ನವ ದೆಹಲಿ ಈ ಬಾರಿಯ ಕೇಂದ್ರ ಸರ್ಕಾರ ಬಜೆಟ್ (Union Budget 2023)ನಲ್ಲಿ ರೈಲ್ವೆ ವಲಯಕ್ಕೆ ಬಂಪರ್ ಅನುದಾನ ಸಿಕ್ಕಿದೆ. ಹಿಂದೆಂದೂ ನೀಡಿರದಷ್ಟು ಹಣವನ್ನು ಈ ಸಲದ ಬಜೆಟ್ನಲ್ಲಿ ರೈಲ್ವೆ ಕ್ಷೇತ್ರಕ್ಕೆ ಕೊಡಲಾಗಿದೆ. ಅಂದರೆ ರೈಲ್ವೆ ವಲಯಾಭಿವೃದ್ಧಿಗೆ ಈ ಬಾರಿ 2.40 ಲಕ್ಷ ರೂಪಾಯಿ ಹಂಚಿಕೆಯಾಗಿದೆ. 2013-14ರ ಬಜೆಟ್ನಲ್ಲಿ ರೈಲ್ವೆ ವಲಯಕ್ಕೆ ನೀಡಲಾಗಿದ್ದ ಹಣದ 9ಪಟ್ಟು ಹೆಚ್ಚು ಇದು ಎಂಬುದು ವಿಶೇಷ.
ರೈಲ್ವೆ ವಲಯದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ ನಿರ್ಮಲಾ ಸೀತಾರಾಮನ್ ಅವರು, 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಹಾಗೇ, ವಂದೇ ಭಾರತ್ ರೈಲು ಸಂಚಾರ ವಿಸ್ತರಣೆಯ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳುವುದು ಈ ಯೋಜನೆಯಲ್ಲಿ ಸೇರಿದೆ ಎಂದು ಹೇಳಿದರು.
ಇದನ್ನೂ ಓದಿ: Union Budget 2023: ಗುಜರಿ ವಾಹನವೂ ಬೇಡ, ಗುಜರಿ ರಾಜಕೀಯವೂ ಬೇಡ! ನಿರ್ಮಲಾ ಅಣಿಮುತ್ತು!