Site icon Vistara News

ಬಿಪಿಎಲ್ ಕುಟುಂಬಗಳಿಗೆ ಉಚಿತ 5 ಲಕ್ಷ ರೂ. ವಿಮೆ, ಎಲ್ಲರಿಗೂ 400 ರೂ.ಗೆ ಸಿಲಿಂಡರ್! ಬಿಆರ್‌ಎಸ್ ಪ್ರಣಾಳಿಕೆ

brs poll manifesto, Free insurance, rss 400 lpg cylinder and many more scheme

ನವದೆಹಲಿ: ಬಡತನ ರೇಖೆಗಿಂತ (BPL Families) ಕೆಳಗಿರುವ ಎಲ್ಲರಿಗೂ 5 ಲಕ್ಷದವರೆಗೂ ಉಚಿತ ವಿಮೆ(Free Insurance Scheme), ರೈತ ಬಂಧು ಯೋಜನೆಯಡಿಯ ಸಹಾಯ ಧನ ಮೊತ್ತ 10 ಸಾವಿರ ರೂ.ನಿಂದ 16 ಸಾವಿರ ರೂ.ಗೆ ಏರಿಕೆ, 400 ರೂ.ಗೆ ಗ್ಯಾಸ್ ಸಿಲಿಂಡರ್(LPG Cylinder) ಸೇರಿದಂತೆ ಅನೇಕ ಜನಪ್ರಿಯ ಕೊಡುಗೆಗಳನ್ನು ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Election) ಭಾರತ್ ರಾಷ್ಟ್ರ ಸಮಿತಿ(BRS) ನೀಡಲು ಮುಂದಾಗಿದೆ. ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆ (BRS Manifesto) ಬಿಡುಗಡೆ ಮಾಡಿರುವ ಬಿಆರ್‌ಎಸ್ ಭರ್ಜರಿ ಉಚಿತ ಯೋಜನೆಗಳನ್ನು ಘೋಷಿಸಿದೆ. ತೆಲಂಗಾಣದಲ್ಲಿ ನವೆಂಬರ್ 30ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಹೈದ್ರಾಬಾದ್‌ನ ತೆಲಂಗಾಣ ಭವನದಲ್ಲಿ ಆಯೋಜಿಸಲಾಗಿದ್ದು ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಬಿಆರ್‌ಎಸ್ ಅಧ್ಯಕ್ಷರೂ ಆಗಿರುವ ಸಿಎಂ ಕೆ ಚಂದ್ರಶೇಖರ್ ರಾವ್ ಅವರು, ಈ ಹಿಂದಿನ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ತಮ್ಮ ಸರ್ಕಾರ ಈಡೇರಿಸಿದೆ. ಅತ್ಯುತ್ತಮ ನೀತಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಎಲ್ಲ ನಿಟ್ಟಿನಲ್ಲೂ ದೇಶದಲ್ಲಿ ನಂಬರ್ 1 ರಾಜ್ಯವಾಗಿ ಬೆಳೆದಿದೆ ಎಂದು ಹೇಳಿದರು.

ನಾವು ದೇಶದ ಅತ್ಯುತ್ತಮ ಆರ್ಥಿಕ ನೀತಿ, ಕೃಷಿ ನೀತಿ, ಕುಡಿಯುವ ನೀರಿನ ನೀತಿ, ನೀರಾವರಿ ನೀತಿ, ಇಂಧನ ನೀತಿ, ದಲಿತ ನೀತಿ, ಕಲ್ಯಾಣ ನೀತಿ, ಕೈಗಾರಿಕಾ ನೀತಿ ಮತ್ತು ವಸತಿ ನೀತಿಯನ್ನು ಹೊಂದಿದ್ದೇವೆ. ಈ ಎಲ್ಲ ನೀತಿಗಳನ್ನು ನಾವು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಈಗ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಈ ಎಲ್ಲ ಕೆಲಸಗಳನ್ನು ಮುಂದುವರಿಸುವುದು ಮಾತ್ರವಲ್ಲದೇ, ಎಲ್ಲ ರೀತಿಯಿಂದಲೂ ಜನರ ಬದುಕು ಹಸನಾಗುವ ಹೊರಸ ಯೋಜನೆಗಳನ್ನೂ ಘೋಷಿಸಿದ್ದೇವೆ ಎಂದು ಸಿಎಂ ಚಂದ್ರಶೇಖರ್ ರಾವ್ ಅವರು ಹೇಳಿದರು.

ರಾಜ್ಯದಲ್ಲಿ ಸುಮಾರು 93 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಅವರಿಗೆ ರೈತು ಬಿಮಾ ರೀತಿಯಲ್ಲಿ ಈ ಕುಟುಂಬಗಳಿಗೆ 5 ಲಕ್ಷದವರೆಗೂ ಜೀವ ವಿಮೆ ನೀಡಲಿದ್ದೇವೆ ಎಂದು ಸಿಎಂ ಚಂದ್ರಶೇಖರ್ ರಾವ್ ಅವರು ಹೇಳಿದರು. ಎಲ್ಲ ಫಲಾನುಭವಿಗಳ ಪ್ರೀಮಿಯಂ ಅನ್ನು ಸರ್ಕಾರವೇ ಭರಿಸಲಿದೆ. ಈ ಯೋಜನೆಯು ಕೇವಲ ಬಡವರಿಗೆ ಮಾತ್ರ ಲಾಭವಲ್ಲ, ಬದಲಿಗೆ ನಷ್ಟದಲ್ಲಿರುವ ಎಲ್ಐಸಿಗೂ ಜೀವ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಮೋದಿ ಎಂಟ್ರಿ: ಬಿಜೆಪಿ ಮುಖಂಡರೊಂದಿಗೆ ಸಭೆ

ತೆಲಂಗಾಣ ಅನ್ನಪೂರ್ಣ ಸ್ಕೀಮ್‌ನಡಿ ಎಲ್ಲ ರೇಷನ್ ಕಾರ್ಡ್‌ದಾರರಿಗೆ ಅತ್ಯುತ್ತಮ ಅಕ್ಕಿಯನ್ನು ಪೂರೈಸಲಾಗುವುದು.
ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಆಸರಾ ಯೋಜನೆಯಡಿ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮುಂದಿನ ಐದು ವರ್ಷಗಳಲ್ಲಿ 2,016 ರಿಂದ 6,000 ರೂ. ಹೆಚ್ಚಿಸಲಾಗುವುದು. ಮುಂಬರುವ ವರ್ಷದಲ್ಲಿ ಇದನ್ನು 3,016 ಮಾಡಲಾಗುವುದು ಮತ್ತು ಮುಂದಿನ ಐದು ವರ್ಷಗಳಲ್ಲಿ ಕ್ರಮೇಣ 6,000ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಕೆಸಿಆರ್ ಅವರು ತಿಳಿಸಿದರು.

ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಅಸ್ತಿತ್ವದಲ್ಲಿರುವ ವಸತಿ ಸಂಸ್ಥೆಗಳ ಮಾದರಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದರಂತೆ ಮೇಲ್ಜಾತಿ ಜನರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 119 ವಸತಿ ಶಾಲೆಗಳನ್ನು ಸ್ಥಾಪನೆ. ಕೆಲವು ವಸತಿ ಜೂನಿಯರ್ ಕಾಲೇಜುಗಳನ್ನು ಪವದಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸುವ ಭರವಸೆಯನ್ನು ಕೆಸಿಆರ್ ನೀಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version