Site icon Vistara News

ಪ್ರಶ್ನೆಗಾಗಿ ಲಂಚ ಕೇಸ್: ಬಿಜೆಪಿ ಸಂಸದ ದುಬೆ, ವಕೀಲ ಜೈ ಅನಂತ್ ವಿರುದ್ದ ಮಹುವಾ ಮಾನನಷ್ಟ ಮೊಕದ್ದಮೆ

Mahua Moitra gets summoned by ed in FEMA probe

ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು (Bribe for questions row) ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (MP Mahua Moitra) ಅವರು ಉದ್ಯಮಿಯಿಂದ ಲಂಚ ಸ್ವೀಕರಿಸಿದ್ದಾರೆಂದು ಆರೋಪಿಸಿರುವ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ (Lawyer Jai Ananth Dehdrai) ಅವರ ವಿರುದ್ದ ದಿಲ್ಲಿ ಹೈಕೋರ್ಟ್‌ನಲ್ಲಿ(Delhi High Court) ಮಾನನಷ್ಟ ಮೊಕದ್ದಮೆ (Defamation Case) ದಾಖಲಿಸಿದ್ದಾರೆ. ಇವರಿಬ್ಬರು ಮಾತ್ರವಲ್ಲದೇ, ಹಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಸಂಸದೆ ಮಹುವಾ ಮೋಯಿತ್ರಾ ಅವರು “ಲಂಚ” ಪಡೆದಿದ್ದಾರೆ ಎಂದು ನಿಶಿಕಾಂತ್ ದುಬೆ ಮತ್ತು ದೇಹಾದ್ರಾಯಿ ಆರೋಪಿಸಿದ್ದರು. ಮಹುವಾ ದಾಖಲಿಸಿರುವ ಮಾನನಷ್ಟ ಮೊಕದ್ದಮ್ಮೆ ಅರ್ಜಿಯು ಮಂಗಳವಾರ ನ್ಯಾಯಮೂರ್ತಿ ಸಚಿನ್ ದತ್ತಾ ಅವರ ಪೀಠದ ಮುಂದೆ ಬಂದಿದ್ದು, ಶುಕ್ರವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. ಸಂಸತ್ ಸದಸ್ಯ ಸ್ಥಾನದಿಂದ ವಜಾ ಮಾಡುವಂತೆ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ಪತ್ರ ಬರೆದಿದ್ದಾರೆ.

ಜೈ ಅನಂತ್ ಮಹುವಾ ಮಾಜಿ ಪಾರ್ಟ್ನರ್!

ಸುಪ್ರೀಂ ಕೋರ್ಟ್ ಲಾಯರ್ ಜೈ ಅನಂತ್ ದೇಹದ್ರಾಯ್ ಅವರು ಮಹುವಾ ಮೋಯಿತ್ರಾ ಅವರ ಒಂದು ಕಾಲದ ಪಾರ್ಟ್ನರ್ ಆಗಿದ್ದರು ಎನ್ನಲಾಗಿದೆ. ತಮ್ಮ ಸಾಕು ನಾಯಿ ಸಂಬಂಧ ಜಗಳವುಂಟಾಗಿ ಅವರಿಬ್ಬರು ದೂರಾದರು ಎಂದು ಹೇಳಲಾಗುತ್ತಿದೆ. ಟಿಎಂಸಿ ಸಂಸದೆ ಮಹುವಾ ಅವರು, ಕಳೆದ ಆರು ತಿಂಗಳಲ್ಲಿ ಅತಿಕ್ರಮಣ, ಕಳ್ಳತನ, ಅಸಭ್ಯ ಸಂದೇಶಗಳು ಮತ್ತು ನಿಂದನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಪೊಲೀಸರಿಗೆ ದೂರು ನೀಡಿದ್ದಾದಾರೆಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನಿಶಿಕಾಂತ್ ದುಬೆ ಹೇಳಿದ್ದೇನು?

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ತೃಣಮೂಲ ಕಾಂಗ್ರೆಸ್ ಶಾಸಕಿ ಮಹುವಾ ಮೋಯಿತ್ರಾ (MP Mahua Moitra) ಅವರು ಲಂಚ ಪಡೆದಿದ್ದಾರೆಂದು ಆರೋಪಿಸಿರುವ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು, ಕೂಡಲೇ ಅವರನ್ನು ಎಂಪಿ ಸ್ಥಾನದಿಂದ ಅಮಾನತು ಮಾಡಬೇಕೆಂದು (Suspend from Parliament) ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್(Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಮೋಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಹುವಾ ಮೋಯಿತ್ರಾ ಅವರ(ಬಿಜೆಪಿ ಸರ್ಕಾರ) ಯಾವುದೇ ರೀತಿಯ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ, ಹಿರಾನಂದನಿ ಗ್ರೂಪ್ ಕೂಡ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದೆ. ನಾವು ಯಾವಾಗಲೂ ಬಿಸಿನೆಸ್ ಮಾತ್ರ ಮಾಡುತ್ತಾ ಬಂದಿದ್ದೇವೆ. ರಾಜಕೀಯ ವ್ಯಾಪಾರ ನಮ್ಮದಲ್ಲ. ದೇಶದ ಹಿತರಕ್ಷಣೆಯ ದೃಷ್ಟಿಯಿಂದ ನಮ್ಮ ಕಂಪನಿಯು ಎಂದಿಗೂ ಕೆಲಸ ಮಾಡುತ್ತಾ ಬಂದಿದೆ ಮತ್ತು ಈ ಕೆಲಸವನ್ನು ಮುಂದುವರಿಸಲಿದೆ ಎಂದು ಹಿರಾನಂದಿನಿ ಗ್ರೂಪ್ ವಕ್ತಾರರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Defamation Case: ದಿಲ್ಲಿ ಸಿಎಂಗೆ ಮತ್ತೆ ಹಿನ್ನಡೆ! ಸಮನ್ಸ್ ಪ್ರಶ್ನಿಸಿದ್ದ ಪರಿಷ್ಕರಣೆ ಅರ್ಜಿ ತಿರಸ್ಕರಿಸಿದ ಸೆಷನ್ ಕೋರ್ಟ್

ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದಿನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೋಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಿನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version