Site icon Vistara News

Budget 2023 Live: ಅಮೃತ ಕಾಲದ ಈ ಬಜೆಟ್​ ದೇಶದ ಅಭಿವೃದ್ಧಿಗೆ ಗಟ್ಟಿ ಬುನಾದಿ ಎಂದ ಪ್ರಧಾನಿ ಮೋದಿ

budgetlive

ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ (Budget 2023 )ಬಜೆಟ್​ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್‌ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

Lakshmi Hegde

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ವೆಚ್ಚವನ್ನು ಶೇ.66ರಿಂದ 79,000 ಕೋಟಿ ರೂಪಾಯಿಗೆ ಹೆಚ್ಚಳ

Lakshmi Hegde

ಮಕ್ಕಳಿಗಾಗಿ ಏನು ಯೋಜನೆ?

1.ಮಕ್ಕಳು ಮತ್ತು ಹದಿಹರೆಯದವರಿಗಾಗಿ ಡಿಜಿಟಲ್​ ಲೈಬ್ರರಿ ಯೋಜನೆ

2. ರಾಷ್ಟ್ರೀಯ ಪುಸ್ತಕ ಟ್ರಸ್ಟ್​, ಮಕ್ಕಳ ಬುಕ್​ ಟ್ರಸ್ಟ್​ ನಿರ್ಮಾಣ. ಪ್ರತಿ ರಾಜ್ಯಗಳ ಪಂಚಾಯಿತಿ ಮತ್ತು ವಾರ್ಡ್​ ಮಟ್ಟದಲ್ಲಿ ಮಕ್ಕಳಿಗಾಗಿ ಭೌತಿಕ ಗ್ರಂಥಾಲಯಗಳನ್ನು ನಿರ್ಮಿಸಿ, ಅದರಲ್ಲಿ ಡಿಜಿಟಲ್​ ಲೈಬ್ರರಿಗೆ ಸಂಬಂಧಪಟ್ಟ ಮೂಲಸೌಕರ್ಯಗಳನ್ನು ಇಡುವಂತೆ ರಾಜ್ಯಗಳಿಗೆ ಉತ್ತೇಜನ ನೀಡುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ.

Lakshmi Hegde

ಶಿಕ್ಷಣ ಕ್ಷೇತ್ರಕ್ಕೆ ಏನೇನು ಕೊಡುಗೆ?

1. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಉತ್ತೇಜನಕ್ಕಾಗಿ ಮೂರು ಕೇಂದ್ರಗಳನ್ನು ಸ್ಥಾಪಿಸಲಾಗುವುದು.

2. 2014ರಿಂದ ಇಲ್ಲಿಯವರೆಗೆ 157 ವೈದ್ಯಕೀಯ ಕಾಲೇಜುಗಳು ಸ್ಥಾಪನೆಗೊಂಡಿವೆ. ಅದರೊಂದಿಗೆ ಇನ್ನೂ 157 ಹೊಸ ನರ್ಸಿಂಗ್​ ಕಾಲೇಜುಗಳ ಸ್ಥಾಪನೆ.

3.ಮುಂದಿನ ಮೂರು ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣ. ಸುಮಾರು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ವಿವಿಧ ಶಾಲೆಗಳಿಗೆ 38,800 ಶಿಕ್ಷಕರನ್ನು ಮತ್ತು 740 ಸಹಾಯಕ ಸಿಬ್ಬಂದಿ ನೇಮಕ.

Lakshmi Hegde

ಹೊಸ ತೆರಿಗೆ ವ್ಯವಸ್ಥೆ ಸ್ಲ್ಯಾಬ್​ ಹೀಗಿದೆ..

3 ಲಕ್ಷ ರೂಪಾಯಿವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿ ಅಗತ್ಯವಿಲ್ಲ. 3 ರಿಂದ 6 ಲಕ್ಷ ರೂಪಾಯಿ ಆದಾಯ ಇರುವವರು ಶೇ.5ರಷ್ಟು, 6-9 ಲಕ್ಷ ರೂಪಾಯಿ ಆದಾಯ ಇದ್ದವರು ಶೇ.10ರಷ್ಟು, 9-12 ಲಕ್ಷ ರೂಪಾಯಿ ಆದಾಯಕ್ಕೆ ಶೇ.15ರಷ್ಟು ಮತ್ತು 12-15 ಲಕ್ಷ ರೂಪಾಯಿ ಆದಾಯಕ್ಕೆ ಶೇ.20ರಷ್ಟು ತೆರಿಗೆ ಕಟ್ಟಬೇಕಾಗಿದೆ.

Lakshmi Hegde

ಒಳಚರಂಡಿ ಸ್ವಚ್ಛತೆಗೆ ಯಂತ್ರಗಳ ಬಳಕೆ

ಈ ಸಲ ಬಜೆಟ್​ನಲ್ಲಿ ಒಳಚರಂಡಿ ವ್ಯವಸ್ಥೆಗೆ ಸಂಬಂಧಪಟ್ಟಂತೆ ನಿರ್ಮಲಾ ಸೀತಾರಾಮನ್​ ಅವರು ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ. ಒಳಚರಂಡಿ ವ್ಯವಸ್ಥೆಯನ್ನು ಮ್ಯಾನ್​ಹೋಲ್​​ಗಳಿಂದ ಮಶಿನ್​ ಮೋಡ್​​ಗೆ ರೂಪಾಂತರ ಮಾಡಲಾಗುವುದು. ಈ ಯೋಜನೆಯಡಿ ದೇಶಾದ್ಯಂತ ಇರುವ ಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್​​ಗಳನ್ನು ಯಂತ್ರಗಳ ಮೂಲಕವೇ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು

Exit mobile version