Site icon Vistara News

BrahMos Missile | ಆಗಸದಿಂದಲೇ ಬ್ರಹ್ಮೋಸ್‌ ಕ್ಷಿಪಣಿಯ ಪ್ರಯೋಗ ಯಶಸ್ವಿ, 400 ಕಿ.ಮೀ ದೂರದ ಗುರಿಗಳೂ ಇನ್ನು ಧ್ವಂಸ

BrahMos Air Launch missile

ನವದೆಹಲಿ: ಭಾರತದ ವಾಯುಪಡೆಯು ಆಗಸದಿಂದಲೇ ವಿಸ್ತೃತ ಶ್ರೇಣಿಯ ಬ್ರಹ್ಮೋಸ್‌ ಏರ್‌ ಲಾಂಚ್ಡ್‌ ಕ್ಷಿಪಣಿಯ (BrahMos Missile) ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದೆ. ಇದರಿಂದ ದೇಶದ ವಾಯುಪಡೆಗೆ ಹೆಚ್ಚಿನ ಬಲ ಬರಲಿದ್ದು, ಭೂಮಿ ಹಾಗೂ ನೀರಿನ ಮೇಲಿನ ಶತ್ರುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೆಚ್ಚಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಪಡೆಯು ಸುಖೋಯ್‌-ಎಸ್‌ಯು-30ಎಂಕೆಐ (Sukhoi SU-30MKI) ಯುದ್ಧವಿಮಾನದ ಮೂಲಕ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ವಾಯುಪಡೆಯು ಹೊಸ ಮೈಲುಗಲ್ಲು ಸಾಧಿಸಿದಂತಾಗಿದೆ.

ಬ್ರಹ್ಮೋಸ್‌ ಏರ್‌ ಲಾಂಚ್ಡ್‌ ಕ್ಷಿಪಣಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಸುಮಾರು 400 ಕಿ.ಮೀ ದೂರದ ಗುರಿಗಳನ್ನು ಹೊಡೆದುರುಳಿಸಲಿದೆ. ಹಾಗೆಯೇ, ಇದು ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಚಲಿಸಿ ಗುರಿಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ. ಕಳೆದ ಮೇ ತಿಂಗಳಲ್ಲಿ 290 ಕಿ.ಮೀ.ನಿಂದ 350 ಕಿ.ಮೀ. ದೂರದ ಗುರಿ ಹೊಡೆದುರುಳಿಸುವ ಸಾಮರ್ಥ್ಯದ ವಿಸ್ತ್ರೃತ ಶ್ರೇಣಿಯ ಕ್ಷಿಪಣಿಯ ಪ್ರಯೋಗ ನಡೆಸಲಾಗಿತ್ತು.

ಇದನ್ನೂ ಓದಿ | ಬೀಜಿಂಗ್‌ ತಲುಪಬಲ್ಲ ಸಾಮರ್ಥ್ಯದ ಅಗ್ನಿ-V ಕ್ಷಿಪಣಿ ಉಡಾಯಿಸಿದ ಭಾರತ | ಗಡಿ ತಗಾದೆ ತೆಗೆದಿದ್ದಕ್ಕೆ ಎಚ್ಚರಿಕೆ?

Exit mobile version