬೇತಿ ಸಂಕೀರ್ಣವು P-8I ಏರ್‌ಕ್ರೂ ಮತ್ತು ತಾಂತ್ರಿಕ ತಂಡದ ತರಬೇತಿಗಾಗಿ ಅತ್ಯಾಧುನಿಕ ಸಿಮ್ಯುಲೇಟರ್ ಅನ್ನು ಒಳಗೊಂಡಿದೆ. ಈ ನೆಲ-ಆಧಾರಿತ ತರಬೇತಿಯನ್ನು ನೀಡುವುದರಿಂದ ವಿಮಾನದಲ್ಲಿ ತರಬೇತಿ ಸಮಯವನ್ನು ಕಡಿಮೆ ಮಾಡುತ್ತದೆ, ಭಾರತೀಯ ನೌಕಾಪಡೆಗೆ ಮಿಷನ್ ಪ್ರಾವೀಣ್ಯತೆ ಮತ್ತು ವಿಮಾನ ಲಭ್ಯತೆಯನ್ನು ಕೂಡ ಹೆಚ್ಚಿಸುತ್ತದೆ.

ಈ ಸುದ್ದಿಯನ್ನೂ ಓದಿ: Air India Deal: 250 ವಿಮಾನ ಖರೀದಿಗೆ ಏರ್‌ ಇಂಡಿಯಾ ಒಪ್ಪಂದ, ಐತಿಹಾಸಿಕ ಎಂದ ಮೋದಿ, ಬೋಯಿಂಗ್‌ ಜತೆ ಮತ್ತೊಂದು ಡೀಲ್‌

“ಭಾರತ ಮತ್ತು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಪರಸ್ಪರ ಕಾರ್ಯಸಾಧ್ಯತೆ ಮತ್ತು ಕಡಲ ಭದ್ರತಾ ಅಗತ್ಯತೆಗಳನ್ನು ಹೆಚ್ಚಿಸುವ ಸಂದರ್ಭದಲ್ಲಿಯೇ, ಒಂದು ಸಾಬೀತಾದ ಬಹು-ಮಿಷನ್ ವಿಮಾನವಾಗಿ P-8 ನೀಡುವ ಅಸಾಧಾರಣ ಸಾಮರ್ಥ್ಯವೂ ಸೇರಿದಂತೆ ಭಾರತೀಯ ನೌಕಾಪಡೆಯ ಜೊತೆಗಿನ ಪಾಲುದಾರಿಕೆಗೆ ನಾವು ಹೆಮ್ಮೆಪಡುತ್ತೇವೆ” ಎಂದು ಡಾನ್ ಗಿಲಿಯನ್, ವೈಸ್ ಪ್ರೆಸಿಡೆಂಟ್ ಹಾಗೂ ಜನರಲ್ ಮ್ಯಾನೇಜರ್, ಮೊಬಿಲಿಟಿ, ಕಣ್ಗಾವಲು ಮತ್ತು ಬಾಂಬರ್ಸ್, ಬೋಯಿಂಗ್ ಡಿಫೆನ್ಸ್, ಸ್ಪೇಸ್ ಮತ್ತು ಸೆಕ್ಯುರಿಟಿ ರವರು ತಿಳಿಸಿದರು. “ಬೋಯಿಂಗ್ ತನ್ನ P-8 ಪೂರೈಕೆದಾರ ಜಾಲವನ್ನು ಭಾರತದಲ್ಲಿ ವಿಸ್ತರಿಸಲು ಬದ್ಧವಾಗಿದೆ, ಇದು ಪ್ರಸ್ತುತ 15 ಸಾರ್ವಜನಿಕ ಮತ್ತು ಖಾಸಗಿ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡಿದೆ, ಅವುಗಳು ಬೋಯಿಂಗ್‌ನ ಜಾಗತಿಕ ಪೂರೈಕೆ ಸರಪಳಿಯ ಒಂದು ಭಾಗವಾಗಿದೆ ಹಾಗೂ P-8.ಗಾಗಿ ನಿರ್ಣಾಯಕ ಭಾಗಗಳು, ಘಟಕಗಳು ಮತ್ತು ಸೇವೆಗಳನ್ನು ಒದಗಿಸುತ್ತಿದೆ.”

ಜಾಗತಿಕವಾಗಿ ಸಾಬೀತಾಗಿರುವ P-8 ಫ್ಲೀಟ್, ಸೇವೆಯಲ್ಲಿರುವ 160 ಕ್ಕೂ ಹೆಚ್ಚು ವಿಮಾನಗಳನ್ನು ಹಾಗೂ ಜಗತ್ತಿನಾದ್ಯಂತ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನಾರ್ವೆ, ದಕ್ಷಿಣ ಕೊರಿಯಾ, ಹಾಗೂ ಜರ್ಮನಿಯಂತಹ ಮಿತ್ರರಾಷ್ಟ್ರಗಳನ್ನು ಒಳಗೊಂಡಂತೆ 500,000 ಗೂ ಹೆಚ್ಚು ಅಪಘಾತ-ಮುಕ್ತ ಹಾರಾಟದ ಸಮಯವನ್ನು ಸಂಗ್ರಹಿಸಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version