Site icon Vistara News

Pathaan Movie: ಬಾಯ್ಕಾಟ್ ಸಂಸ್ಕೃತಿಯಿಂದ ತಪ್ಪು ಸಂದೇಶ ರವಾನೆ: ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್

Boycott culture damages us and it sends wrong message says union minister

ನವದೆಹಲಿ: ಬಾಯ್ಕಾಟ್ ಬಾಲಿವುಡ್ (Boycott Bollywood) ಟ್ರೆಂಡ್ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, ”ಜಗತ್ತಿನಾದ್ಯಂತ ಭಾರತೀಯ ಸಿನಿಮಾಗಳು ಹೆಸರು ಮಾಡುತ್ತಿರುವಾಗ ಇಂಥ(ಬಾಯ್ಕಾಟ್ ಬಾಲಿವುಡ್) ಚಟುವಟಿಕೆಗಳು ಋಣಾತ್ಮಕ ಪರಿಣಾಮ ಬೀರುತ್ತವೆ, ತಪ್ಪು ಸಂದೇಶವನ್ನು ರವಾನಿಸುತ್ತವೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ಆಯೋಜಿಸಲಾಗಿರುವ ಶಾಂಘೈ ಸಹಕಾರ ಸಂಘ ಸಿನಿಮಾ ಉತ್ಸವ(Shanghai Cooperation Organization Film Festival)ದ ಸಂದರ್ಭದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ (Pathaan Movie) ಸಿನಿಮಾದ ವಿರುದ್ಧವೂ ಬಾಯ್ಕಾಟ್ ಟ್ರೆಂಡ್ ಜಾರಿಯಲ್ಲಿದೆ.

ಭಾರತದಲ್ಲಿ ಸಿಬಿಎಫ್‌ಸಿ(CBFC) ಇದೆ. ಈ ಮಂಡಳಿಯಲ್ಲಿ ಸಾಕಷ್ಟು ಸದಸ್ಯರಿದ್ದಾರೆ. ಸಿಬಿಎಫ್‌ಸಿ ಅನುಮತಿ ನೀಡಿದರಷ್ಟೇ ಸಿನಿಮಾ ಭಾರತದಲ್ಲಿ ಪ್ರದರ್ಶನ ಕಾಣಲು ಸಾಧ್ಯ. ಸಿನಿಮಾ ಬಗ್ಗೆ ಯಾರಿಗಾದರೂ ಆಕ್ಷೇಪಗಳಿದ್ದರೆ, ನಮಗೆ ಮಾಹಿತಿ ನೀಡಬೇಕು. ನಾವದನ್ನು ಸೆನ್ಸಾರ್ ಮಂಡಳಿಗೆ ಕಳುಹಿಸಿ ಕೊಡುತ್ತೇವೆ ಎಂದು ಅನುರಾಗ್ ಸಿಂಗ್ ಠಾಕರೂ ಅವರು ಹೇಳಿದರು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತಿಳಿಸಿ

ಭಾರತದಂಥ ದೇಶದಲ್ಲಿ ನಾವು ನಮ್ಮ ಶಕ್ತಿಯನ್ನು ಎಲ್ಲೆಡೆ ವಿಸ್ತರಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ನಮ್ಮ ಸಿನಿಮಾಗಳು ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತೇವೆ. ಮತ್ತೊಂದೆಡೆ, ಬಾಯ್ಕಾಟ್‌ನಂಥ ಚಟುವಟಿಕೆಗಳು ನಡೆಯುತ್ತಿವೆ. ಇವು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ. ಯಾವುದೇ ಸಿನಿಮಾ ಬಗ್ಗೆ ಆಕ್ಷೇಪಗಳಿದ್ದರೆ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಗಮನಕ್ಕೆ ತನ್ನಿ, ಆ ಬಗ್ಗೆ ನಾವು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮಾಹಿತಿ ನೀಡುತ್ತೇವೆ. ಆದರೆ, ಬಹಳಷ್ಟು ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಇಲ್ಲದೇ, ಇಡೀ ವಾತಾವರಣವನ್ನು ಹಾಳು ಮಾಡುವಂಥ ಘಟನೆಗಳು ನಡೆಯುತ್ತವೆ. ಇದು ತಪ್ಪು ಎಂದು ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Pathaan Movie: ವಿಶ್ವಾದ್ಯಂತ 400 ಕೋಟಿ ರೂ. ಕ್ಲಬ್‌ ಸೇರಿದ ʻಪಠಾಣ್‌ʼ

ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಘಟನೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಶುರುವಾಯಿತು. ಬಳಿಕ, ಹಿಂದೂ ಧರ್ಮ ಅವಹೇಳನ ಮಾಡಲಾಗಿದೆ ಎಂದು ಅನೇಕ ಸಿನಿಮಾಗಳ ವಿರುದ್ಧ ಬಾಯ್ಕಾಟ್‌ಗೆ ಕರೆ ನೀಡಲಾಗಿತ್ತು. ಪಠಾಣ್ ಚಿತ್ರದಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಪಠಾಣ್ ವಿರುದ್ಧ ಬಾಯ್ಕಾಟ್ ಮಾಡಲಾಗಿತ್ತು. ಆದರೆ, ಈ ಎಲ್ಲ ಬಹಿಷ್ಕಾರ್ ಮೀರಿ ಪಠಾಣ್ ಚಿತ್ರವೂ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಸಕ್ಸೆಸ್ ಕಂಡಿದೆ.

Exit mobile version