ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್ (Budget 2023 )ಬಜೆಟ್ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..
ಬಂಡವಾಳ ಹೂಡಿಕೆ ವೆಚ್ಚ ಹೆಚ್ಚಳ
ಕೇಂದ್ರ ಸರ್ಕಾರದ ಬಂಡವಾಳ ಹೂಡಿಕೆ ವೆಚ್ಚವನ್ನು ಶೇ.33ರಿಂದ 10 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗುವುದು. ಇದು ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ)ದ ಶೇ.3.3ರಷ್ಟಾಗಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
ರಾಜ್ಯಗಳ 50 ವರ್ಷಗಳ ಬಡ್ಡಿರಹಿತ ಸಾಲ ಯೋಜನೆ ಮತ್ತೊಂದು ವರ್ಷಕ್ಕೆ ವಿಸ್ತರಣೆ..
50-year interest free loan to State governments extended for one more year: FM Sitharaman https://t.co/DUMtCAeWbe
— ANI (@ANI) February 1, 2023
ನಷ್ಟವಾಗಿರುವ, ವಿಫಲವಾಗಿರುವ ಮಧ್ಯಮ ಗಾತ್ರದ ಉದ್ದಿಮೆಗಳಿಗಾಗಿ ರಿಫಂಡ್ ಯೋಜನೆ ಜಾರಿ ಮಾಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದರು.
ಕುಶಲಕರ್ಮಿಗಳಿಗೆ ಪ್ಯಾಕೇಜ್
ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ವಿಕಾಸ್ ಯೋಜನೆಯಡಿ ಸಾಂಪ್ರದಾಯಿಕ ಉತ್ಪನ್ನಗಳ ಗುಣಮಟ್ಟ, ಪ್ರಮಾಣ, ವ್ಯಾಪ್ತಿಯನ್ನು ಹೆಚ್ಚಿಸಿ, ಅವುಗಳನ್ನು ಇನ್ನಷ್ಟು ಸಕ್ರಿಯಗೊಳಿಸಲಾಗುವುದು. ಹಾಗೇ, ಕುಶಲಕರ್ಮಿಗಳಿಗಾಗಿ ತರಬೇತಿ, ಬ್ರ್ಯಾಂಡ್ ಪ್ರಚಾರ, ಮಾರುಕಟ್ಟೆ ಸಂಪರ್ಕ, ಸಾಮಾಜಿಕ ಭದ್ರತೆಗೆ ಹಣಕಾಸಿನ ಬೆಂಬಲ ಮತ್ತು ಪ್ರವೇಶ ನೀಡಲು ಯೋಜನೆ ರೂಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರೈಲ್ವೆ ವಲಯದ ಅಭಿವೃದ್ಧಿಗಾಗಿ 2.40 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್. ಹಾಗೇ, ದೇಶದಲ್ಲಿ 50 ಹೆಚ್ಚುವರಿ ಏರ್ಪೋರ್ಟ್ ನಿರ್ಮಾಣ ಮಾಡುವುದಾಗಿಯೂ ಹೇಳಿದ್ದಾರೆ.