ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್ (Budget 2023 )ಬಜೆಟ್ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನಕ್ಕೆ ತಲುಪಿದ್ದು, ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ 2023-24 ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
ಆರ್ಥಿಕ ಸಮೀಕ್ಷೆಯ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಅನ್ನು ಕ್ಲಿಕ್ಕಿಸಿ
Economic Survey 2023 Highlights : ಕೋವಿಡ್‌ನಿಂದ ಚೇತರಿಸಿರುವ ಆರ್ಥಿಕತೆಯ ಬೆಳವಣಿಗೆ ಪ್ರಬಲ, ಸಾಲದ ಬಡ್ಡಿ ದರ ಏರುಗತಿ
ಸಣ್ಣ ಉದ್ದಿಮೆ, ಭಾರಿ ಕೈಗಾರಿಕೆ, ಸೇವೆ, ಆಹಾರೇತರ ವಲಯಗಳಲ್ಲಿ ಸಾಲದ ವಿತರಣೆ ಚುರುಕಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ವಸೂಲಾಗದಿರುವ ಸಾಲದ ಪ್ರಮಾಣ 15 ತಿಂಗಳಿನಲ್ಲಿಯೇ ಕನಿಷ್ಟ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಸಿಇಎ ಅನಂತ ನಾಗೇಶ್ವರನ್ ತಿಳಿಸಿದ್ದಾರೆ.
ತೈಲ ಬೆಲೆಯನ್ನು ಮುಂಚಿತವಾಗಿ ಗ್ರಹಿಸುವುದು ಕಷ್ಟಕರವಾಗಿದೆ. ಆರ್‌ಬಿಐ ಪ್ರಕಾರ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಗೆ ಇರಬಹುದು. ಇದನ್ನು ಆಧರಿಸಿ ಜಿಡಿಪಿ ಬೆಳವಣಿಗೆಯನ್ನು ಬಿಂಬಿಸಲಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ತಿಳಿಸಿದ್ದಾರೆ.
ಭಾರತದ ಕೃಷಿ ಕ್ಷೇತ್ರ ಪ್ರಸಕ್ತ ಸಾಲಿನಲ್ಲೂ ಪ್ರಬಲ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ. ಕಳೆದ 6 ವರ್ಷಗಳಲ್ಲಿ ವಾರ್ಷಿಕ ಸರಾಸರಿ 4.6% ರ ಪ್ರಗತಿ ದಾಖಲಿಸಿತ್ತು. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ವಿಸ್ತರಣೆ, ಕೃಷಿ ವೈವಿಧ್ಯತೆಗೆ ಬೆಂಬಲಿಸಿರುವುದು ಸಕಾರಾತ್ಮಕ ಬೆಳವಣಿಗೆಗೆ ಕಾರಣ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.