Site icon Vistara News

British Journalist: “ನವ ಭಾರತದ ಬಗ್ಗೆ ಪ್ರಪಂಚಕ್ಕೆ ತಿಳಿಸಬೇಕು”- ಇಂಡಿಯಾಗೆ ಮನಸೋತ ಬ್ರಿಟಿಷ್‌ ಪತ್ರಕರ್ತ

British Journalist

ನವದೆಹಲಿ: ಹಾವು ಆಡಿಸುವವರ ದೇಶ ಎಂದು ಭಾರತವನ್ನು ಜರಿಯುತ್ತಿದ್ದ ಪ್ರಪಂಚದ ದೊಡ್ಡ ದೊಡ್ಡ ರಾಷ್ಟ್ರಗಳು ಇತ್ತೀಚಿನ ಕೆಲವು ವರ್ಷಗಳಿಂದ ಭಾರತದ ಎದುರು ಮಂಡಿಯೂರಿದೆ ಎಂದರೆ ತಪ್ಪಾಗಲಾರದು. ಶತ್ರು ರಾಷ್ಟ್ರ ಪಾಕಿಸ್ತಾನ(Pakistan)ವೂ ಸೇರಿದಂತೆ ವಿವಿಧ ರಾಷ್ಟ್ರಗಳು ನಿರಂತರವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಭಾರತವನ್ನು ಹಾಡಿ ಹೊಗಳುತ್ತಿವೆ. ಇದೀಗ ಇಂಗ್ಲೆಂಡ್‌ನ ಪತ್ರಕರ್ತ(British Journalist)ನೋರ್ವ ಭಾರತ(India)ದ ಬಗ್ಗೆ ಬಹಳ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಇಂಗ್ಲೆಂಡ್‌ ಮೂಲಕ ಪತ್ರಿಕೆ ಡೈಲಿ ಎಕ್ಸ್‌ಪ್ರೆಸ್‌ನ ಸಹಾಯಕ ಸಂಪಾದಕರಾಗಿರುವ ಸ್ಯಾಮ್‌ ಸ್ಟೀವನ್‌ಸನ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಭಾರತದ ಬಗ್ಗೆ ಹೇಳಲು ಸಾಕಷ್ಟು ವಿಚಾರಗಳಿವೆ. ಭಾರತ ವಿರೋಧಿ ಎಂಬ ಬಕ್ವಾಸ್‌ ಚಿಂತನೆ ಮೂಲಕ ಭಾರತದ ಬಗ್ಗೆ ತಪ್ಪು ಮಾಹಿತಿ ಹಂಚುವ ಪ್ರಯತ್ನಗಳು ನಡೆಯುತ್ತಿದೆ. ನಾವು ಭಾರತದ ಬಗ್ಗೆ ಸತ್ಯವನ್ನು ಹೇಳಬೇಕಿದೆ. ಅಲ್ಲದೇ ನವ ಭಾರತದ ಧನಾತ್ಮಕವಾದ ವಿಚಾರಗಳನ್ನು ಪ್ರಪಂಚಕ್ಕೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.

ಭಾರತದ ಬಗ್ಗೆ ಇಂಗ್ಲೆಂಡ್‌ನಲ್ಲಿ ಕೆಲವೊಂದು ನಕಾರಾತ್ಮಕ ವಿಚಾರಗಳನ್ನು ತುಂಬಲಾಗುತ್ತಿದೆ. ಅದೂ ಅಲ್ಲದೇ ಇಡೀ ಯೂರೋಪ್‌ನಲ್ಲಿ ಭಾರತದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಹುಟ್ಟಿಸಿ ಹೇಳಲಾಗುತ್ತಿದೆ. ನಮಗೆ ಭಾರತದಲ್ಲಿ ಧಾರ್ಮಿಕ ಸಂಘರ್ಘ ಇರುವುದನ್ನೇ ಎತ್ತಿ ತೋರಿಸಲಾಗುತ್ತಿದೆ. ಆದರೆ ಭಾರತಕ್ಕೆ ಬಂದು ನೋಡದಾಗಲೇ ಕೇಳಿವ ವಿಚಾರಕ್ಕೂ ವಾಸ್ತವಕತೆಗೂ ಬಹಳಷ್ಟು ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೆ ಸಂಪೂರ್ಣವಾಗಿ ಬುರ್ಖಾ ಧರಿಸಿ ಮುಸ್ಲಿಂ ಮಹಿಳೆಯರು ಭಾಗಿಯಾಗುವುದನ್ನು ನಾನು ನೋಡಿದ್ದೇನೆ. ವಿವಿಧತೆಯಲ್ಲಿ ಏಕತೆ ಎಂಬ ವಿಚಾರವನ್ನು ನಾವು ಇಲ್ಲಿ ಮಾತ್ರ ಕಾಣಬಹುದಾಗಿದೆ. ನಾವು ಇಲ್ಲಿ ಭಾರತದ ಬಗ್ಗೆ ಸುದ್ದಿ ಕವರೇಜ್‌ಗಾಗಿ ಬಂದಿದ್ದೇವೆ. ನಾವು ಇಲ್ಲಿ ಭಾರತದ ಬಗ್ಗೆ ಹಲವು ನಿಜಾಂಶವನ್ನು ಕಂಡುಕೊಂಡಿದ್ದು, ಅವುಗಳನ್ನು ಲಂಡನ್‌ಗೆ ಮರಳಿ ಕೊಂಡೊಯ್ಯವುದೇ ನಮ್ಮ ಗುರಿ. ವಿದೇಶಿ ಮಾಧ್ಯಮಗಳಲ್ಲಿ ಭಾರತ ಬಗೆಗಿನ ನಕಾರಾತ್ಮಕ ಸುದ್ದಿಗಳ ಬಿತ್ತರದಿಂದ ನಾವು ಬೇಸತ್ತಿದ್ದೇವೆ. ಇದು ನಿಜಕ್ಕೂ ನಾಚಿಗೇಡಿನ ವಿಚಾರ. ನಿಜಕ್ಕೂ ಜನ ಇಲ್ಲಿ ಬಂದು ಕಣ್ಣಾರೆ ನೋಡಬೇಕು, ಇಲ್ಲಿ ಕೆಲ ಕಾಲ ಜನರೊಡನೆ ಬೆರೆಯಬೇಕು. ಆಗ ಮಾತ್ರ ಭಾರತ ಏನು ಎಂಬ ವಿಚಾರ ಅರ್ಥವಾಗಲು ಸಾಧ್ಯ ಎಂದು ತಿಳಿಸಿದ್ದಾರೆ.

Exit mobile version