Site icon Vistara News

Boiler Blast : ಬಾಯ್ಲರ್ ಬ್ಲಾಸ್ಟ್​ ಆಗಿ 100ಕ್ಕೂ ಅಧಿಕ ಮಂದಿಗೆ ಗಾಯ

Haryana Blast

ನವದೆಹಲಿ: ಹರಿಯಾಣದ ರೇವಾರಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಶನಿವಾರ ಸಂಜೆ ಬಾಯ್ಲರ್ ಸ್ಫೋಟಗೊಂ ಡು ಹಲವಾರು (Boiler Blast) ಕಾರ್ಮಿಕರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಜಿಲ್ಲೆಯ ಧರುಹೆರಾ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿದೆ. ಘಟಕದಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಕನಿಷ್ಠ 40 ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಗೊಂಡವರಲ್ಲಿ ಒಬ್ಬರನ್ನು ಗಂಭೀರ ಸ್ವರೂಪದ ಗಾಯದ ಹಿನ್ನೆಲೆಯಲ್ಲಿ ರೋಹ್ಟಕ್​ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : K Kavitha : ಮಾರ್ಚ್​​ 23ರವರೆಗೆ ಕೆ. ಕವಿತಾ ಸಿಬಿಐ ಕಸ್ಟಡಿಗೆ, ಡೆಲ್ಲಿ ಕೋರ್ಟ್​​ ಆದೇಶ

“ರೇವಾರಿಯ ಧರುಹೆರಾದಲ್ಲಿರುವ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ನಾವು ಆಸ್ಪತ್ರೆಗಳಿಗೆ ಮಾಹಿತಿ ನೀಡಿದ್ದಾರೆ. ನಾವು ಹಲವಾರು ಆಂಬ್ಯುಲೆನ್ಸ್​ಗಳನ್ನು ಅನ್ನು ಕಾರ್ಖಾನೆಗೆ ಕಳುಹಿಸಿದ್ದೇವೆ. ಹಲವಾರು ಜನರಿಗೆ ಸುಟ್ಟ ಗಾಯಗಳಾಗಿವೆ. ಸುಮಾರು 40 ಜನರು ಗಾಯಗೊಂಡಿದ್ದಾರೆ ಮತ್ತು ಗಂಭೀರ ಸ್ವರೂಪದ ರೋಗಿಯನ್ನು ರೋಹ್ಟಕ್​​ಗೆ ಕಳುಹಿಸಲಾಗಿದೆ ಎಂದು ಸಿವಿಲ್ ಸರ್ಜನ್ ಡಾ.ಸುರೇಂದರ್ ಯಾದವ್ ತಿಳಿಸಿದ್ದಾರೆ.

ಅವಘಡದ ನಂತರ ರೋಹ್ಟಕ್ ಪಿಜಿಐಎಂಎಸ್ ನಿರ್ದೇಶಕ ಡಾ.ಎಸ್.ಎಸ್.ಲೋಹ್ಚಾಬ್, ಆಘಾತ ಕೇಂದ್ರದ ವೈದ್ಯರಿಗೆ ಸಂದೇಶ ರವಾನಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರೇವಾರಿಯ ಲೈಫ್ ಲಾಂಗ್ ಕಾರ್ಖಾನೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಬಾಯ್ಲರ್ ಸ್ಫೋಟ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಸ್ಫೋಟದ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version