Site icon Vistara News

Budget 2023 Live: ಅಮೃತ ಕಾಲದ ಈ ಬಜೆಟ್​ ದೇಶದ ಅಭಿವೃದ್ಧಿಗೆ ಗಟ್ಟಿ ಬುನಾದಿ ಎಂದ ಪ್ರಧಾನಿ ಮೋದಿ

budgetlive

ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ (Budget 2023 )ಬಜೆಟ್​ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್‌ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

Lakshmi Hegde

ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂಪಾಯಿ ಆದಾಯದವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಹಾಗೇ, 9 ಲಕ್ಷ ರೂಪಾಯಿವರೆಗೆ ಆದಾಯ ಇರುವವರು 45 ಸಾವಿರ ರೂಪಾಯಿ ತೆರಿಗೆ ಪಾವತಿ ಮಾಡಬೇಕು.

Lakshmi Hegde

ಆದಾಯ ತೆರಿಗೆ ವಿನಾಯತಿ 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಏರಿಕೆ

Lakshmi Hegde

ಯಾವುದು ಇಳಿಕೆ? ಯಾವುದು ಏರಿಕೆ?

ಮೊಬೈಲ್​, ಟಿವಿ ಬಿಡಿ ಭಾಗಗಳು, ಕ್ಯಾಮರಾ ಲೆನ್ಸ್​​ಗಳ ಬೆಲೆ ಇಳಿಕೆಯಾಗಲಿದೆ ಮತ್ತು ಚಿನ್ನಾಭರಣಗಳು, ವಜ್ರಾಭರಣಗಳು, ಸಿಗರೇಟ್​​ ಬೆಲೆ ಏರಿಕೆಯಾಗಲಿದೆ.

Lakshmi Hegde

ಸರ್ಕಾರದ ಆದಾಯ ಹಾಗೂ ಖರ್ಚು ನಡುವಿನ ವ್ಯತ್ಯಾಸವನ್ನು ಅಂದರೆ ವಿತ್ತೀಯ ಕೊರತೆಯನ್ನು 2025-26ರ ಹೊತ್ತಿಗೆ ಶೇ 4.5ಕ್ಕಿಂತಲೂ ಕಡಿಮೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್​ ಘೋಷಣೆ

Lakshmi Hegde

ಮಹಿಳೆಯರಿಗೆ ಬಂಪರ್ ಗಿಫ್ಟ್​

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ‘ಮಹಿಳಾ ಸಮ್ಮಾನ್‌ ಬಚತ್‌ ಯೋಜನೆ’ಯನ್ನು ನಿರ್ಮಲಾ ಸೀತಾರಾಮನ್‌ ಬಜೆಟ್​​ನಲ್ಲಿ ಘೋಷಿಸಿದರು. ಈ ಯೋಜನೆಯಡಿ ಮಹಿಳೆಯರ ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ 2 ಲಕ್ಷ ರೂಪಾಯಿವರೆಗೆ ಠೇವಣಿ ಇಡಬಹುದು. ಮಹಿಳಾ ಸಮ್ಮಾನ್‌ ಉಳಿತಾಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. 2 ವರ್ಷದವರೆಗೆ ಅಂದರೆ 2025ರ ಮಾರ್ಚ್‌ವರೆಗೆ ಈ ಠೇವಣಿ ಅವಧಿ ಇರಲಿದ್ದು, ವಾರ್ಷಿಕ 7.5% ಬಡ್ಡಿ ನೀಡಲಾಗುತ್ತದೆ. ಈ ಠೇವಣಿಯಲ್ಲಿ ಭಾಗಶಃ ಹಣವನ್ನು ಹಿಂಪಡೆಯಲೂ ಅವಕಾಶವಿದೆ ಎಂದರು.

Exit mobile version