ಪಟನಾ: ಗುಜರಾತ್‌ನ ಮೊರ್ಬಿಯಲ್ಲಿ ಉದ್ಘಾಟನೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದು 141 ಜನ ಮೃತಪಟ್ಟ ಪ್ರಕರಣ ಜನರ ಮನಸ್ಸಿಂದ ಮರೆಮಾಚುವ ಮುನ್ನವೇ ಬಿಹಾರದಲ್ಲಿ ಉದ್ಘಾಟನೆಗೆ ಮೊದಲೇ ಸೇತುವೆಯೊಂದು (Bihar Bridge Collapse) ಕುಸಿದಿದೆ.
ಬೆಗುಸರಾಯ್‌ನ ಗಂಡಕ್ ನದಿಗೆ ಅಡ್ಡಲಾಗಿ 206 ಮೀಟರ್ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನಬಾರ್ಡ್ ಯೋಜನೆ ಅಡಿಯಲ್ಲಿ 13 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿತ್ತು. 2016ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿಯು 2017ರಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇದನ್ನು ಲೋಕಾರ್ಪಣೆ ಮಾಡಿರಲಿಲ್ಲ.
ಡಿಸೆಂಬರ್ 15ರಂದೇ ಸೇತುವೆಯ ಮುಂಭಾಗದಲ್ಲಿ ಬಿರುಕು ಬಿಟ್ಟಿದ್ದು ಗೊತ್ತಾಗಿತ್ತು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿಯನ್ನೂ ನೀಡಲಾಗಿತ್ತು. ಆದರೆ, ಸೇತುವೆ ದುರಸ್ತಿಗೊಳಿಸುವ ಮುನ್ನವೇ ಭಾನುವಾರ (ಡಿಸೆಂಬರ್ 18) ಕುಸಿದಿದೆ. ಕಳಪೆ ಕಾಮಗಾರಿ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಮೊರ್ಬಿ ಸೇತುವೆ ಕುಸಿತ, ಪ್ರಧಾನಿ ಮೋದಿ ವಿಚಾರದಲ್ಲಿ ಫೇಕ್ ಟ್ವೀಟ್; ಟಿಎಂಸಿ ವಕ್ತಾರ ಸಾಕೇತ್ ಗೋಖಲೆಯನ್ನು ಬಂಧಿಸಿದ ಗುಜರಾತ್ ಪೊಲೀಸ್