Site icon Vistara News

BSNL to Launch 5G | ಆರೇಳು ತಿಂಗಳಲ್ಲಿ ಬಿಎಸ್‌ಎನ್‌ಎಲ್‌ 5ಜಿ ಆರಂಭ, ದೇಶದ ಎಲ್ಲೆಲ್ಲಿ ಸೇವೆ ಲಭ್ಯ?

BSNL 5G Service

ನವದೆಹಲಿ: ದೇಶದಲ್ಲಿ ಈಗ ೫ಜಿ ಯುಗ ಆರಂಭವಾಗಿದೆ. ನಿಧಾನವಾಗಿ ಒಂದೊಂದೇ ನಗರಗಳು ೫ಜಿ ಸೇವೆಗೆ ತೆರೆದುಕೊಳ್ಳುತ್ತಿವೆ. ಜಿಯೋ, ಏರ್‌ಟೆಲ್‌ ಸೇರಿ ಹಲವು ಟೆಲಿಕಾಮ್‌ ಕಂಪನಿಗಳು ಜನರಿಗೆ ೫ಜಿ ನೆಟ್‌ವರ್ಕ್‌ ಒದಗಿಸುತ್ತಿವೆ. ಇದರ ಬೆನ್ನಲ್ಲೇ ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ (BSNL to Launch 5G) ಕೂಡ ಶೀಘ್ರದಲ್ಲೇ ೫ಜಿ ಸೇವೆ ಒದಗಿಸಲಿದೆ.

ಬಿಎಸ್‌ಎನ್‌ಎಲ್‌ ೫ಜಿ ಕುರಿತು ಕೇಂದ್ರ ಟೆಲಿಕಾಮ್‌ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಾಹಿತಿ ನೀಡಿದ್ದಾರೆ. “ದೇಶಾದ್ಯಂತ ೫-೭ ತಿಂಗಳಲ್ಲಿ ಬಿಎಸ್‌ಎನ್‌ಎಲ್‌ ೪ಜಿ ಸೇವೆಯನ್ನು ೫ಜಿ ಸೇವೆ ಅಪ್‌ಗ್ರೇಡ್‌ ಮಾಡಲಾಗುತ್ತದೆ. ದೇಶದಲ್ಲಿರುವ ೧.೩೫ ಲಕ್ಷ ಟೆಲಿಕಾಮ್‌ ಟವರ್‌ಗಳು ಕೂಡ ೫ಜಿ ನೆಟ್‌ವರ್ಕ್‌ ಸೇವೆ ನೀಡಲಿವೆ” ಎಂದು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಬಿಎಸ್‌ಎನ್‌ಎಲ್‌ಗೆ ೫ ಕೋಟಿಗೂ ಅಧಿಕ ಗ್ರಾಹಕರಿದ್ದಾರೆ.

ದೇಶೀಯ ಸಂಶೋಧನೆಗೆ ೪ ಸಾವಿರ ಕೋಟಿ ರೂ. ವೆಚ್ಚ

“ಬಿಎಸ್‌ಎನ್‌ಎಲ್‌ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ದೇಶೀಯವಾಗಿ ಸಂಶೋಧನೆ, ನಾವೀನ್ಯತೆಗಾಗಿ ವಾರ್ಷಿಕವಾಗಿ ಖರ್ಚು ಮಾಡುವ ೫೦೦ ಕೋಟಿ ರೂಪಾಯಿಯನ್ನು ೪ ಸಾವಿರ ಕೋಟಿ ರೂಪಾಯಿಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ” ಎಂದು ಕೂಡ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇದನ್ನೂ ಓದಿ | Reliance Jio | ಗುಜರಾತ್‌ನ ಎಲ್ಲ ಜಿಲ್ಲೆಗಳಲ್ಲೂ ಜಿಯೋ 5ಜಿ ಸೇವೆ! ಇದು ದೇಶದ ಮೊದಲ ರಾಜ್ಯ

Exit mobile version