Site icon Vistara News

ವಧುವಿನ ಹಣೆಗೆ ಸಿಂಧೂರ ಇಡುವ ಬದಲು ಎಲ್ಲೆಲ್ಲೋ ಸಿಂಪಡಿಸಿದ ವರ; ಮದುವೆಯೇ ಬೇಡವೆಂದು ಎದ್ದು ನಡೆದ ಯುವತಿ

Bride Cut off Marriage After Groom sprinkled vermilion on her Face In Uttar Pradesh

#image_title

ಲಖನೌ: ಇತ್ತೀಚಿನ ದಿನಗಳಲ್ಲಿ ಮಂಟಪದವರೆಗೆ ಹೋದ ಮದುವೆಗಳು ಅಲ್ಲಿ ರದ್ದುಗೊಳ್ಳುವುದು ಸಾಮಾನ್ಯಗಿದೆ. ವರ ಕುಡಿದಿದ್ದಾನೆಂದು, ವರನ ತಲೆ ಮೇಲೆ ಕೂದಲಿಲ್ಲ ಎಂಬ ಕಾರಣಕ್ಕೆ ವಧು ಮದುವೆ ಮುರಿದುಕೊಳ್ಳುವುದು, ವಧು ನೋಡಲು ಚೆನ್ನಾಗಿಲ್ಲ, ಆಕೆ ಓದಿಲ್ಲ ಎಂಬ ಕಾರಣಕ್ಕೆ ಮದುವೆ ದಿನವೇ ವರ ಮದುವೆಯನ್ನು ಕ್ಯಾನ್ಸೆಲ್​ ಮಾಡಿಕೊಂಡ ಹಲವು ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ. ಇದೇ ರೀತಿ ಒಂದು ಘಟನೆ ಉತ್ತರ ಪ್ರದೇಶ (Uttar Pradesh)ದಲ್ಲಿ ನಡೆದಿದೆ. ಈ ಸಲ ವಧು ‘ಸಿಂಧೂರ’ದ ಕಾರಣಕ್ಕೆ ಮಂಟಪದಿಂದ ಎದ್ದು ಹೊರನಡೆದಿದ್ದಾಳೆ. ಆಕೆಯ ಮನೆಯವರು, ಹುಡುಗನ ಮನೆಯವರು ಏನೆಲ್ಲ ಹೇಳಿ ಸಮಾಧಾನ ಮಾಡಲು ಯತ್ನಿಸಿದರೂ ಆಕೆಯ ಸಿಟ್ಟು ಕರಗಲೇ ಇಲ್ಲ. ಕೊನೆಗೂ ಮದುವೆ ಮುರಿದುಬಿದ್ದಿದೆ.

ಮಿರ್ಜಾಪುರ ಜಿಲ್ಲೆಯ ಮಾಣಿಕ್​ಪುರ ಎಂಬಲ್ಲಿ ಶುಕ್ರವಾರ (ಮೇ 4) ಒಂದು ಮದುವೆ ನಿಶ್ಚಯವಾಗಿತ್ತು. ಅದು ವಧುವಿನ ಊರು ಆಗಿದ್ದರಿಂದ, ವರ ಮತ್ತು ಅವನ ಕಡೆಯವರೆಲ್ಲ ಸಂಭ್ರಮದ ಮೆರವಣಿಗೆಯಲ್ಲಿ ಮಾಣಿಕ್​​ಪುರಕ್ಕೆ ತಲುಪಿದರು. ವಧುವಿನ ಕಡೆಯವರೆಲ್ಲ ಭರ್ಜರಿಯಾಗಿ ಸ್ವಾಗತ ಕೋರಿದರು. ಮದುವೆ ಪೂರ್ವವಾಗಿ ನಡೆಯಬೇಕಾದ ಶಾಸ್ತ್ರ-ಸಂಪ್ರದಾಯಗಳೆಲ್ಲ ಜರುಗಿದವು. ಆದರೆ ವರ ತನ್ನ ಮದುವೆ ಎಂಬ ಖುಷಿಗೆ ಜಾಸ್ತಿಯೇ ಕುಡಿದುಕೊಂಡು ಬಂದಿದ್ದೇ ಎಡವಟ್ಟಾಗಿದೆ..!

ಮಧ್ಯಾಹ್ನದ ಭೋಜನ ಮುಗಿದ ಬಳಿಕ ವಧು ಮತ್ತು ವರನನ್ನು ಮಂಟಪದಲ್ಲಿ ಕೂರಿಸಲಾಯಿತು. ಕಲ್ಯಾಣ ಮಂಟಪದಲ್ಲಿ ಮಾಡಬೇಕಾದ ಶಾಸ್ತ್ರಗಳು ಆಗಷ್ಟೇ ಪ್ರಾರಂಭವಾಗಿದ್ದವು. ಪ್ರತಿಯೊಂದು ಆಚರಣೆಯನ್ನೂ ತುಂಬ ಸಂಪ್ರದಾಯ ಬದ್ಧವಾಗಿಯೇ ಮಾಡಲಾಗುತ್ತಿತ್ತು. ಆಗ ಪುರೋಹಿತರು ವರನಿಗೆ ಕುಂಕುಮವನ್ನು ಕೊಟ್ಟು, ವಧುವಿಗೆ ಸಿಂಧೂರವಿಡುವಂತೆ ಹೇಳಿದರು. ವರ ಮೊದಲೇ ಕುಡಿದ ಅಮಲಿನಲ್ಲಿ ಇದ್ದ. ಆ ಅಮಲು ಇನ್ನೂ ಇಳಿದಿರಲೇ ಇಲ್ಲ. ಕುಂಕುಮವನ್ನು ವಧುವಿನ ಹಣೆ/ಬೈತಲೆಗೆ ಇಡುವ ಬದಲು ಆಕೆಯ ಕೆನ್ನೆ, ಇಡೀ ಮುಖ ಮತ್ತು ಇತರ ಕಡೆಗಳಿಗೆಲ್ಲ ಸಿಂಪಡಿಸಿದ್ದಾನೆ. ಕಿರಿಕಿರಿಗೊಂಡ ವಧು ಸಾಕು ನಿಲ್ಲಿಸು ಎಂದು ವರನಿಗೆ ಹಲವು ಬಾರಿ ಹೇಳಿದ್ದಾಳೆ. ಆದರೆ ವರ ಮಾತ್ರ ಕೇಳಿಸಕೊಳ್ಳದೆ ಕುಂಕುಮವನ್ನು ಹಾಕುತ್ತಲೇ ಇದ್ದ. ಸಿಟ್ಟಿಗೆದ್ದ ವಧು, ಮಂಟಪದಿಂದ ಹೊರನಡೆದಿದ್ದಾಳೆ. ಅಷ್ಟೆ ಅಲ್ಲ, ಆ ಹುಡುಗ ಬೇಡವೇ ಬೇಡ ಎಂದು ಹೇಳಿ, ಮಂಟಪದಿಂದ ಸೀದಾ ತನ್ನ ಮನೆಯ ದಾರಿಹಿಡಿದಿದ್ದಾಳೆ.

ಇದನ್ನೂ ಓದಿ: Viral Video| ತೆಲಂಗಾಣ ಯುವತಿ ಕಿಡ್ನ್ಯಾಪ್​​ ಕೇಸ್​​ನಲ್ಲಿ ಟ್ವಿಸ್ಟ್​; ಎಳೆದುಕೊಂಡು ಹೋದವನ ಒಪ್ಪಿ ಮದುವೆಯಾದ ಹುಡುಗಿ!

ಇದರಿಂದಾಗಿ ವರನ ಕಡೆಯವರು ಮತ್ತು ವಧುವಿನ ಕಡೆಯವರ ಮಧ್ಯೆ ಮಾತಿನ ಚಕಮಕಿ ಹೆಚ್ಚಾಗಿ ಗಲಾಟೆಯೇ ನಡೆದುಹೋಯಿತು. ಬಳಿಕ ಅಲ್ಲಿದ್ದವರು ಯಾರೋ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ, ಅವರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಆದರೆ ಮದುವೆ ಮಾತ್ರ ನಡೆಯಲಿಲ್ಲ. ಅಷ್ಟಾದ ಮೇಲೆ ಕೂಡ ಎರಡೂ ಕುಟುಂಬದವರು ಪೊಲೀಸ್ ಸ್ಟೇಶನ್​ಗೆ ಹೋಗಿದ್ದರು. ಮದುವೆ ಖರ್ಚನ್ನೆಲ್ಲ ವರನ ಕುಟುಂಬದವರೇ ಭರಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Exit mobile version