Site icon Vistara News

Bombay High court : ಅರ್ಜಿ ವರ್ಗಾವಣೆ ಮಾಡುವಾಗ ಪತ್ನಿಯ ಅನುಕೂಲತೆಯೇ ಪ್ರಮುಖ ಎಂದ ಬಾಂಬೆ ಹೈಕೋರ್ಟ್‌

#image_title

ಮುಂಬೈ: “ಕುಟುಂಬದ ವಿಚಾರದ ಅರ್ಜಿಗಳನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಾಗ ಪತ್ನಿಯ ಅನುಕೂಲತೆಯನ್ನೇ ಮುಖ್ಯವಾಗಿ ಪರಿಗಣಿಸಬೇಕು” ಎಂದು ಬಾಂಬೆ ಹೈಕೋರ್ಟ್‌ (Bombay High court) ಹೇಳಿದೆ.

ಇದನ್ನೂ ಓದಿ: Bombay High court | ಚಂದಾ ಕೋಚರ್ ಹಾಗೂ ಅವರ ಪತಿ ಬಂಧನ ಸರಿಯಲ್ಲ, ಬಿಡುಗಡೆ ಮಾಡಿ: ಬಾಂಬೆ ಹೈಕೋರ್ಟ್

ಮಹಾರಾಷ್ಟ್ರದ ಪನ್ವೆಲ್‌ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿರುವ ಮಹಿಳೆಯೊಬ್ಬರು ತಮ್ಮ ವಿಚ್ಛೇದನದ ಅರ್ಜಿಯನ್ನು ಪುಣೆಯಿಂದ ಪನ್ವೆಲ್‌ಗೆ ವರ್ಗಾಯಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಮಾಡಿರುವ ಏಕಸದಸ್ಯ ನ್ಯಾಯಪೀಠವು ಅರ್ಜಿ ವರ್ಗಾವಣೆಗೆ ಅನುಮತಿ ನೀಡಿದೆ.

ಮಹಿಳೆಯು ಪನ್ವೆಲ್‌ನಲ್ಲಿ ಇರುವುದರಿಂದ ವಿಚಾರಣೆಗೆ ಪುಣೆಯ ನ್ಯಾಯಾಲಯಕ್ಕೆ ಬರುವುದು ಕಷ್ಟವಾಗುತ್ತದೆ. ತಾನು ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತವಾಗಿದ್ದು, ವಿಚಾರಣೆಗೆಂದು ಬರುವುದರಿಂದ ಹಣದ ಸಮಸ್ಯೆ ಉಂಟಾಗುತ್ತದೆ. ಹಾಗೆಯೇ ಪುಣೆಯಲ್ಲಿ ಪರಿಚಯಸ್ಥರು ಇಲ್ಲದಿರುವುದರಿಂದ ಸಮಸ್ಯೆಗಳಾಗುತ್ತವೆ ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: Anand Teltumbde | ತೆಲ್ತುಂಬಡೆಗೆ ಬಾಂಬೆ ಹೈಕೋರ್ಟ್ ಜಾಮೀನು, ಆದರೂ ಸದ್ಯಕ್ಕಿಲ್ಲ ಬಿಡುಗಡೆ ಯಾಕೆ?

ಆದರೆ ಅದಕ್ಕೆ ವಿರುದ್ಧವಾಗಿ ವಾದ ಮಾಡಿದ್ದ ಆಕೆಯ ಪತಿಯು, “ನನ್ನ ಪತ್ನಿ ಕೆಲಸಕ್ಕೆ ಪುಣೆಗೆ ಬರುತ್ತಿದ್ದಳು. ಕೆಲಸದ ಮೇಲೆ ವಿದೇಶಕ್ಕೂ ಹೋಗಿದ್ದಳು. ಮಲೇಷಿಯಾ ಹೋಗಿ ಬಂದಿದ್ದಾಳೆ. ಆದರೆ ವಿಚಾರಣೆಗೆ ಮಾತ್ರ ಬರುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದಾಳೆ” ಎಂದು ವಾದಿಸಿದ್ದರು.

ಪತಿಯ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, “ಅರ್ಜಿಗಳನ್ನು ವರ್ಗಾವಣೆ ಮಾಡಬೇಕೆನ್ನುವ ಸಂದರ್ಭದಲ್ಲಿ ಪತ್ನಿಯ ಅನುಕೂಲತೆಯನ್ನೇ ಮೊದಲು ಪರಿಗಣಿಸಬೇಕು ಎಂದು ಕಾನೂನಿನಲ್ಲಿ ಹೇಳಲಾಗಿದೆ. ಅದಲ್ಲದೆ ಈ ಪ್ರಕರಣದಲ್ಲಿರುವ ಪತಿಗೆ ಪನ್ವೇಲ್‌ನ ಕ್ರಿಮಿನಲ್‌ ನ್ಯಾಯಾಲಯದಲ್ಲೂ ಪ್ರಕರಣವಿದ್ದು, ವಿಚಾರಣೆಯಿದೆ. ಹಾಗಾಗಿ ಈ ಪ್ರಕರಣವನ್ನೂ ಪನ್ವೇಲ್‌ಗೆ ವರ್ಗಾಯಿಸಲಾಗುವುದು. ಬೇಕಿದ್ದರೆ ಅವರು ಕ್ರಿಮಿನಲ್‌ ಪ್ರಕರಣ ಹಾಗೂ ವಿಚ್ಛೇದನದ ಪ್ರಕರಣದ ವಿಚಾರಣೆಯನ್ನು ಒಂದೇ ದಿನ ಮಾಡುವಂತೆ ಕೋರಿ ಕ್ರಿಮಿನಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಅದರ ನಿರ್ಧಾರ ಕ್ರಿಮಿನಲ್‌ ನ್ಯಾಯಾಲಯದ್ದಾಗಿರುತ್ತದೆ” ಎಂದು ಹೇಳಿದೆ.

Exit mobile version