Site icon Vistara News

Budget 2023 Live: ಅಮೃತ ಕಾಲದ ಈ ಬಜೆಟ್​ ದೇಶದ ಅಭಿವೃದ್ಧಿಗೆ ಗಟ್ಟಿ ಬುನಾದಿ ಎಂದ ಪ್ರಧಾನಿ ಮೋದಿ

budgetlive

ಕೇಂದ್ರ ಸರ್ಕಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ (Budget 2023 )ಬಜೆಟ್​ ಮಂಡನೆ ಇಂದು ಬೆಳಗ್ಗೆ 11 ಗಂಟೆಯಿಂದ ನಡೆಯುತ್ತಿದ್ದು, ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನಾ ಭಾಷಣ ಪ್ರಾರಂಭಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಇದು ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಆಗಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕಿದು 11ನೇ ಬಜೆಟ್‌ ಆಗಿದೆ. ಜನಸಾಮಾನ್ಯರ ನಿರೀಕ್ಷೆಗಳು ಹಲವು ಇವೆ. ಪ್ರಸ್ತುತ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಘೋಷಿಸುವ ಅಂಶಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ..

Keshava prasad B

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ 6ನೇ ಬಜೆಟ್‌, ಮೋದಿ ಸರ್ಕಾರಕ್ಕೆ 11ನೇ ಕೇಂದ್ರ ಬಜೆಟ್‌ ಮಂಡನೆ

Keshava prasad B

ಡಿಜಿಟಲ್‌ ಬಜೆಟ್‌ ಪ್ರತಿಯನ್ನು ಸಾಂಪ್ರದಾಯಿಕ ಬಹಿ-ಖಾತಾ ಶೈಲಿಯಲ್ಲಿ ತೆಗೆದುಕೊಂಡು ಸಂಸತ್ತಿಗೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.‌ ಈ ಸಲವೂ ಪೇಪರ್‌ಲೆಸ್‌ ಬಜೆಟ್‌ ಆಗಿರಲಿದೆ.

Keshava prasad B

ಮಧ್ಯಮ ವರ್ಗದ ತೆರಿಗೆದಾರರು, ವೇತನದಾರರಿಗೆ ಆದಾಯ ತೆರಿಗೆಯ ದರ ಇಳಿಕೆ ನಿರೀಕ್ಷೆ

Keshava prasad B

2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪೂರ್ಣಪ್ರಮಾಣದ ಬಜೆಟ್‌ ಆಗಿರುವುದರಿಂದ ಗರಿಗೆದರಿದ ನಿರೀಕ್ಷೆ

Keshava prasad B

ಕೇಂದ್ರ ಬಜೆಟ್‌ಗೆ ಮುನ್ನ ಬೆಳಗ್ಗೆ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 257 ಅಂಕ ಏರಿಕೆ, 59,837ಕ್ಕೆ ವೃದ್ಧಿ

Exit mobile version