Site icon Vistara News

Budget 2023 Live: ಅಮೃತ ಕಾಲದ ಈ ಬಜೆಟ್​ ದೇಶದ ಅಭಿವೃದ್ಧಿಗೆ ಗಟ್ಟಿ ಬುನಾದಿ ಎಂದ ಪ್ರಧಾನಿ ಮೋದಿ

budgetlive

ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ (Budget 2023 )ಬಜೆಟ್​ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್‌ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

Keshava prasad B

ಜಾಗತಿಕ ಮಟ್ಟದಲ್ಲಿ ತಲ್ಲಣಗಳ ಹೊರತಾಗಿಯೂ ಭಾರತದ ಆರ್ಥಿಕ ಬೆಳವಣಿಗೆ ಅಬಾಧಿತವಾಗಿ ಮುಂದುವರಿದಿದೆ. ಮೂಲಭೂತ ಅಂಶಗಳು ಪ್ರಬಲವಾಗಿರುವುದು ಇದಕ್ಕೆ ಕಾರಣ: ಆರ್ಥಿಕ ಸಮೀಕ್ಷೆ

Keshava prasad B

ಭಾರತವು ಕೋವಿಡ್-‌19 ಬಿಕ್ಕಟ್ಟಿನಿಂದ ತ್ವರಿತವಾಗಿ ಚೇತರಿಸಿದೆ. ದೇಶೀಯ ಮಾರುಕಟ್ಟೆಯ ಬೇಡಿಕೆ ಚುರುಕಾಗಿದೆ. ಬಂಡವಾಳ ಹೂಡಿಕೆ ಪ್ರಗತಿಯಲ್ಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

Keshava prasad B

2023ರ ಏಪ್ರಿಲ್‌ 1ರಿಂದ ಆರಂಭವಾಗುವ 2023-24ರ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6%ರಿಂದ 6.8%ಕ್ಕೆ ಏರಿಕೆಯಾಗಲಿದೆ ಎಂದು ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ ತಿಳಿಸಿದೆ. 2022-23 ರಲ್ಲಿ 7% ಜಿಡಿಪಿ ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ ಇಳಿಕೆಯಾಗಲಿದೆ.

Keshava prasad B

ಜನ ಜೀವನ ಗುಣಮಟ್ಟ ಸುಧಾರಣೆಯೇ ಬಜೆಟ್‌ ಗುರಿ, ಚುನಾವಣೆ ಅಲ್ಲ: ಕೇಂದ್ರ ಸಚಿವ ಪಂಕಜ್‌ ಚೌಧುರಿ

ಹೆಚ್ಚಿನ ಮಾಹಿತಿಗೆ ಈ ಲಿಂಕ್‌ ಕ್ಲಿಕ್ಕಿಸಿ

Budget 2023 : ಜನ ಜೀವನ ಗುಣಮಟ್ಟ ಸುಧಾರಣೆಯೇ ಬಜೆಟ್‌ ಗುರಿ, ಚುನಾವಣೆ ಅಲ್ಲ: ಕೇಂದ್ರ ಸಚಿವ ಪಂಕಜ್‌ ಚೌಧುರಿ
Exit mobile version