Site icon Vistara News

Budget 2023 Live: ಅಮೃತ ಕಾಲದ ಈ ಬಜೆಟ್​ ದೇಶದ ಅಭಿವೃದ್ಧಿಗೆ ಗಟ್ಟಿ ಬುನಾದಿ ಎಂದ ಪ್ರಧಾನಿ ಮೋದಿ

budgetlive

ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ (Budget 2023 )ಬಜೆಟ್​ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್‌ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

Keshava prasad B

ಆರ್ಥಿಕ ಸಮೀಕ್ಷೆಯ ಪ್ರಕಾರ ಅಧಿಕ ಬಂಡವಾಳ ವೆಚ್ಚ, ಖಾಸಗಿ ಬಳಕೆ, ಸಾಲ ಬೆಳವಣಿಗೆ, ಕಿರು ಉದ್ದಿಮೆಗಳ ಪ್ರಗತಿ, ಕಾರ್ಪೊರೇಟ್‌ ಕಂಪನಿಗಳ ಆದಾಯ ಹೆಚ್ಚಳ, ನಗರಗಳಿಗೆ ಕಾರ್ಮಿಕರ ಮರು ವಲಸೆಯಿಂದ ಆರ್ಥಿಕ ಬೆಳವಣಿಗೆ ವೃದ್ಧಿಸಿದೆ.

Keshava prasad B

ಭಾರತವು 2023-24ರಲ್ಲಿ ವಿಶ್ವದಲ್ಲಿಯೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಆರ್ಥಿಕ ಸಮೀಕ್ಷೆ ಭವಿಷ್ಯ ನುಡಿದಿದೆ.

Keshava prasad B

ಕೋವಿಡ್‌ ಬಿಕ್ಕಟ್ಟಿನಿಂದ ಮತ್ತು ಯುರೋಪ್‌ ಸಂಘರ್ಷದಿಂದಾಗಿ ಕಳೆದುಕೊಂಡಿದ್ದ ಆರ್ಥಿಕ ನಷ್ಟವನ್ನು ಭಾರತ ಬಹುತೇಕ ಸರಿದೂಗಿಸಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

Keshava prasad B

ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ವ್ಯಾಪಾರ ಕುಸಿತದ ಪರಿಣಾಮ ಪ್ರಸಕ್ತ ಸಾಲಿನ ದ್ವಿತೀಯಾರ್ಧದಲ್ಲಿ (ಅಕ್ಟೋಬರ್ ಬಳಿಕ) ರಫ್ತು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

Keshava prasad B

ಆಮದು-ರಫ್ತು ನಡುವಣ ಅಂತರ ಹೆಚ್ಚಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಸಿಎಡಿ (ಚಾಲ್ತಿ ಖಾತೆ ಕೊರತೆ) ಮತ್ತು ಡಾಲರ್‌ ಎದುರು ರೂಪಾಯಿ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ.

Exit mobile version