Site icon Vistara News

Budget 2023 Live: ಅಮೃತ ಕಾಲದ ಈ ಬಜೆಟ್​ ದೇಶದ ಅಭಿವೃದ್ಧಿಗೆ ಗಟ್ಟಿ ಬುನಾದಿ ಎಂದ ಪ್ರಧಾನಿ ಮೋದಿ

budgetlive

ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ (Budget 2023 )ಬಜೆಟ್​ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್‌ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

Lakshmi Hegde

ಬಜೆಟ್​ ಮಂಡನೆ ಪ್ರಾರಂಭ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಂಸತ್ತಿನಲ್ಲಿ ಬಜೆಟ್​ ಮಂಡನೆ ಭಾಷಣ ಪ್ರಾರಂಭ ಮಾಡಿದರು.

Lakshmi Hegde

ಸಂಸತ್ತಿಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​

ಐದನೇ ಬಜೆಟ್​ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೆಂಪು ಸಂಚಿ ಹಿಡಿದು ಸಂಸತ್ತಿಗೆ ಆಗಮಿಸಿದ್ದಾರೆ. ಅವರೊಂದಿಗೆ ಅವರ ಸಚಿವಾಲಯದ ಇನ್ನಿತರ ಅಧಿಕಾರಿಗಳೂ ಇದ್ದಾರೆ.

Keshava prasad B

ಈಗಿನ ಅದಾಯ ತೆರಿಗೆ ಶ್ರೇಣಿ 0-2,50,000 ರೂ. ತನಕ ಇಲ್ಲ, 2,50,001-5,00,000 ರೂ. ತನಕ 5%, 5,00,001-7,50,00 ರೂ. ತನಕ 10%, 7,50,001-10,00,000 ರೂ. ತನಕ 15 %, 10,00,001-12,50,000 ರೂ. ತನಕ 20%, 12,50,001-15,00,000 ರೂ. ತನಕ 25%, ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಿಂದ ಏರಿಕೆ, ತೆರಿಗೆ ದರ ಇಳಿಕೆ ನಿರೀಕ್ಷೆ

Keshava prasad B

ಹೊಸ ವಂದೇ ಭಾರತ್‌ ರೈಲುಗಳ ಘೋಷಣೆ, ರೈಲ್ವೆ ಮಾರ್ಗಗಳ ವಿದ್ಯುದೀಕರಣ ನಿರೀಕ್ಷೆ

Keshava prasad B

ಬಜೆಟ್‌ ಮಂಡನೆಗೆ ಮುನ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭ

Exit mobile version