Site icon Vistara News

Rahul Gandhi: ಮೋದಿಗೆ ಅವಮಾನ; ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌

Relief For Rahul Gandhi By Court

Bombay High Court extends interim relief for Rahul from court appearance

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್‌ನಲ್ಲಿ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಬಾಂಬೆ ಹೈಕೋರ್ಟ್‌ ರಿಲೀಫ್‌ ನೀಡಿದೆ. ಕೋರ್ಟ್‌ಗೆ ಹಾಜರಾಗುವ ಕುರಿತಂತೆ ರಾಹುಲ್‌ ಗಾಂಧಿ ಅವರಿಗೆ ರಿಲೀಫ್‌ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ರಾಹುಲ್‌ ಗಾಂಧಿ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಮಹೇಶ್‌ ಶ್ರೀಶ್ರೀಮಲ್‌ ಎಂಬುವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌.ವಿ. ಕೊತ್ವಾಲ್‌ ಅವರಿದ್ದ ಏಕಸದಸ್ಯ ಪೀಠವು, ಆಗಸ್ಟ್‌ 12ರವರೆಗೆ ಕೋರ್ಟ್‌ಗೆ ಹಾಜರಾಗುವ ಕುರಿತು ರಾಹುಲ್‌ ಗಾಂಧಿಗೆ ರಿಲೀಪ್‌ ನೀಡಲಾಗಿದೆ.

ಅಧೀನ ನ್ಯಾಯಾಲಯವೊಂದು ಕೋರ್ಟ್‌ಗೆ ಹಾಜರಾಗಬೇಕು ಎಂದು 2021ರಲ್ಲಿ ನಿರ್ದೇಶನ ನೀಡಿತ್ತು. 2021ರ ನವೆಂಬರ್‌ ಒಳಗೆ ಕೋರ್ಟ್‌ಗೆ ಹಾಜರಾಗಬೇಕು ಎಂದು ಸಮನ್ಸ್‌ ನೀಡಿತ್ತು. ಆದರೆ, ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಹುಲ್‌ ಗಾಂಧಿ ಅವರು ಉನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈಗ ಆಗಸ್ಟ್‌ 12ರವೆರೆಗೆ ಕೋರ್ಟ್‌ಗೆ ರಾಹುಲ್‌ ಗಾಂಧಿ ಹಾಜರಾಗುವುದರಿಂದ ರಿಲೀಫ್‌ ಸಿಕ್ಕಂತಾಗಿದೆ.

ಇದನ್ನೂ ಓದಿ: Rahul Gandhi: ಅನರ್ಹನಾದ ಬಳಿಕವೇ ನನಗೆ ಹೆಚ್ಚುಅವಕಾಶ: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಹೇಳಿಕೆ

ಏನಿದು ಪ್ರಕರಣ?

ರಾಫೆಲ್‌ ಯುದ್ಧವಿಮಾನ ಖರೀದಿ ವೇಳೆ ಹಗರಣ ನಡೆದಿದೆ ಎಂದು ರಾಹುಲ್‌ ಗಾಂಧಿ ಸಾಲು ಸಾಲು ಆರೋಪ ಮಾಡಿದ್ದರು. ಇದೇ ವೇಳೆ, ರಾಹುಲ್‌ ಗಾಂಧಿ ಅವರು ಮೋದಿ ಅವರನ್ನು ಕಮಾಂಡರ್‌ ಇನ್‌ ಚೀಫ್‌ ಎಂದು ಟೀಕಿಸಿದ್ದರು. ಇದು ನರೇಂದ್ರ ಮೋದಿ ಅವರ ಮಾನಹಾನಿ ಮಾಡಲು ನೀಡಿದ ಹೇಳಿಕೆ, ಇದರಿಂದ ಮೋದಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಮೋದಿ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರಾಗಿದ್ದಾರೆ ಎಂದು ಹೇಳಿಕೆ ನೀಡಿದ ರಾಹುಲ್‌ ಗಾಂಧಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನ್ಯಾಯಾಲಯವು ಶಿಕ್ಷೆ ನೀಡಿದ ಕಾರಣ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣವು ರಾಹುಲ್‌ ಗಾಂಧಿ ಅವರಿಗೆ ಮುಳುವಾಗುವ ಸಾಧ್ಯತೆ ಇತ್ತು. ಈ ಸಂಕಷ್ಟದಿಂದ ರಾಹುಲ್‌ ಗಾಂಧಿ ತಪ್ಪಿಸಿಕೊಂಡಿದ್ದಾರೆ.

Exit mobile version