ಕೋಲ್ಕತ್ತಾ: ಬರೋಬ್ಬರಿ ಏಳು ದಶಕಗಳ ಇತಿಹಾಸವಿರುವ ಬ್ರಿಟಾನಿಯಾ ಇಂಡ್ರಸ್ಟ್ರೀಸ್(Britannia Industries closure) ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತನ್ನ ಉತ್ಪಾದನಾ ಘಟಕವನ್ನು ಮುಚ್ಚಲು ನಿರ್ಧರಿಸಿದೆ. ಕೋಲ್ಕತ್ತಾ(Kolkata)ದ ಕೋಲ್ಕತ್ತಾದ ತಾರಾತಲಾದಲ್ಲಿ ಈ ಕಾರ್ಖಾನೆಯನ್ನು 1947 ರಲ್ಲಿಯೇ ಸ್ಥಾಪಿಸಲಾಗಿದ್ದು, ಭಾರತದಲ್ಲಿ ಕಂಪನಿಯ ಆರಂಭಿಕ ವರ್ಷಗಳಲ್ಲಿ ಈ ಫ್ಯಾಕ್ಟರಿ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ದಿಢೀರ್ ಎನ್ನುವಂತೆ ತನ್ನ ಘಟಕವನ್ನು ಮುಚ್ಚಿರುವುದು ತೃಣಮೂಲ ಕಾಂಗ್ರೆಸ್(TMC) ಮತ್ತು ಬಿಜೆಪಿ(BJP) ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಮುಚ್ಚಲು ಕಾರಣವೇನು?
ಕೋಲ್ಕತ್ತಾದ ಕೈಗಾರಿಕಾ ಇತಿಹಾಸದಲ್ಲಿ ಹೆಗ್ಗುರುತಾಗಿರುವ ತಾರಾತಲಾ ಕಾರ್ಖಾನೆಯು ಕಳೆದ ಮೇ ತಿಂಗಳಲ್ಲಿ ತನ್ನ ಉತ್ಪಾದನೆಯನ್ನು ನಿಲ್ಲಿಸಿತು. ಇಂಡಸ್ಟ್ರೀಸ್ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ತಾರಾತಲಾ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದೆ. ಬ್ರಿಟಾನಿಯಾದ ಇತ್ತೀಚಿಗೆ ನೀಡಿರುವ ಪ್ರಕಟಣೆ ಪ್ರಕಾರ ಉತ್ಪಾದನೆಯನ್ನು ಉತ್ತಮಗೊಳಿಸಲು ಮತ್ತು ಕಾರ್ಯದಕ್ಷತೆಯನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇನ್ನುತಾರಾತಲಾ ಕಾರ್ಖಾನೆಯು ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ನಿಂದ 2048 ರವರೆಗೆ ಗುತ್ತಿಗೆ ಪಡೆದ 11 ಎಕರೆ ಗುತ್ತಿಗೆ ಭೂಮಿಯಲ್ಲಿದೆ. ಕಂಪನಿಯು ಮುಂದಿನ 24 ವರ್ಷಗಳವರೆಗೆ ಗುತ್ತಿಗೆಯನ್ನು ಉಳಿಸಿಕೊಳ್ಳುತ್ತದೆ.
150 ನೌಕರರಿಗೆ ಸಂಕಷ್ಟ
ತಾರಾತಲಾ ಕಾರ್ಖಾನೆ ಮುಚ್ಚುವುದರಿಂದ ಸುಮಾರು 150 ಉದ್ಯೋಗಿಗಳು ತೊಂದರೆಗೊಳಗಾಗಲಿದ್ದಾರೆ. ಈ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಕಂಪನಿಯು ಎಲ್ಲಾ ಖಾಯಂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಪ್ಯಾಕೇಜ್‌ಗಳನ್ನು ನೀಡಿದೆ. ಕಂಪನಿಯು ಸಲ್ಲಿಸಿದ ಬಿಎಸ್‌ಇ ಫೈಲಿಂಗ್ ಪ್ರಕಾರ ಎಲ್ಲಾ ಖಾಯಂ ಕಾರ್ಮಿಕರು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ಕಂಪನಿಯು ನೀಡುವ ಸ್ವಯಂ ನಿವೃತ್ತಿ ಯೋಜನೆಯನ್ನು ಎಲ್ಲಾ ಖಾಯಂ ಕೆಲಸಗಾರರು ಒಪ್ಪಿಕೊಂಡಿದೆ ಎಂದು ಈಗಾಗಲೇ ತಿಳಿಸಿದೆ. ಇನ್ನು ಸಂತ್ರಸ್ತ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್ ಅನ್ನು ನೀಡುತ್ತಿದೆ. ಹತ್ತು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಕಾಯಂ ನೌಕರರಿಗೆ 22 ಲಕ್ಷ ರೂ., ಏಳು ವರ್ಷ ಸೇವೆ ಸಲ್ಲಿಸಿದವರಿಗೆ 18 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಬಿಜೆಪಿ ಕಿಡಿ:
ಬ್ರಿಟಾನಿಯಾ ಇಂಡಸ್ಟ್ರೀಸ್ ಮುಚ್ಚಿರುವ ಘಟನೆಗೆ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಹೊಣೆಯನ್ನಾಗಿಸಿದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಖಾಂತ್ ಮಜುಮ್ದಾರ್, ಪ್ರಸ್ತು ಆಡಳಿತದಲ್ಲಿರುವ ತೃಣಮೂಲಕ ಕಾಂಗ್ರೆಸ್ ಕೈಗಾರಿಕೆಗಳ ವಿರೋಧಿ ಸರ್ಕಾರ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರತಿಕ್ರಿಯಿಸಿದ್ದು, ಬ್ರಿಟಾನಿಯಾ ಇಂಡಸ್ಟ್ರೀಸ್ ಕಾರ್ಖಾನೆಯ ಇಂದಿನ ಸ್ಥಗಿತವು ಬಂಗಾಳದ ಪ್ರಸ್ತುತ ಸ್ಥಿತಿಯನ್ನು ತೋರಿಸುತ್ತದೆ. ಒಂದು ಕಾಲದಲ್ಲಿ ಅದರ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಬೌದ್ಧಿಕ ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದ ಈ ಪ್ರದೇಶ ಇದೀಗ ಇಂತಹ ಅಸ್ಥಿರತೆಗೆ ಸಾಕ್ಷಿಯಾಗಿದೆ.